Tuesday , October 16 2018
ಕೇಳ್ರಪ್ಪೋ ಕೇಳಿ
Home / Sandalwood / `ತಿಥಿ’ನಕಲಿ ಆವೃತ್ತಿ : ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಚಿತ್ರ ಪ್ರದರ್ಶನ

`ತಿಥಿ’ನಕಲಿ ಆವೃತ್ತಿ : ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಚಿತ್ರ ಪ್ರದರ್ಶನ

thitiಬೆಂಗಳೂರು : ಸಿನಿಮಾ ಮಂದಿರಗಳಲ್ಲಿ ಈಗಲೂ ತಿಥಿ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಅಷ್ಟರಲ್ಲೇ ಸಿನಿಮಾ ನಕಲಿ ಅವೃತ್ತಿ ಹರಿದಾಡುತ್ತಿದೆ. ಕೆಎಸ್‍ಆರ್‍ಟಿಸಿ ಬಸ್ ಒಂದರಲ್ಲಿ ಈ ಸಿನಿಮಾವನ್ನು ಹಾಕಲಾಗಿದ್ದು ಇದನ್ನು ಕಂಡ ನಟಿ, ಮಾಡೆಲ್ ವಿಸ್ಮಯ ಗೌಡ ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

`ಮಾರ್ಚ್ 31ರಂದು ನಾನು ಬೆಂಗಳೂರಿನಿಂದ ಮೈಸೂರಿಗೆ ಕೆಎಸ್‍ಆರ್‍ಟಿಸಿ ಬಸ್ಸಿನಲ್ಲಿ ಹೋಗುತ್ತಿದ್ದೆ. ಈ ವೇಳೆ ಬಸ್‍ನಲ್ಲಿ ತಿಥಿ ಸಿನಿಮಾ ಹಾಕಿರೋದು ನೋಡಿ ಆಶ್ಚರ್ಯವಾಯಿತು. ಕೂಡಲೇ ನಾನು ಈ ಬಗ್ಗೆ ಬಸ್ ಕಂಡಕ್ಟರ್ ಹಾಗೂ ಡ್ರೈವರನ್ನು ವಿಚಾರಿಸಿದೆ. ಆದರೆ ಈ ಬಗ್ಗೆ ಹೇಳೋದಕ್ಕೆ ನಿರಾಕರಿಸಿದರು. ನಾನು ಬಸ್‍ನ ರಿಜಿಸ್ಟ್ರೇಷನ್ ನಂಬರ್, ಬಸ್‍ನಲ್ಲಿ ಸಿನಿಮಾ ಹಾಕಿರೋ ಕೆಲ ಫೋಟೋಗಳನ್ನು ತೆಗೆದೆ’ ಎಂದು ವಿಸ್ಮಯ ಗೌಡ ಹೇಳಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ತಿಥಿ ಸಿನಿಮಾದ ನಿರ್ಮಾಪಕ ಪ್ರತಾಪ್ ರೆಡ್ಡಿ, `ಸಿನಿಮಾದ ನಕಲಿ ಆವೃತ್ತಿ ಹೇಗೆ ಬಂದಿದೆಯೋ ನಮಗೆ ಗೊತ್ತಿಲ್ಲ. ಈ ಬಗ್ಗೆ ನಾವು ಸಾರಿಗೆ ಇಲಾಖೆಯನ್ನು ಪ್ರಶ್ನಿಸುವುದಾಗಿ ತಿಳಿಸಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!