Saturday , February 16 2019
ಕೇಳ್ರಪ್ಪೋ ಕೇಳಿ
Home / Film News / Bollywood / ಸಲ್ಮಾನ್​ ಖಾನ್​ ಮೊದಲ ಗರ್ಲ್​​ಫ್ರೆಂಡ್​​ ಯಾರೆಂದು ಗೊತ್ತಾ?

ಸಲ್ಮಾನ್​ ಖಾನ್​ ಮೊದಲ ಗರ್ಲ್​​ಫ್ರೆಂಡ್​​ ಯಾರೆಂದು ಗೊತ್ತಾ?

salman1ಬಾಲಿವುಡ್ನ ಮೋಸ್ಟ್ ಎಲಿಜಿಬಲ್ ಬ್ಯಾಚ್ಯುಲರ್ ಸಲ್ಮಾನ್ ಖಾನ್ ಲವ್ ಲೈಫ್ ಅಂದರೆ ಒಂದು ದೊಡ್ಡ ಚಿತ್ರದ ಹಾಗೆ. ಸಲ್ಲೂ ಪ್ರೇಮ ಪ್ರಕರಣಗಳು ಸಖತ್ ಇಂಟ್ರಸ್ಟಿಂಗ್. ಒಂದು ಲವ್ ಸ್ಟೋರಿ ಇರುವ ಚಿತ್ರ ಮಾಡುವುದಕ್ಕೆ ಬೇಕಾದ ಎಲ್ಲಾ ಸರಕುಗಳು ಸಲ್ಲೂ ವೈಯಕ್ತಿಕ ಜೀವನದಲ್ಲಿ ಅಡಗಿವೆ. ಸಲ್ಲೂ ಲವ್ ಸ್ಟೋರಿಗಳ ಬಗ್ಗೆ ಬಹುತೇಕ ವಿಚಾರ ಎಲ್ಲರಿಗೂ ಗೊತ್ತಿದೆ. ಆದರೆ, ಯಾರಿಗೂ ಗೊತ್ತಿಲ್ಲದ ಸಲ್ಲೂ ಲೈಫ್ನ ಬಗ್ಗೆ ಪುಸ್ತಕವೊಂದು ಬೆಳಕು ಚೆಲ್ಲಿದೆ. ಇದರಲ್ಲಿ ಸಲ್ಮಾನ್ ಬದುಕಿನ ಅಪರೂಪದ ವಿಚಾರಗಳನ್ನು ಉಲ್ಲೇಖಿಸಿರುವುದಲ್ಲದೆ ಸಲ್ಲೂ ಮೊದಲ ಲವ್ ಸ್ಟೋರಿಯ ಕತೆಯನ್ನೂ ಹೇಳಲಾಗಿದೆ.

ದೆಹಲಿ ಮೂಲದ ಪತ್ರಕರ್ತೆ ಜಿಸಮ್ ಖಾನ್ ಬರೆದಿರುವ ಸಲ್ಲೂ ಜೀವನಚರಿತ್ರೆ ‘ಬಿಯಿಂಗ್ ಸಲ್ಮಾನ್ ಖಾನ್’ ಪುಸ್ತಕದಲ್ಲಿ ಸಲ್ಮಾನ್ ಬದುಕಿನ ಅಪರೂಪದ ವಿಚಾರಗಳನ್ನು ಬೆಳಕು ಚೆಲ್ಲಲಾಗಿದೆ. ಇದರಲ್ಲಿ ಪ್ರಮುಖವಾಗಿರುವಂತಹದ್ದು ಸಲ್ಮಾನ್ ಮೊದಲ ಲವ್ ಸ್ಟೋರಿ. ಬಹುತೇಕರಿಗೆ ಈ ಲವ್ ಸ್ಟೋರಿ ಗೊತ್ತೇ ಇಲ್ಲ. ಸಲ್ಮಾನ್ ಮೊದಲ ಲವರ್ ಮತ್ತು ಈ ಲವ್ ಸ್ಟೋರಿಯ ಕೆಲ ಘಟನಾವಳಿಗಳ ಬಗ್ಗೆ ಬಾಲಿವುಡ್ ಮಂದಿ ಸೇರಿದಂತೆ ಅಷ್ಟಾಗಿ ಯಾರಿಗೂ ಗೊತ್ತಿಲ್ಲ.

