Wednesday , January 24 2018
Home / Sandalwood / ತಿಥಿ ಚಿತ್ರಕ್ಕೆ ಆಮೀರ್ ಖಾನ್ ಫಿದಾ
Buy Bitcoin at CEX.IO

ತಿಥಿ ಚಿತ್ರಕ್ಕೆ ಆಮೀರ್ ಖಾನ್ ಫಿದಾ

amir khanಮುಂಬೈ : ಸ್ಯಾಂಡಲ್‍ವುಡ್‍ನ ಚಿತ್ರವೊಂದು ಬಾಲಿವುಡ್ ಮಂದಿಯ ಮನ ಸೆಳೆದಿದೆ. ಕನ್ನಡದ ತಿಥಿ ಚಿತ್ರಕ್ಕೆ ಬಾಲಿವುಡ್ ಫರ್ಫೆಕ್ಷನಿಷ್ಟ್ ಆಮೀರ್ ಖಾನ್ ಫಿದಾ ಆಗಿದ್ದಾರೆ. ಟ್ವಿಟರ್‍ನಲ್ಲಿ ಆಮೀರ್ ಖಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

thitiಅಪ್ಪಟ ದೇಸಿ ಸೊಬಗಿನ ಈ ಚಿತ್ರ ಎಲ್ಲಾ ವರ್ಗದ ಪ್ರೇಕ್ಷಕರನ್ನೂ ಸೆಳೆದಿತ್ತು. ಕನ್ನಡಿಗರಂತೂ ಈ ಚಿತ್ರವನ್ನು ಖುಷಿಯಿಂದ ನೋಡಿ ಮೆಚ್ಚಿದ್ದರು. ಇದೀಗ ಈ ಸಾಲಿಗೆ ಬಾಲಿವುಡ್ ಮಂದಿಯೂ ಸೇರಿದ್ದಾರೆ. ಇಂತಹ ಸದಭಿರುಚಿಯ ಚಿತ್ರಗಳು ಭಾರತೀಯ ಚಿತ್ರರಂಗಕ್ಕೆ ಅಗತ್ಯ ಎಂದು ಆಮೀರ್ ಖಾನ್ ಟ್ವೀಟ್ ಮಾಡಿದ್ದಾರೆ. ಜೊತೆಗೆ ಚಿತ್ರದ ಟ್ರೇಲರನ್ನು ಕೂಡಾ ಪೋಸ್ಟ್ ಮಾಡಿದ್ದಾರೆ.


ಅಂತಾರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳು ತಿಥಿ ಮುಡಿಗೇರಿವೆ. ಎಲ್ಲಾ ಚಿತ್ರರಂಗದಿಂದಲೂ ಚಿತ್ರಕ್ಕೆ ಮೆಚ್ಚುಗೆ ಸುರಿಮಳೆಗಳು ಬರುತ್ತಿವೆ. ಇದೇ ಯಶಸ್ಸಿನ ಖುಷಿಯಲ್ಲಿರುವ ಚಿತ್ರತಂಡ ಈ ತಿಥಿಯನ್ನು ಮತ್ತೆ ರಿಲೀಸ್ ಮಾಡಲು ನಿರ್ಧರಿಸಿದೆ. ಜೂನ್ 3ಕ್ಕೆ ಮತ್ತೆ ತಿಥಿ ದೇಶಾದ್ಯಂತ ತೆರೆ ಕಾಣುತ್ತಿದೆ.

CEX.IO Bitcoin Exchange

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!