ಬೆಂಗಳೂರು: ಮೆಡಿಕಲ್ ಕಾಲೇಜುಗಳಿಗೆ ವಂಚಿಸುತ್ತಿದ್ದ ನಕಲಿ ಕುಲಪತಿಯೋರ್ವನನ್ನು ಜೆ.ಪಿ.ನಗರ ಪೊಲೀಸರು ಬಂಧಿಸಿದ್ದಾರೆ. ಸಂತೋಷ್ ಲೋಹರ್ ಬಂಧಿತ ಆರೋಪಿ. ಪಶ್ಚಿಮ ಬಂಗಾಳದ ಶ್ಯಾಮಲ್ ದತ್ತು ಎಂಬುವನ್ನು ಬಯೊ ಕೆಮಿಕ್ ಎಂಬ ನಕಲಿ ಯುನಿವರ್ಸಿಟಿ ಹುಟ್ಟು ಹಾಕಿದ್ದ. ಅದಕ್ಕೆ ಸಂತೋಷ್ ಲೋಹರ್ನನ್ನು ಕುಲಪತಿಯನ್ನಾಗಿ ನೇಮಿಸಿದ್ದ. ಇಬ್ಬರು ಸೇರಿ ಕಾಲೇಜುಗಳನ್ನು ತೆರೆಯಲು ಕೇಂದ್ರ ಸರ್ಕಾರದ ಅನುಮತಿ ಪಡೆದುಕೊಂಡಿರುವುದಾಗಿ ಪ್ರತಿಷ್ಠಿತ ಕಾಲೇಜುಗಳಿಗೆ ವಂಚಿಸುತ್ತಿದ್ದರು. ಇನ್ನು ಆರೋಪಿ ಶ್ಯಾಮಲ್ ದತ್ತ ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಗಿದೆ.
ಆರೋಪಿಗಳು ಕೇಂದ್ರ ಸರ್ಕಾರದ ಹಲವು ಗೆಜೆಟೆಡ್ ಪ್ರಮಾಣ ಪತ್ರಗಳನ್ನು ನಕಲು ಮಾಡಿ ಇಟ್ಟುಕೊಂಡಿದ್ದು, ಮೆಡಿಕಲ್, ಪ್ಯಾರಾ ಮೆಡಿಕಲ್, ಬಯೋ ನರ್ಸಿಂಗ್ ಕಾಲೇಜುಗಳನ್ನು ತೆರೆಯುವ ಸಲುವಾಗಿ ಅನುಮತಿ ಸಿಕ್ಕಿರುವುದಾಗಿ ಹೇಳಿಕೊಂಡಿದ್ದರು.
