Wednesday , January 24 2018
Home / Film News / Bollywood / ಸಲ್ಮಾನ್​ ಖಾನ್​ರನ್ನು ಮದುವೆಯಾಗಲು ಬಯಸಿದ್ದ ಆ ಸಪ್ತ ಚೆಲುವೆಯರು
Buy Bitcoin at CEX.IO

ಸಲ್ಮಾನ್​ ಖಾನ್​ರನ್ನು ಮದುವೆಯಾಗಲು ಬಯಸಿದ್ದ ಆ ಸಪ್ತ ಚೆಲುವೆಯರು

ಮುಂಬೈ : ಬಾಲಿವುಡ್ ಮಟ್ಟಿಗೆ ಸಲ್ಮಾನ್ ಖಾನ್ ಇನ್ನೂ ಎಲಿಜಿಬಲ್ ಬ್ಯಾಚ್ಯುಲರ್. ಸಲ್ಲೂ ಮದುವೆ ವಿಚಾರ ಇನ್ಣೂ ಕುತೂಹಲದ ವಸ್ತು. ಇದುವರೆಗೆ ಅವಿವಾಹಿತರಾಗಿಯೇ ಉಳಿದಿರುವ ಸಲ್ಮಾನ್ ಖಾನ್ ಬಾಳಲ್ಲಿ ಅದೆಷ್ಟೋ ಹುಡುಗಿಯರ ಹೆಸರು ಥಳುಕು ಹಾಕಿಕೊಂಡಿತ್ತು. ಕೆಲವು ಹುಡುಗಿಯರ ಹೆಸರು ಮದುವೆಯವರೆಗೂ ಬಂದಿತ್ತು. ಅದರಲ್ಲಿ ಆ ಏಳು ಹೀರೋಯಿನ್ಗಳ ಹೆಸರು ಬಲು ಪ್ರಮುಖವಾಗಿರುವಂತಹದ್ದು.

sangeetaಸಂಗೀತಾ ಬಿಜಲಾನಿ : ಅದು ಸಲ್ಮಾನ್ ತುಂಬಾ ಖ್ಯಾತಿ ಹೊಂದದೇ ಇದ್ದ ಸಮಯ. ಆ ಸಂದರ್ಭದಲ್ಲೇ ಸಂಗೀತಾ ಬಿಜಲಾನಿ ಸಲ್ಲೂ ಪ್ರೀತಿಗೆ ಬಿದ್ದಿದ್ದರು. ಮದುವೆ ಹಂತಕ್ಕೂ ಇವರ ಸಂಬಂಧ ಬಂದಿತ್ತು. ಆದರೆ, ಅದೇನಾಯ್ತೋ ಏನೋ ಸಲ್ಮಾನ್ ಮದುವೆ ಬೇಡ ಅಂದು ಬಿಟ್ಟರು.

somyಸೋಮೈ ಅಲಿ : ಈ ಸುಂದರ ನಟಿಯೊಂದಿಗೂ ಸಲ್ಮಾನ್ ಹೆಸರು ಥಳುಕು ಹಾಕಿಕೊಂಡಿತ್ತು. ಆದರೆ, ಸಲ್ಮಾನ್ ಮಾತ್ರ ತನ್ನ ಪ್ರೀತಿಯನ್ನು ಮದುವೆ ಹಂತಕ್ಕೆ ಕೊಂಡೊಯ್ಯಲು ಮನಸ್ಸು ಮಾಡಲಿಲ್ಲ. ಹೀಗಾಗಿ, ಈ ಸಂಬಂಧ ಅಲ್ಲಿಗೇ ಮುರಿದು ಬಿತ್ತು.

aishಐಶ್ವರ್ಯ : ಖ್ಯಾತಿಯ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಐಶ್ವರ್ಯ ರೈ (ಈಗ ಐಶ್ವರ್ಯ ಬಚ್ಚನ್) ಸಲ್ಮಾನ್ ಖಾನ್ರನ್ನು ಪ್ರೀತಿ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಇಬ್ಬರೂ ಬಲು ಖ್ಯಾತಿ ಹೊಂದಿದ್ದರು. ಆದರೆ, ಅದ್ಯಾಕೋ ಸಲ್ಮಾನ್ ತನ್ನ ಪ್ರಿಯತಮೆಯನ್ನು ಹೆಚ್ಚು ನಂಬಲಿಲ್ಲ. ತನ್ನ ಹಿಂದಿನ ಅನುಭವವೋ ಏನೋ ಸಲ್ಮಾನ್ ಎಲ್ಲವನ್ನೂ ಅನುಮಾನದಿಂದಲೇ ನೋಡುತ್ತಿದ್ದರು. ಇದೇ ಸಂದರ್ಭದಲ್ಲಿ ಐಶ್ವರ್ಯ ವಿವೇಕ್ ಒಬೇರಾಯ್ ಪ್ರೀತಿಯ ತೆಕ್ಕೆಗೆ ಬಿದ್ದಿದ್ದು.

