Tuesday , December 12 2017
Home / Sandalwood / `ನನ್ನ ನಿನ್ನ ಪ್ರೇಮ ಕತೆ’ಯಲ್ಲಿ ಶಂಕರ್‍ನಾಗ್

`ನನ್ನ ನಿನ್ನ ಪ್ರೇಮ ಕತೆ’ಯಲ್ಲಿ ಶಂಕರ್‍ನಾಗ್

nanna ninna prema katheಬೆಂಗಳೂರು : ದಿವಂಗತ ನಟ ಶಂಕರ್‍ನಾಗ್‍ರನ್ನು ಮತ್ತೆ ತೆರೆ ಮೇಲೆ ನೋಡಬಹುದು…! `ನನ್ನ ನಿನ್ನ ಪ್ರೇಮ ಕತೆ’ ಚಿತ್ರದಲ್ಲಿ ಶಂಕರ್‍ನಾಗ್ ಪ್ರಮುಖ ಪಾತ್ರವಾಗಿದ್ದಾರೆ. ನಿರ್ದೇಶಕ ಶಿವು ಶಂಕರ್‍ನಾಗ್ ಧ್ವನಿಯನ್ನು ಇಲ್ಲಿ ಬಳಸಿಕೊಂಡಿದ್ದಾರೆ.

nanna ninna prema kathe 1ಈ ಚಿತ್ರದಲ್ಲಿ ಶಂಕರ್‍ನಾಗ್ ಖ್ಯಾತ ಜನಪದ ಕಲಾವಿದನಾಗಿದ್ದು, ಇವರ ಮಗನ ಪಾತ್ರವನ್ನು ವಿಜಯ ರಾಘವೇಂದ್ರ ನಿರ್ವಹಿಸಿದ್ದಾರೆ. ವಿಜಯ ರಾಘವೇಂದ್ರ ಇಲ್ಲಿ ತನ್ನ ಮನಸ್ಸಿನಲ್ಲಿ ಉಂಟಾದ ಭಾವನೆ, ಖುಷಿ, ದುಃಖವನ್ನು ತಂದೆಯ ಫೋಟೋದ ಎದುರು ಹಂಚಿಕೊಳ್ಳುತ್ತಾರೆ. ಈ ಮೂಲಕ ಶಂಕರ್‍ನಾಗ್ ನಮ್ಮ ಎದುರು ಇಲ್ಲದಿದ್ದರೂ ಅವರು ನಮ್ಮೊಂದಿಗೆ ಇರುವಂತೆ ಇಲ್ಲಿ ಮಾಡಲಾಗಿದೆ ಎನ್ನುತ್ತದೆ ಚಿತ್ರತಂಡ. ನಿರ್ದೇಶಕ ಶಿವು ಶಂಕರ್‍ನಾಗ್ ಅಭಿಮಾನಿಯಾಗಿದ್ದು, ಶಂಕರ್‍ನಾಗ್ ಅವರಿಗೆ ಕಾಣಿಕೆ ರೂಪದಲ್ಲಿ ಈ ಚಿತ್ರವನ್ನು ಮಾಡಿದ್ದಾರಂತೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!