Tuesday , August 14 2018
ಕೇಳ್ರಪ್ಪೋ ಕೇಳಿ
Home / Film News / Coastalwood / ಸಿನೆಮಾ ನಟ, ಸಾಮಾಜಿಕ ಕಾರ್ಯಕರ್ತ ಅಗ್ನೇಲ್ ರೊಡ್ರಿಗಸ್ ನಿಧನ

ಸಿನೆಮಾ ನಟ, ಸಾಮಾಜಿಕ ಕಾರ್ಯಕರ್ತ ಅಗ್ನೇಲ್ ರೊಡ್ರಿಗಸ್ ನಿಧನ

Agnel Rodrigues 3ಮಂಗಳೂರು : ದಕ್ಷಿಣ ಕನ್ನಡ ಮೂಲದ ನಟ, ಸಾಮಾಜಿಕ ಕಾರ್ಯಕರ್ತ, ಪತ್ರಕರ್ತ ಆಗ್ನೇಲ್ ರೊಡ್ರಿಗಸ್ ವಿಧಿವಶರಾಗಿದ್ದಾರೆ. ಹೃದಯಾಘಾತದಿಂದ ಇವರು ಕೊನೆಯುಸಿರೆಳೆದಿದ್ದಾರೆ.

Agnel Rodrigues 255 ವರ್ಷದ ರೊಡ್ರಿಗಸ್, ಪತ್ನಿ ಮರ್ಲಿನ್, ಮಕ್ಕಳಾದ ಸಂಜಯ್ ಮತ್ತು ಸಂಜಿತ್‍ರನ್ನು ಅಗಲಿದ್ದಾರೆ. ಲಯನ್ಸ್ ಕ್ಲಬ್ ಸೇರಿದಂತೆ ಹಲವು ಸಂಘಟನೆಗಳಲ್ಲಿ ತೊಡಗಿದ್ದ ರೊಡ್ರಿಗಸ್ ಸಾಮಾಜಿಕ ಸೇವೆಗಳಿಂದಲೂ ಗಮನ ಸೆಳೆದಿದ್ದರು.

Agnel Rodrigues 1ಕೊಂಕಣಿ ಸಾಹಿತ್ಯ ಅಕಾಡೆಮಿ, ದಕ್ಷಿಣ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಕ್ಕೆ ಇವರು ಭಾಜನರಾಗಿದ್ದಾರೆ. ಕನ್ನಡ ಸೇರಿದಂತೆ ಹಲವು ತುಳು ಚಿತ್ರಗಳಲ್ಲಿ ಇವರು ನಟಿಸಿದ್ದರು. ಇತ್ತೀಚೆಗೆ ಚಾಲಿಪೋಲಿಲು, ಒರಿಯರ್ದ್ ಒರಿ ಅಸಲ್, ನಮ್ಮ ಕುಡ್ಲ ಮತ್ತು ತೆಲಿಕೆದ ಬೊಳ್ಳಿ ಚಿತ್ರಗಳಲ್ಲಿ ಇವರು ಪಾತ್ರ ಮಾಡಿದ್ದರು.

About sudina

Check Also

ನಾಳೆ ‘ನೇಮೋದ ಬೂಳ್ಯ’ ಸಿನೆಮಾ ರಿಲೀಸ್​

ಮಂಗಳೂರು : ಕೋಸ್ಟಲ್​ವುಡ್​ನಲ್ಲಿ ಬಹಳ ನಿರೀಕ್ಷೆ ಮೂಡಿಸಿರುವ ‘ನೇಮೋದ ಬೂಳ್ಯ’ ಸಿನೆಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ ಅಂದರೆ, ಸೆಪ್ಟೆಂಬರ್ …

Leave a Reply

Your email address will not be published. Required fields are marked *

error: Content is protected !!