katrina1ಕತ್ರಿನಾ ಕೈಫ್ : ಸಾಲು ಸಾಲು ಚಿತ್ರಗಳ ಸೋಲಿನಿಂದ ಸೋತು ಸುಣ್ಣವಾಗಿದ್ದ ಸಲ್ಮಾನ್ ಖಾನ್ ಬದುಕಿಗೆ ಧೈರ್ಯ ತುಂಬಿದವರು ಕತ್ರಿನಾ. ಬಲು ಕಷ್ಟದ ಸಂದರ್ಭದಲ್ಲಿ ಸಲ್ಲೂ ಜೊತೆಗಿದ್ದವರು ಕತ್ರಿನಾ. ಇವರಿಬ್ಬರು ಮದುವೆಯಾಗುತ್ತಾರೆ ಎಂದೇ ಹೇಳಲಾಗುತ್ತಿತ್ತು. ಆದರೆ, ಬಳಿಕ ಅದೇನಾಯ್ತೋ ಏನೋ ಕತ್ರಿನಾ ಜೊತೆಗಿನ ಸಂಬಂಧವೂ ಮುರಿದು ಬಿತ್ತು. ಕತ್ರಿನಾ ರಣಬೀರ್ ಕಪೂರ್ ಪ್ರೀತಿಯನ್ನು ತೇಲಿದರು.

zarine1ಝರೀನ್ ಖಾನ್ : ವೀರ್ ಚಿತ್ರದ ಮೂಲಕ ಸಲ್ಮಾನ್ ಪರಿಚಯಿಸಿದ ಹುಡುಗಿ ಝರೀನ್. ಕತ್ರಿನಾ ಜೊತೆಗಿನ ಪ್ರೀತಿ ಮುರಿದು ಬಿದ್ದ ಮೇಲೆ ಕತ್ರಿನಾರನ್ನೇ ಹೋಲುವ ಚೆಲುವೆಯನ್ನು ಸಲ್ಮಾನ್ ಕರೆತಂದಿದ್ದರು. ಈ ಹಿಂದೆ ಐಶ್ವರ್ಯರನ್ನು ಹೋಲುವ ಸ್ನೇಹಾ ಉಳ್ಳಾಲ್ರನ್ನು ತಮ್ಮ ‘ಲಕ್ಕಿ’ ಚಿತ್ರದಲ್ಲಿ ಸಲ್ಮಾನ್ ಬಾಲಿವುಡ್ಗೆ ಪರಿಚಯ ಮಾಡಿದ್ದರು.

daisy1ಡೈಸಿ ಷಾ : ಬಾಡಿಗಾರ್ಡ್ ಚಿತ್ರದಲ್ಲಿ ಸ್ನೇಹಿತೆಯ ಪಾರ್ಟ್ ಮಾಡಿ, ಜೈ ಹೋ ಚಿತ್ರದಲ್ಲಿ ಸಲ್ಲೂ ಹೀರೋಯಿನ್ ಆಗಿ ಬಡ್ತಿ ಪಡೆದಿದ್ದ ಡ್ಯಾನ್ಸರ್ ಡೈಸಿ ಷಾ ಹೆಸರು ಕೂಡಾ ಸಲ್ಲೂ ಜೊತೆ ಥಳುಕು ಹಾಕಿಕೊಂಡಿತ್ತು.

iulia1ಲುಲಿಯಾ ವಂತೂರ್ : ರೊಮಾನಿಯಾದ ಈ ನಟಿ ಜೊತೆ ಸಲ್ಮಾನ್ ಮದುವೆ ಆಗಿಯೇ ಹೋಯಿತು ಎಂಬಂತ ಸುದ್ದಿ ಹಬ್ಬಿತ್ತು. ಈಕೆ ಸಲ್ಲೂ ಕುಟುಂಬದವರಿಗೂ ಆಪ್ತವಾಗಿದ್ದರು. ಆದರೆ, ವಿದೇಶಿ ಚೆಲುವೆಯೊಂದಿಗೆ ಬಾಳು ಹಂಚಿಕೊಳ್ಳುವುದಕ್ಕೆ ಸಲ್ಮಾನ್ ಯಾಕೋ ಮನಸ್ಸು ಮಾಡಲಿಲ್ಲ.

CEX.IO Bitcoin Exchange

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!