Tuesday , August 14 2018
ಕೇಳ್ರಪ್ಪೋ ಕೇಳಿ
Home / Sandalwood / ಕೋಟಿಗೊಬ್ಬ 2 ಚಿತ್ರದ ಟ್ರೇಲರ್ ಶನಿವಾರ ರಿಲೀಸ್ : ಜುಲೈಗೆ ಚಿತ್ರ ಬಿಡುಗಡೆ…?

ಕೋಟಿಗೊಬ್ಬ 2 ಚಿತ್ರದ ಟ್ರೇಲರ್ ಶನಿವಾರ ರಿಲೀಸ್ : ಜುಲೈಗೆ ಚಿತ್ರ ಬಿಡುಗಡೆ…?

ಬೆಂಗಳೂರು : ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ `ಕೋಟಿಗೊಬ್ಬ 2′ ಚಿತ್ರದ ಪ್ರೊಡಕ್ಷನ್ ಕೆಲಸ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಬಹುತೇಕ ಜುಲೈ ಕೊನೆ ವಾರದಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಇನ್ನು, ತಮಿಳಿನಲ್ಲೂ ಈ ಚಿತ್ರ `ಮುಡಿಂಜಾ ಇವನ ಪುಡಿ’ ಎಂಬ ಹೆಸರಿನಲ್ಲಿ ರಿಲೀಸ್ ಆಗುತ್ತಿದೆ. ಇನ್ನು, ಶನಿವಾರ ಬಹುನಿರೀಕ್ಷಿತ ಕೋಟಿಗೊಬ್ಬ 2 ನ ಟ್ರೇಲರ್ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಈ ಹಿಂದೆ ಕಿಚ್ಚ ಸುದೀಪ್ ಹುಟ್ಟುಹಬ್ಬ ಸಂದರ್ಭದಲ್ಲಿ ಮೊದಲ ಟ್ರೇಲರ್ ರಿಲೀಸ್ ಆಗಿತ್ತು.

ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಕೆ.ಎಸ್.ರವಿ ಕುಮಾರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ನಿತ್ಯ ಮೆನನ್ ಸುದೀಪ್‍ಗೆ ನಾಯಕಿಯಾಗಿದ್ದಾರೆ. ಇನ್ನು, ಶರತ್ ಲೋಹಿತಾಶ್ವ, ನಾಸರ್, ರವಿಶಂಕರ್ ಮತ್ತು ಚಿಕ್ಕಣ್ಣ ಸೇರಿದಂತೆ ಹಲವು ನಟ ನಟಿಯರು ಈ ಚಿತ್ರದಲ್ಲಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!