Wednesday , March 27 2019
ಕೇಳ್ರಪ್ಪೋ ಕೇಳಿ
Home / News NOW / ಜೆಡಿಎಸ್ ರೆಬಲ್ ಶಾಸಕರು ಅಮಾನತು : ಸಭೆಗೆ ಎಚ್‍ಡಿಕೆ ಗೈರು…!

ಜೆಡಿಎಸ್ ರೆಬಲ್ ಶಾಸಕರು ಅಮಾನತು : ಸಭೆಗೆ ಎಚ್‍ಡಿಕೆ ಗೈರು…!

jds 2ಬೆಂಗಳೂರು : ಪರಿಷತ್ ಮತ್ತು ರಾಜ್ಯಸಭಾ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿದ 8 ಮಂದಿ ಬಂಡಾಯ ಶಾಸಕರನ್ನು ಜೆಡಿಎಸ್ ಅಮಾನತು ಮಾಡಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜಮೀರ್ ಅಹಮದ್, ಇಕ್ಬಾಲ್ ಅನ್ಸಾರಿ, ಚಲುವರಾಯಸ್ವಾಮಿ, ಎಚ್.ಸಿ.ಬಾಲಕೃಷ್ಣ ,ರಮೇಶ್ ಬಂಡಿಸಿದ್ದೇಗೌಡ, ಅಖಂಡ ಶ್ರೀನಿವಾಸಮೂರ್ತಿ, ಗೋಪಾಲಯ್ಯ ,ಭೀಮಾ ನಾಯ್ಕ ಅಮಾನತಾದ ಶಾಸಕರು. ಈ ಎಂಟು ಮಂದಿ ವಿಪ್ ಉಲ್ಲಂಘಿಸಿದ್ದೇ ಅಲ್ಲದೆ ವರಿಷ್ಠರಿಗೆ ಬಹಿರಂಗವಾಗಿಯೇ ಸವಾಲು ಹಾಕಿದ್ದರು..

ಈ ಸಮಾವೇಶದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು, ಒಬ್ಬ ಜಮೀರ್, ಒಬ್ಬ ಅನ್ಸಾರಿ ಹೋದ್ರೆ ಏನಾಯ್ತು ? ಫಾರೂಖ್ ಅವರಿಬ್ಬರ ಸ್ಥಾನ ತುಂಬಿದ್ದಾರೆ ಅಂತ ಹೇಳಿದರು. ಜೊತೆಗೆ, ಇದೇ  21 ರಿಂದ ಪಕ್ಷ ಸಂಘಟನೆಗೆ ನಾನು ಹೋರಾಡುತ್ತೇನೆ ಎಂದೂ ಅವರು ತಿಳಿಸಿದರು.
jds
ಇನ್ನು, ಜೆಡಿಎಸ್ ಕಾರ್ಯಕರ್ತರು ಈ ಎಂಟು ಮಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಷ್ಠಾವಂತ ಕಾರ್ಯಕರ್ತರ ಸಮಾವೇಶದಲ್ಲಿ ಬಿಬಿಎಂಪಿ ಉಪ ಮೇಯರ್ ಹೇಮಲತಾ ಗೋಪಾಲಯ್ಯ ಫೋಟೋವನ್ನು ಹರಿದು ಕಾರ್ಯಕರ್ತರು ತಮ್ಮ ಸಿಟ್ಟನ್ನು ತೋರಿಸಿದ್ದಾರೆ. ಹೇಮಲತಾ ಮಹಾಲಕ್ಷ್ಮಿ ಲೇಔಟ್ ಜೆಡಿಎಸ್ ಶಾಸಕ ಗೋಪಾಲಯ್ಯ ಪತ್ನಿ. ಗೋಪಾಲಯ್ಯ ಕೂಡಾ ಅಮಾನಾತಾದ ಶಾಸಕರಲ್ಲಿ ಒಬ್ಬರು.
jds thithi
ಇನ್ನೊಂದ್ಕಡೆ ಮಂಡ್ಯದಲ್ಲಿ ಚೆಲುವರಾಯಸ್ವಾಮಿ ಮತ್ತು ರಮೇಶ್ ಬಂಡಿಸಿದ್ದೇಗೌಡ ವಿರುದ್ಧ ಸಿಟ್ಟಾಗಿರುವ ಕಾರ್ಯಕರ್ತರು ಈ ಇಬ್ಬರ ತಿಥಿ ಕಾರ್ಡ್ ಮುದ್ರಿಸಿದ್ದಾರೆ. ಈ ಕಾರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ…

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!