Saturday , October 20 2018
ಕೇಳ್ರಪ್ಪೋ ಕೇಳಿ
Home / Sandalwood / ಆಪ್ತಮಿತ್ರರ ನಡುವೆ ಈಗ `ಆಲ್ ಈಸ್ ವೆಲ್’

ಆಪ್ತಮಿತ್ರರ ನಡುವೆ ಈಗ `ಆಲ್ ಈಸ್ ವೆಲ್’

darshan-sudeepಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಪ್ತಮಿತ್ರರು. ಇವರಿಬ್ಬರ ಗೆಳೆತನ ಬಲುಗಟ್ಟಿಯಾಗಿತ್ತು. ಆದರೆ, ಇತ್ತೀಚೆಗೆ ಅದೇನಾಯ್ತೋ ಏನೋ ಈ ಇಬ್ಬರ ಸಂಬಂಧ ಹಳಸಿತ್ತು ಎಂಬ ಮಾತುಗಳು ಗಾಂಧೀನಗರದಲ್ಲಿ ಹರಿದಾಡುತ್ತಿತ್ತು. ಇವರಿಬ್ಬರ ಆಪ್ತರು ಈ ಸುದ್ದಿಯನ್ನು ಅಲ್ಲಗಳೆದಿದ್ದರೂ ಎಲ್ಲೋ ಒಂದು ಮೂಲೆಯಲ್ಲಿ ಈ ಸುದ್ದಿ ಸತ್ಯವೇನೋ ಎಂಬಷ್ಟರ ಮಟ್ಟಿಗೆ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಈಗ ಈ ಸುದ್ದಿಗೆ ಉತ್ತರ ಸಿಕ್ಕಿದೆ. ದರ್ಶನ್ ಮತ್ತು ಸುದೀಪ್ ಎಂದಿನಂತೆ ಚೆನ್ನಾಗಿಯೇ ಸ್ನೇಹದಿಂದಲೇ ಇದ್ದಾರೆ ಎಂಬುದು ಸ್ಪಷ್ಟವಾಗಿದೆ. ಸ್ವತಃ ಸುದೀಪ್ ಅವರೇ ಇದಕ್ಕೆ ಉತ್ತರ ಕೊಟ್ಟಿದ್ದಾರೆ. ದರ್ಶನ್ ಅಭಿನಯದ ಜಗ್ಗುದಾದಾ ಚಿತ್ರಕ್ಕೆ ಸುದೀಪ್ ಶುಭಹಾರೈಸಿದ್ದಾರೆ.

sudeep tweet

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!