ಹೈದರಾಬಾದ್ : ಸ್ಟಾರ್ ಡೈರೆಕ್ಷರ್ ರಾಜಮೌಳಿ `ಬಾಹುಬಲಿ’ ಚಿತ್ರ ಸೂಪರ್ ಡೂಪರ್ ಹಿಟ್ ಆದ ಬಳಿಕ ಸದ್ಯ ಬಾಹುಬಲಿ 2 ಚಿತ್ರದ ಶೂಟಿಂಗ್ ಶುರುವಾಗಿದೆ. ಈ ಚಿತ್ರಕ್ಕಾಗಿ ಮಿಲ್ಕಿ ಬ್ಯೂಟಿ ತಮನ್ನಾ ವಿಭಿನ್ನ ರೀತಿಯಲ್ಲಿ ರೆಡಿಯಾಗುತ್ತಿದ್ದಾರೆ.
ಅದೂ ಅಲ್ಲದೆ, ತಮನ್ನಾ ಈ ಚಿತ್ರದಲ್ಲಿ ಒಂದಷ್ಟು ಆ್ಯಕ್ಷನ್ ಸೀಕ್ವೆನ್ಸ್ನಲ್ಲೂ ಕಾಣಿಸಿಕೊಳ್ಳಲಿದ್ದು, ಇದಕ್ಕಾಗಿ ಭರ್ಜರಿ ತಯಾರಿಯೂ ನಡೆಯುತ್ತಿದೆ. ಮುಖ್ಯವಾಗಿ ತಮನ್ನಾ ಕುದುರೆ ಸವಾರಿಯನ್ನೂ ಕಲಿಯುತ್ತಿದ್ದಾರೆ. ಅವಂತಿಕಾ ಎಂಬ ಪಾತ್ರಕ್ಕೆ ತಮನ್ನಾ ಜೀವ ತುಂಬಲಿದ್ದಾರೆ.