Monday , September 24 2018
ಕೇಳ್ರಪ್ಪೋ ಕೇಳಿ
Home / News NOW / ಅನುಪಮಾ ಶೆಣೈ ರಾಜೀನಾಮೆ ಅಂಗೀಕಾರ

ಅನುಪಮಾ ಶೆಣೈ ರಾಜೀನಾಮೆ ಅಂಗೀಕಾರ

ANUPAMA SHENOYತೀವ್ರ ಕುತೂಹಲ ಕೆರಳಿಸಿದ್ದ ಬಳ್ಳಾರಿ ಕೂಡ್ಲಿಗಿ ಡಿವೈಎಸ್‍ಪಿ ಅನುಪಮಾ ಶೆಣೈ ರಾಜೀನಾಮೆ ಪ್ರಕರಣಕ್ಕೆ ತೆರೆ ಬಿದ್ದಿದೆ. ಮೂರು ದಿನಗಳ ಬೆಳವಣಿಗೆಗಳ ಬಳಿಕ ಅನುಪಮಾ ರಾಜೀನಾಮೆಯನ್ನು ಸರ್ಕಾರ ಅಂಗೀಕರಿಸಿದೆ. ಗುರುವಾರ ರಾತ್ರಿ ಈ ಆದೇಶ ಹೊರಬಿದ್ದಿದೆ.
anupama
ರಾಜೀನಾಮೆ ಬಳಿಕ ಅಜ್ಞಾತ ಸ್ಥಳದಲ್ಲಿದ್ದ ಅನುಪಮಾ ಗುರುವಾರ ಬೆಳಗ್ಗೆ ಸಹೋದರ ಅಚ್ಯುತ ಶೆಣೈ ಜೊತೆ ಕೂಡ್ಲಿಗಿಗೆ ಬಂದಿದ್ದರು. ಆದರೆ, ಇಲ್ಲಿ ಯಾರೊಬ್ಬರ ಭೇಟಿಯನ್ನೂ ಮಾಡದ ಅನುಪಮಾ ಮಧ್ಯಾಹ್ನದ ವೇಳೆಗೆ ಇಲ್ಲಿಂದ ತೆರಳಿದರು. ಇದಕ್ಕಿಂತ ಮೊದಲು ಮೇಲಾಧಿಕಾರಿಗಳ ಆದೇಶದ ಹಿನ್ನೆಲೆಯಲ್ಲಿ ಹೆಚ್ಚುವರಿ ಡಿವೈಎಸ್‍ಪಿ ಆರ್.ಎಸ್.ಪಾಟೀಲ್ ಕೂಡಾ ಅನುಪಮಾ ಭೇಟಿಗೆ ಬಂದಿದ್ದರಾದರೂ ಅನುಪಮಾ ಯಾರನ್ನೂ ಭೇಟಿ ಮಾಡಲಿಲ್ಲ. ಮಧ್ಯಾಹ್ನದ ವೇಳೆಗೆ ಮನೆಯಿಂದ ಹೊರಬಂದ ಅನುಪಮಾ ರಾಜೀನಾಮೆ ನಿರ್ಧಾರ ಅಚಲ ಎಂದು ಹೇಳಿ ಭಟ್ಕಳದ ತಮ್ಮ ಸಂಬಂಧಿಕ ಮನೆಗೆ ತೆರಳಿದರು.

ಇನ್ನು, ಇಷ್ಟು ದಿನ ತನ್ನ ಹೆಸರಲ್ಲಿ ಬರುತ್ತಿದ್ದ ಫೇಸ್‍ಬುಕ್ ನನ್ನದಲ್ಲ. ಈ ಸ್ಟೇಟಸ್ ಅಪ್‍ಡೇಟ್ ಮಾಡುತ್ತಿದ್ದದ್ದು ಯಾರು ಎಂದೂ ಗೊತ್ತಿಲ್ಲ ಎಂದೂ ಅನುಪಮಾ ಸ್ಪಷ್ಟಪಡಿಸಿದ್ದಾರೆ.

About sudina

Check Also

ಬಂಟ್ವಾಳ : ವಿವಿಧ ಸುದ್ದಿಗಳ ಒಂದು ನೋಟ

ಸೋಣ ಅಮಾವಾಸ್ಯೆ ತೀರ್ಥಸ್ನಾನ : ಭೂಲೋಕದ ಕೈಲಾಸವೆಂದೇ ಪ್ರಖ್ಯಾತವಾದ ನರಹರಿ ಪರ್ವತದಲ್ಲಿ ಸೆಪ್ಟೆಂಬರ್ 9ರ ಭಾನುವಾರ ಬೆಳಗ್ಗೆ 5 ಗಂಟೆಯಿಂದ …

Leave a Reply

Your email address will not be published. Required fields are marked *

error: Content is protected !!