Monday , May 21 2018
Home / News NOW / ಗೋಮೂತ್ರದಲ್ಲಿ ಇದೆ ಬಂಗಾರದ ಅಂಶ…!

ಗೋಮೂತ್ರದಲ್ಲಿ ಇದೆ ಬಂಗಾರದ ಅಂಶ…!

ಜುನಗಢ್ : ಗೋವು ಕಲಿಯುಗ ಕಾಮಧೇನು. ಹಿಂದೂ ಧರ್ಮೀಯರ ಪಾಲಿಗೆ ಪವಿತ್ರ ಗೋ ಮಾತೆ. ಇಂತಹ ಗೋ ಮಾತೆಯೊಳಗೆ ಈಗ ಬಂಗಾರ ಅಡಗಿದೆ. ಜುನಗಢ್ ಕೃಷಿ ವಿವಿಯ ಸಂಶೋಧಕರ ಅಧ್ಯಯನದಲ್ಲಿ ಇದು ಬಯಲಾಗಿದೆ. ಗಿರ್ ಎಂಬ ತಳಿಯ ಹಸುವಿನ ಮೂತ್ರದಲ್ಲಿ ಬಂಗಾರದ ಅಂಶವಿದೆ ಎಂಬುದು ಈ ಸಂಶೋಧಕರು ಕಂಡುಕೊಂಡ ಸತ್ಯ. ಸುಮಾರು 400 ಗಿರ್ ತಳಿಗಳ ಮೂತ್ರದ ಮಾದರಿಯನ್ನು ಕೃಷಿ ವಿಶ್ವವಿದ್ಯಾನಿಲಯದ ಸಂಶೋಧಕರು ಪರೀಕ್ಷೆ ಮಾಡಿದ್ದರು. ಈ ಸಂದರ್ಭದಲ್ಲಿ ಒಂದು ಲೀಟರ್ ಗೋಮೂತ್ರದಲ್ಲಿ ಸುಮಾರು 3 ಎಂಜಿ ಯಿಂದ 10 ಎಂ ಜಿ ವರೆಗಿನ ಚಿನ್ನದ ಅಂಶವನ್ನು ಪತ್ತೆ ಮಾಡಲಾಗಿದೆ. ಈ ಬಂಗಾರ ಅಯಾನಿಕ್ ರೂಪದಲ್ಲಿದೆ ಎಂದೂ ಸಂಶೋಧಕರು ತಿಳಿಸಿದ್ದಾರೆ.

ಜುನಗಢ್ ಕೃಷಿ ವಿವಿಯ ಬಯೊಟೆಕ್ನಾಲಜಿ ವಿಭಾಗದ ಮುಖ್ಯಸ್ಥ ಡಾ. ಬಿಎ ಗೋಲಕಿಯ ನೇತೃತ್ವದ ತಂಡ ಈ ಸಂಶೋಧನೆ ಮಾಡಿದೆ. ಗೋಮೂತ್ರದಿಂದ ಚಿನ್ನದ ಅಂಶವನ್ನು ರಾಸಾಯನಿಕ ಪ್ರಕ್ರಿಯೆಗಳ ಮೂಲಕ ಹೊರತೆಗೆಯಬಹುದು ಎಂದು ಇವರು ಹೇಳಿದ್ದಾರೆ.

About sudina

Check Also

ಸ್ಪೈಸ್ ಜೆಟ್ ತಾಗಿ ರನ್‍ವೇ ಲೈಟ್‍ಗಳಿಗೆ ಹಾನಿ : ಒಂದೂವರೆ ಗಂಟೆ ಏರ್ ಪೋರ್ಟ್ ಬಂದ್…

ಬೆಂಗಳೂರು : ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಣ್ಣ ದುರ್ಘಟನೆಯೊಂದು ಸಂಭವಿಸಿದೆ. ಹೈದರಾಬಾದ್‍ನಿಂದ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನ …

Leave a Reply

Your email address will not be published. Required fields are marked *

error: Content is protected !!