Friday , April 20 2018
Home / Film News / Bollywood / ಸ್ಯಾಂಡಲ್‍ವುಡ್ ಆಯ್ತು, ಈಗ ಬಾಲಿವುಡ್‍ನಲ್ಲಿ ಸೆನ್ಸಾರ್ ಗಲಾಟೆ

ಸ್ಯಾಂಡಲ್‍ವುಡ್ ಆಯ್ತು, ಈಗ ಬಾಲಿವುಡ್‍ನಲ್ಲಿ ಸೆನ್ಸಾರ್ ಗಲಾಟೆ

udta-punjabಮುಂಬೈ : ಭಾಷೆ ಗೊತ್ತಿಲ್ಲದ ಸೆನ್ಸಾರ್ ಬೋರ್ಡ್ ನಿರ್ದೇಶಕಿ ಕನ್ನಡ ಚಿತ್ರಗಳಿಗೆ ಬೇಕಾಬಿಟ್ಟಿ ಕಟ್ ಹೇಳುತ್ತಿದ್ದಾರೆ ಎಂಬ ಕೂಗು ಬಹಳ ಹಳೆಯದು. ಕಿರಿಗೂರಿನ ಗಯ್ಯಾಳಿಗಳು ಚಿತ್ರದ `ಕಟ್’ ಬಳಿಕ ಈ ಕೂಗು ಇನ್ನಷ್ಟು ಬಲವಾಗಿತ್ತು. ಇದೀಗ ಇದೇ ಸಮಸ್ಯೆ ಬಾಲಿವುಡ್‍ನಲ್ಲಿ ಕೇಳಿಸಲು ಆರಂಭಿಸಿದೆ.

ಬಾಲಿವುಡ್‍ನ ಅನುರಾಗ್ ಕಶ್ಯಪ್ ನಿರ್ದೇಶನದ `ಉಡ್ತಾ ಪಂಜಾಬ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿ 89 ಕಟ್ ಹೇಳಿದೆ… ಜೊತೆಗೆ, ಟೈಟಲ್‍ನಲ್ಲಿರುವ ಪಂಜಾಬ್ ಎಂಬ ಪದ ತೆಗೆಯುವಂತೆಯೂ ಮಂಡಳಿ ಸೂಚನೆ ನೀಡಿದೆ. ಇದು ಚಿತ್ರತಂಡಕ್ಕೆ ಶಾಕ್ ತಂದಿದೆ. ಇದು ಡ್ರಗ್ ಮಾಫಿಯಾ ಸುತ್ತ ಹೆಣೆದಿರುವ ಕತೆ… ಆದರೆ, ಸೆನ್ಸಾರ್ ಮಂಡಳಿ ನಿರ್ಧಾರದ ಹಿಂದೆ ರಾಜಕೀಯ ಉದ್ದೇಶ ಇದೆ ಎನ್ನುವುದು ನಿರ್ದೇಶಕ ಅನುರಾಗ್ ಆರೋಪ. ಅಲ್ಲದೆ, ಸೆನ್ಸಾರ್ ಮಂಡಳಿ ವಿರುದ್ಧ ಹೈಕೋರ್ಟ್ ಮೊರೆ ಹೋಗುವುದಕ್ಕೂ ಚಿತ್ರತಂಡ ನಿರ್ಧರಿಸಿದೆ. ಅದೂ ಅಲ್ಲದೆ, ಸೆನ್ಸಾರ್ ಮಂಡಳಿ ಈ ನಡೆ ವಿರುದ್ಧ ಇಡೀ ಬಾಲಿವುಡ್ ಮಂದಿ ತಿರುಗಿ ಬಿದ್ದಿದ್ದಾರೆ. ದಿಗ್ಗಜರೆಲ್ಲಾ ಉಡ್ತಾ ಪಂಜಾಬ್ ಚಿತ್ರದ ಬೆಂಬಲಕ್ಕೆ ನಿಂತಿದ್ದಾರೆ.

ಶಾಹಿದ್ ಕಪೂರ್, ಕರೀನಾ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ ಈ ಚಿತ್ರ ಇದೇ ತಿಂಗಳು ರಿಲೀಸ್ ಆಗಬೇಕಿತ್ತು. ಆದರೆ, ಈ ವಿವಾದದಿಂದ ಚಿತ್ರ ಬಿಡುಗಡೆ ಮುಂದಕ್ಕೆ ಹೋಗಿದೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!