Monday , June 25 2018
ಕೇಳ್ರಪ್ಪೋ ಕೇಳಿ
Home / Sudina / ಕೊಡದಿಂದ ಸಿಕ್ತು ಕೊನೆಗೂ ಮುಕ್ತಿ…!

ಕೊಡದಿಂದ ಸಿಕ್ತು ಕೊನೆಗೂ ಮುಕ್ತಿ…!

dog 4ಬೆಂಗಳೂರು : ಆಕಸ್ಮಿಕವಾಗಿ ತುಂಡಾದ ಕೊಡದೊಳಗೆ ಕೊರಳೊಡ್ಡಿದ್ದ ನಾಯಿಗೆ ಈಗ ನರಕದಿಂದ ಮುಕ್ತಿ ಸಿಕ್ಕಿದೆ. 10 ದಿನಗಳಿಂದ ಈ ನಾಯಿ ಕೊರಳಲ್ಲಿ ಸಿಲುಕಿಕೊಂಡಿದ್ದ ಕೊಡದಿಂದ ನರಕಯಾತನೆ ಅನುಭವಿಸಿತ್ತು. ವಿದ್ಯಾರಣ್ಯಪುರದ 11 ಕ್ರಾಸ್ ನಲ್ಲಿ ಬೀದಿನಾಯಿ ಈ ರೀತಿ ದಿನಾ ಸಂಕಷ್ಟ ಅನುಭವಿಸುತ್ತಿತ್ತು. dog 3 dog 2 dog 1ಇದೀಗ ಈ ಕಷ್ಟದಿಂದ ಈ ನಾಯಿಗೆ ಮುಕ್ತಿ ಸಿಕ್ಕಿದೆ. 10 ದಿನಗಳ ಬಳಿಕ ವಿಷಯ ತಿಳಿದ ಬಿಬಿಎಂಪಿ ಅರಣ್ಯ ಘಟಕ ಯಶಸ್ವಿಯಾಗಿ ನಾಯಿ ಕೊರಳಲ್ಲಿ ಸಿಲುಕಿಕೊಂಡಿದ್ದ ಕೊಡವನ್ನು ಬೇರ್ಪಡಿಸಿದೆ. ಈ ಹಿಂದೆ ರಾಜಸ್ಥಾನದಲ್ಲಿ ಚಿರತೆಯೊಂದು ಇದೇ ರೀತಿ ಕಷ್ಟಕ್ಕೆ ಸಿಲುಕಿಕೊಂಡಿತ್ತು. ಬಾಯಾರಿಕೆ ಆಯಿತೆಂದು ಕೊಡಕ್ಕೆ ಕೊರಳೊಡ್ಡಿದ್ದ ಚಿರತೆಯ ಕೊರಳಲ್ಲಿ ಈ ಕೊಡ ಸಿಲುಕಿಕೊಂಡಿತ್ತು. ಇದಾದ ಬಳಿಕ ಅರಣ್ಯಾಧಿಕಾರಿಗಳು ಈ ಚಿರತೆಯ ಕೊರಳಿಗೆ ಸಿಕ್ಕಿದ್ದ ಕೊಡವನ್ನು ತೆಗೆದು ಚಿರತೆಯನ್ನು ರಕ್ಷಿಸಿದ್ದರು.

About sudina

Leave a Reply

Your email address will not be published. Required fields are marked *

error: Content is protected !!