ಮುಂಬೈ : ಸ್ಯಾಂಡಲ್ವುಡ್ನ ಚಿತ್ರವೊಂದು ಬಾಲಿವುಡ್ ಮಂದಿಯ ಮನ ಸೆಳೆದಿದೆ. ಕನ್ನಡದ ತಿಥಿ ಚಿತ್ರಕ್ಕೆ ಬಾಲಿವುಡ್ ಫರ್ಫೆಕ್ಷನಿಷ್ಟ್ ಆಮೀರ್ ಖಾನ್ ಫಿದಾ ಆಗಿದ್ದಾರೆ. ಟ್ವಿಟರ್ನಲ್ಲಿ ಆಮೀರ್ ಖಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಪ್ಪಟ ದೇಸಿ ಸೊಬಗಿನ ಈ ಚಿತ್ರ ಎಲ್ಲಾ ವರ್ಗದ ಪ್ರೇಕ್ಷಕರನ್ನೂ ಸೆಳೆದಿತ್ತು. ಕನ್ನಡಿಗರಂತೂ ಈ ಚಿತ್ರವನ್ನು ಖುಷಿಯಿಂದ ನೋಡಿ ಮೆಚ್ಚಿದ್ದರು. ಇದೀಗ ಈ ಸಾಲಿಗೆ ಬಾಲಿವುಡ್ ಮಂದಿಯೂ ಸೇರಿದ್ದಾರೆ. ಇಂತಹ ಸದಭಿರುಚಿಯ ಚಿತ್ರಗಳು ಭಾರತೀಯ ಚಿತ್ರರಂಗಕ್ಕೆ ಅಗತ್ಯ ಎಂದು ಆಮೀರ್ ಖಾನ್ ಟ್ವೀಟ್ ಮಾಡಿದ್ದಾರೆ. ಜೊತೆಗೆ ಚಿತ್ರದ ಟ್ರೇಲರನ್ನು ಕೂಡಾ ಪೋಸ್ಟ್ ಮಾಡಿದ್ದಾರೆ.
It’s a Kanada film, with subtitles in English. It’s an absolute MUST WATCH! It’s releasing in theatres on 3rd June. (2/4)
— Aamir Khan (@aamir_khan) May 30, 2016
Hey guys, just saw one of the most amazing films I have seen in a long time! Thithi. (1/4)https://t.co/xc0LTGcW6c
— Aamir Khan (@aamir_khan) May 30, 2016
ಅಂತಾರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳು ತಿಥಿ ಮುಡಿಗೇರಿವೆ. ಎಲ್ಲಾ ಚಿತ್ರರಂಗದಿಂದಲೂ ಚಿತ್ರಕ್ಕೆ ಮೆಚ್ಚುಗೆ ಸುರಿಮಳೆಗಳು ಬರುತ್ತಿವೆ. ಇದೇ ಯಶಸ್ಸಿನ ಖುಷಿಯಲ್ಲಿರುವ ಚಿತ್ರತಂಡ ಈ ತಿಥಿಯನ್ನು ಮತ್ತೆ ರಿಲೀಸ್ ಮಾಡಲು ನಿರ್ಧರಿಸಿದೆ. ಜೂನ್ 3ಕ್ಕೆ ಮತ್ತೆ ತಿಥಿ ದೇಶಾದ್ಯಂತ ತೆರೆ ಕಾಣುತ್ತಿದೆ.