Wednesday , January 24 2018
Home / Film News / Bollywood / ಮೊದಲ ಫಿಲಂ ಫೇರ್​ ಅವಾರ್ಡ್​ನ ಫೋಟೋಗಳನ್ನು ನೋಡಿದ್ದೀರಾ?
Buy Bitcoin at CEX.IO

ಮೊದಲ ಫಿಲಂ ಫೇರ್​ ಅವಾರ್ಡ್​ನ ಫೋಟೋಗಳನ್ನು ನೋಡಿದ್ದೀರಾ?

ಮುಂಬೈ : 61ನೇ ಫಿಲಂಫೇರ್ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಸಿದ್ಧತೆ ನಡೆಯುತ್ತಿದೆ. ಹಲವು ವರ್ಷಗಳಿಂದ ಇದು ನಡೆಯುತ್ತಿರುವುದರಿಂದ ಈ ಸಮಾರಂಭದ ಬಗ್ಗೆ ವಿಶೇಷ ನಿರೀಕ್ಷೆಗಳು ಏನೂ ಇರುವುದಿಲ್ಲ. ಆದರೆ, ಮೊದಲ ಫಿಲಂಫೇರ್ ಪ್ರಶಸ್ತಿ ಸಮಾರಂಭ ಹೇಗಿತ್ತು ಎನ್ನುವುದೇ ಖುಷಿ. 1954ರಲ್ಲಿ ಫಿಲಂಫೇರ್ ಪ್ರಶಸ್ತಿ ಸಮಾರಂಭ ನಡೆದಿತ್ತು. ಇಂದಿನಷ್ಟೇ ಸಂಭ್ರಮದಿಂದ ಆವತ್ತು ಕೂಡಾ ಈ ಸಮಾರಂಭ ನಡೆದಿತ್ತು. ಹಲವು ನಾಯಕರು ವಿವಿಧ ಹಾಡಿಗೆ ನೃತ್ಯ ಹಾಡಿದ್ದರು. 50 ರಿಂದ 70ರ ದಶಕದ ಫಿಲಂಫೇರ್ ಅವಾರ್ಡ್ ಫಂಕ್ಷನ್ನ ಅಪರೂಪದ ಫೋಟೋಗಳನ್ನು ನಾವು ಈ ಲೇಖನದಲ್ಲಿ ಕೊಟ್ಟಿದ್ದೇವೆ.

ಫಿಲಂ ಫೇರ್ ಹಿನ್ನೆಲೆ

* ಮೊದಲ ಸಮಾರಂಭ : 1954 ಮಾರ್ಚ್ 21

* ಇದಕ್ಕಿದ್ದ ಮೊದಲ ಹೆಸರು : ಕ್ಲಾರ್ ಅವಾರ್ಡ್ (ಟೈಮ್ಸ್ ಆಫ್ ಇಂಡಿಯಾದ ಪ್ರಮುಖ ಸಿನಿ ವಿಮರ್ಶಕ ಕ್ಲಾರ್ ಮೆಂಡೋಸಾ ಅವರು ಇದೇ ವರ್ಷ ವಿಧಿವಶರಾಗಿದ್ದರು. ಹೀಗಾಗಿ, ಅವರ ಸ್ಮರಣಾರ್ಥ ಅವರ ಹೆಸರನ್ನೇ ಇಡಲಾಗಿತ್ತು)

* ಆರಂಭದಲ್ಲಿ ಐದೇ ವಿಭಾಗಗಳಿದ್ದವು : ಉತ್ತಮ ಚಿತ್ರ, ಉತ್ತಮ ನಿರ್ದೇಶನ, ಉತ್ತಮ ನಟ, ಉತ್ತಮ ನಟಿ ಮತ್ತು ಉತ್ತಮ ಸಂಗೀತ ನಿರ್ದೇಶನ. ಬಳಿಕ ಇದಕ್ಕೆ ಉತ್ತಮ ಪೋಷಕ ನಟ ಮತ್ತು ಉತ್ತಮ ಪೋಷಕ ನಟಿ ವಿಭಾಗವನ್ನೂ ಸೇರಿಸಲಾಯಿತು.

* ಮೊದಲ ಪ್ರಶಸ್ತಿ : ಈ ಫಿಲಂಫೇರ್ ಪ್ರಶಸ್ತಿ ಸಮಾರಂಭದಲ್ಲಿ ನೀಡುವ ಪ್ರಶಸ್ತಿಯನ್ನು ವಿನ್ಯಾಸ ಮಾಡಿದವರು ಎನ್.ಜಿ ಪನ್ಸಾರ್. ಟೈಮ್ಸ್ ಆಫ್ ಇಂಡಿಯಾದ ಕಲಾ ನಿರ್ದೇಶಕ ವಾಲ್ಟರ್ ಲಾಂಗ್ಮೀರ್ ಅವರ ನಿರ್ದೇಶನದಲ್ಲಿ ಈ ಸುಂದರ ಪ್ರಶಸ್ತಿ ರೂಪಗೊಂಡಿತ್ತು. ಇದನ್ನು ಕಂಚಿನಲ್ಲಿ ಮಾಡಲಾಗಿತ್ತು. ಬಳಿಕ ಇದನ್ನು ಬೆಳ್ಳಿಯಲ್ಲಿ ಮಾಡಲಾಗುತ್ತಿತ್ತು. 50ನೇ ಫಿಲಂಫೇರ್ ಸಮಾರಂಭದಲ್ಲಿ ಇದನ್ನು ಚಿನ್ನದಲ್ಲಿಯೂ ಮಾಡಲಾಗಿತ್ತು!

film-fare-1 film-fare-2 film-fare-3 film-fare-4 film-fare-5 film-fare-6 film-fare-7 film-fare-8 film-fare-9 film-fare-10 film-fare-11 film-fare-12 film-fare-13 film-fare-14 film-fare-15 film-fare-16 film-fare-17 film-fare-18 film-fare-19 film-fare-20 film-fare-21 film-fare-22image courtesy : daily bhaskar

CEX.IO Bitcoin Exchange

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!