Friday , September 21 2018
ಕೇಳ್ರಪ್ಪೋ ಕೇಳಿ
Home / News NOW / ಬೆಂಗಳೂರಿನಲ್ಲಿ ಭಾರೀ ಮಳೆ : ಮರ ಬಿದ್ದು ಬೈಕ್ ಸವಾರ ಸಾವು

ಬೆಂಗಳೂರಿನಲ್ಲಿ ಭಾರೀ ಮಳೆ : ಮರ ಬಿದ್ದು ಬೈಕ್ ಸವಾರ ಸಾವು

ಬೆಂಗಳೂರು : ರಾಜಧಾನಿ ಬೆಂಗಳೂರಿನ ಹಲವೆಡೆ ಇವತ್ತು ಭಾರೀ ಮಳೆಯಾಗಿದೆ. ಮಳೆಯಿಂದಾಗಿ ಅಲ್ಲಲ್ಲಿ ಮರಗಳು ಬಿದ್ದ ಘಟನೆಯೂ ನಡೆದಿದೆ. ಜೊತೆಗೆ, ಮಲ್ಲೇಶ್ವರಂನ 18ನೇ ಕ್ರಾಸ್ ಬಳಿ ಬೈಕ್‍ಗೆ ಮರ ಬಿದ್ದು ಸವಾರರೊಬ್ಬರು ಕೊನೆಯುಸಿರೆಳೆದಿದ್ದಾರೆ. ಮೃತರನ್ನು ಕಲ್ಯಾಣ ನಗರದ ಅಸಾವುಲ್ ಷರೀಫ್ ಎಂದು ಗುರುತಿಸಲಾಗಿದೆ.
rain 1
ಕಬ್ಬನ್ ಪಾರ್ಕ್‍ನಲ್ಲೂ ಮರವೊಂದು ಬುಡಸಮೇತ ಬಿದ್ದಿದೆ. ಈ ಸಂದರ್ಭದಲ್ಲಿ ಮರದಡಿ ಕುಳಿತು ಮಾತನಾಡುತ್ತಿದ್ದ ಪ್ರೇಮಿಗಳು ಸ್ವಲ್ಪದರಲ್ಲೇ ಪಾರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು, ಮಳೆಯಿಂದಾಗಿ ಉಂಟಾದ ಟ್ರಾಫಿಕ್ ಜಾಮ್‍ನಿಂದ ವಾಹನ ಸವಾರರು ಕೂಡಾ ಪರದಾಡುವಂತಾಗಿತ್ತು.

About sudina

Check Also

ಬಂಟ್ವಾಳ : ವಿವಿಧ ಸುದ್ದಿಗಳ ಒಂದು ನೋಟ

ಸೋಣ ಅಮಾವಾಸ್ಯೆ ತೀರ್ಥಸ್ನಾನ : ಭೂಲೋಕದ ಕೈಲಾಸವೆಂದೇ ಪ್ರಖ್ಯಾತವಾದ ನರಹರಿ ಪರ್ವತದಲ್ಲಿ ಸೆಪ್ಟೆಂಬರ್ 9ರ ಭಾನುವಾರ ಬೆಳಗ್ಗೆ 5 ಗಂಟೆಯಿಂದ …

Leave a Reply

Your email address will not be published. Required fields are marked *

error: Content is protected !!