Monday , June 25 2018
ಕೇಳ್ರಪ್ಪೋ ಕೇಳಿ
Home / News NOW / ಕುಂದಾಪುರದ ತ್ರಾಸಿಯಲ್ಲಿ ಭೀಕರ ರಸ್ತೆ ಅಫಘಾತ : 8 ಮಂದಿ ಶಾಲಾ ಮಕ್ಕಳ ದುರ್ಮರಣ

ಕುಂದಾಪುರದ ತ್ರಾಸಿಯಲ್ಲಿ ಭೀಕರ ರಸ್ತೆ ಅಫಘಾತ : 8 ಮಂದಿ ಶಾಲಾ ಮಕ್ಕಳ ದುರ್ಮರಣ

udupi accident 7ಕುಂದಾಪುರ: ಶಾಲಾ ವ್ಯಾನ್‍ಗೆ ಬಸ್ ಡಿಕ್ಕಿಯಾದ ಪರಿಣಾಮ 8 ಮಂದಿ ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕುಂದಾಪುರದ ತ್ರಾಸಿ ಬಳಿ ನಡೆದಿದೆ. ಮೃತ ಮಕ್ಕಳು ತ್ರಾಸಿಯ ಡಾನ್ ಬೊಸ್ಕೊ ಶಾಲೆಯ ವಿದ್ಯಾರ್ಥಿಗಳು. ಇವರನ್ನು ಕರೆದುಕೊಂಡು ಹೋಗುತ್ತಿದ್ದ ಓಮ್ನಿ ವ್ಯಾನ್‍ಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಕೆಲವು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಕೆಲವರ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ದುರಂತಕ್ಕೀಡಾದ ಕಾರಿನಲ್ಲಿ ಶಿಕ್ಷಕಿ ಸೇರಿ 16 ಮಂದಿ ಇದ್ದರು ಎಂದು ಗೊತ್ತಾಗಿದೆ.
udupi accident 8 udupi accident 6 udupi accident 4 udupi accident 3
ಮೃತ ಮಕ್ಕಳನ್ನು ಕ್ಲಾರಿಷಾ, ಸೆಲಿಸ್ಟಾ, ಆನ್ಸಿಟಾ, ಅಲ್ವಿಟಾ, ರಾಯಿಸ್ಟನ್, ಡೆಲ್ವಿನ್ ಮತ್ತು ಅನನ್ಯ ಎಂದು ಗುರುತಿಸಲಾಗಿದೆ. ಮೃತಪಟ್ಟವರಲ್ಲಿ ಹೆಚ್ಚಿನವರು ತಲ್ಲೂರು ಹೆಮ್ಮಾಡಿ ಪರಿಸರದವರು ಎಂದು ಗೊತ್ತಾಗಿದೆ. ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದರೆ ಬಾಕಿ ಉಳಿದ ಆರು ಮಂದಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಮೃತ ಮಕ್ಕಳಲ್ಲಿ ಇಬ್ಬರು ಬಾಲಕರು ಸೇರಿದ್ದಾರೆ. ಘಟನೆ ಬಳಿಕ ಬಸ್ ಚಾಲಕ ಮಂಜು ಮತ್ತು ನಿರ್ವಹಕ ಶಂಕರ್‍ನನ್ನು ಗಂಗೊಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

About sudina

Check Also

ಬಂಟ್ವಾಳ : ತಾಲೂಕಿನ ವಿವಿಧ ಸುದ್ದಿಗಳ ಒಂದು ನೋಟ

ರೈಲಿನಡಿಗೆ ಬಿದ್ದು ಸಾವು : ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ರೈಲಿನಡಿಗೆ ಬಿದ್ದು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಅಮೆಮಾರ್ …

Leave a Reply

Your email address will not be published. Required fields are marked *

error: Content is protected !!