ಯಾರವಳು? : ಇಷ್ಟು ಹೇಳಿದ ಮೇಲೆ ನಿಮಗೂ ಸಲ್ಮಾನ್ ಮೊದಲ ಲವರ್ ಬಗ್ಗೆ ಕುತೂಹಲ ಇರಬಹುದು. ನಿಮ್ಮ ಆ ಕುತೂಹಲವನ್ನು ನಾವು ತಣಿಸುತ್ತೇವೆ. ಸಲ್ಮಾನ್ ಮನಸ್ಸು ಕದ್ದ ಆ ಚೋರ ಚಿತ್ತ ಚೋರಿಯ ಹೆಸರು ಶಹೀನ್ ಜಾಫ್ರಿ. ಬ್ಲ್ಯಾಕ್ ಆಂಡ್ ವೈಟ್ ಜಮಾನಾದ ಬಾಲಿವುಡ್ನ ಹಿರಿಯ ನಟ ಅಶೋಕ್ ಕುಮಾರ್ ಅವರ ಮೊಮ್ಮಗಳು ಈಕೆ. ಶಹೀನ್ ಮಾಡೆಲ್. ಈ ಸುಂದರಿಯ ಸೌಂದರ್ಯಕ್ಕೆ ಸಲ್ಲು ಮರುಳಾಗಿದ್ದರು. ಡೇಟಿಂಗ್ ಕೂಡಾ ಶುರುವಾಗಿತ್ತು. ಆಗ ಸಲ್ಮಾನ್ ವಯಸ್ಸು ಬರೀ 19! ಸಲ್ಮಾನ್ ತನ್ನ ಕೆಂಪು ಬಣ್ಣದ ಸ್ಫೋರ್ಟ್ಸ್ ಕಾರಿನೊಂದಿಗೆ ಸದಾ ಶಹೀನ್ ಕಾಲೇಜಿನ ಮುಂದೆ ಹೋಗಿ ಗಂಟೆಗಟ್ಟಳೆ ಅವರಿಗಾಗಿ ಕಾಯುತ್ತಿದ್ದರು.

ಇನ್ನೊಂದು ಪುಸ್ತಕ ‘ಹಾಲ್ ಆಫ್ ಫೇಮ್ : ಸಲ್ಮಾನ್ ಖಾನ್’ ನಲ್ಲಿ ಲೇಖಕ ಬಿಸ್ವಾದೀಪ್ ಘೋಶ್ ಶಹೀನ್ ಮತ್ತು ಸಲ್ಮಾನ್ ಲವ್ ಸ್ಟೋರಿಯ ಇನ್ನೊಂದಷ್ಟು ಮಾಹಿತಿಯನ್ನು ಹೊರಹಾಕಿದ್ದಾರೆ. ಸಲ್ಮಾನ್ ಶಹೀನ್ರನ್ನು ತಮ್ಮ ಕುಟುಂಬದ ಸದಸ್ಯರಿಗೂ ಪರಿಚಯಿಸಿದ್ದರಂತೆ. ಅದಕ್ಕಿಂತಲೂ ಮುಖ್ಯವಾಗಿ ಇವರಿಬ್ಬರ ಸಂಬಂಧಕ್ಕೆ ಶಹೀನ್ ಮತ್ತು ಸಲ್ಮಾನ್ ಕುಟುಂಬದಿಂದಲೂ ಸಮ್ಮತಿಯ ಮುದ್ರೆ ಬಿದ್ದಿತ್ತು. ಹೀಗಾಗಿ, ಶೀಘ್ರವೇ ಇವರಿಬ್ಬರ ಮದುವೆಯೂ ಆಗುತ್ತದೆ ಎಂದೇ ನಂಬಲಾಗಿತ್ತು. ಆದರೆ, ಸುಂದರ ಪ್ರೇಮದ ನಡುವೆ ಮತ್ತೊಬ್ಬಾಕೆಯ ಎಂಟ್ರಿ ಆಗಿತ್ತು!

salman-1ಈ ಸುಂದರಿ ಯಾರು? : ಶಹೀನ್ ಮತ್ತು ಸಲ್ಮಾನ್ ಪ್ರೇಮಲೋಕದಲ್ಲಿ ವಿಹರಿಸುತ್ತಿದ್ದ ಸಂದರ್ಭದಲ್ಲೇ ಎಂಟ್ರಿ ಕೊಟ್ಟಾಕೆ ಸಂಗೀತಾ ಬಿಜಲಾನಿ. ಅಲ್ಲಿ ವರೆಗೆ ಯಾವುದೇ ತೊಂದರೆ ಇಲ್ಲದೆ ಸಲ್ಮಾನ್ ಶಹೀನ್ ಪ್ರೇಮ ಸಾಗುತ್ತಿತ್ತು. ಆದರೆ, ಯಾವಾಗ ಸಲ್ಮಾನ್ ಬಾಳಿನಲ್ಲಿ ಸಂಗೀತಾದ ಆಲಾಪ ಆರಂಭವಾಯಿತೋ ಶಹೀನ್ ಸಲ್ಮಾನ್ ಪ್ರೇಮ ತಾಳತಪ್ಪಿತ್ತು. ಸಲ್ಮಾನ್ನಿಂದ ದೂರವಾದ ಶಹೀನ್ ತನ್ನ ಬದುಕನ್ನು ಮತ್ತೆ ಕಟ್ಟಿಕೊಂಡರು. ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಯಲ್ಲಿ ಶಹೀನ್ ಕೆಲಸ ಆರಂಭಿಸಿ ಸಲ್ಮಾನ್ನಿಂದ ಶಾಶ್ವತವಾಗಿ ದೂರವಾಗಿದ್ದರು.

ಇಷ್ಟಕ್ಕೂ ಸಲ್ಮಾನ್ ಈ ಮೊದಲ ಪ್ರೇಮ ಪ್ರಕರಣದ ರಹಸ್ಯ ಬಯಲಾಗಿದ್ದು 2014ರಲ್ಲಿ. ಫ್ಯೂಗ್ಲಿ ಚಿತ್ರದ ನಟಿ ಕಿಯಾರ ಅಡ್ವಾಣಿ ಈ ರಹಸ್ಯ ಬಯಲು ಮಾಡಿದ್ದರು. ಈ ಕಿಯಾರ ಅಡ್ವಾಣಿ ಬೇರೆ ಯಾರೂ ಅಲ್ಲ. ಸಲ್ಮಾನ್ರ ಹಳೇ ಪ್ರೇಯಸಿ ಶಹೀನ್ರ ಸೋದರ ಸೊಸೆ! ಮಾಧ್ಯಮವೊಂದರ ಸಂದರ್ಶನದಲ್ಲಿ ಕಿಯಾರ ಈ ರಹಸ್ಯ ಬಿಚ್ಚಿಟ್ಟಿದ್ದರು. ‘ನನ್ನ ತಾಯಿಗೆ ಸಲ್ಮಾನ್ ಸಾರ್ ಪರಿಚಯ ಇದೆ. ಇವರಿಬ್ಬರು ಬಾಂದ್ರಾದಲ್ಲಿ ಒಟ್ಟಾಗಿ ಬೆಳೆದವರು. ಚಿಕ್ಕಂದಿನಿರುವಾಗಲೇ ನಾನು ಸ್ಟಾರ್ ಆಗುತ್ತೇನೆ ಎಂದು ಸಲ್ಮಾನ್ ಸಾರ್ ನನ್ನ ತಾಯಿ ಜಿನಿ ಅವ್ಯಾವ್ರ ಬಳಿ ಹೇಳುತ್ತಿದ್ದರಂತೆ. ತಾಯಿಯಿಂದಲೇ ನನ್ನ ಅತ್ತೆ ಶಹೀನ್ ಸಲ್ಮಾನ್ ಸಾರ್ಗೆ ಪರಿಚಯವಾಗಿದ್ದು. ಇದಾದ ಬಳಿಕ ನನ್ನ ಅತ್ತೆ ಮತ್ತು ಸಲ್ಮಾನ್ ಸಾರ್ ಡೇಟಿಂಗ್ ಮಾಡುತ್ತಿದ್ದರು. ಬಹುಶಃ ಇದೇ ಸಲ್ಮಾನ್ ಅವರ ಮೊದಲ ಪ್ರೇಮ’ ಎಂದು ಕಿಯಾರ ಹೇಳಿದ್ದರು.

ಇದಾದ ಬಳಿಕ ಸಲ್ಮಾನ್ ಬಾಳಲ್ಲಿ ಹಲವು ಯುವತಿಯರು ಬಂದರು. ಆದರೆ, ಯಾವೊಂದು ಸಂಬಂಧವೂ ಮದುವೆಯ ತನಕ ಹೋಗಿರಲಿಲ್ಲ. ಇದರ ಬಗ್ಗೆ ಅವರ ಕುಟುಂಬದವರಲ್ಲಿ ಇಂದಿಗೂ ನೋವಿದೆ. ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎಂದು ಹೇಳುತ್ತಾರೆ. ಆದರೆ, ಸಲ್ಮಾನ್ ಖಾನ್ ವಿಚಾರದಲ್ಲಿ ಅವರ ಮದುವೆ ಸ್ವರ್ಗದಲ್ಲೂ ನಿಶ್ಚಿಯವಾಗಿಲ್ಲವೇನೋ. ಇದನ್ನು ಸ್ವತಃ ಸಲ್ಮಾನ್ ಖಾನ್ ಅವರೇ ಹೇಳಿದ್ದರು. ಏನೇ ಆಗಲಿ, ವಯಸ್ಸು 50 ದಾಟಿದರೂ ಸಲ್ಮಾನ್ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿಯೇ ಇದ್ದಾರೆ. ಈಗಲೂ ಸಲ್ಮಾನ್ ಬಾಳಲ್ಲಿ ಒಂದಿಬ್ಬರು ಯುವತಿಯರ ಹೆಸರು ಕೇಳಿ ಬರುತ್ತಿದೆ. ಆದರೆ, ಅಂತಿಮವಾಗಿ ಯಾರು ಪತ್ನಿಯ ಸ್ಥಾನವನ್ನು ಗಿಟ್ಟಿಸಿಕೊಳ್ಳುತ್ತಾರೆ ಎಂಬುದು ಮಾತ್ರ ನಿಗೂಢ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!