Friday , September 21 2018
ಕೇಳ್ರಪ್ಪೋ ಕೇಳಿ
Home / Film News / Bollywood / ಮತ್ತೆ ಒಂದಾಗ್ತಿದ್ದಾರಾ ಅಜಯ್ ದೇವಗನ್, ರೋಹಿತ್ ಶೆಟ್ಟಿ..?

ಮತ್ತೆ ಒಂದಾಗ್ತಿದ್ದಾರಾ ಅಜಯ್ ದೇವಗನ್, ರೋಹಿತ್ ಶೆಟ್ಟಿ..?

ಮುಂಬೈ : ಗೋಲ್ಮಾಲ್, ಸಿಂಘಂ, ಬೋಲ್ ಬಚ್ಚನ್‍ನಂತ ಹಿಟ್ ಸಿನಿಮಾಗಳನ್ನು ಕೊಟ್ಟ ಬಾಲಿವುಡ್ ನಟ ಅಜಯ್ ದೇವಗನ್, ನಿರ್ದೇಶಕ ರೋಹಿತ್ ಶೆಟ್ಟಿ ಜೋಡಿ ಮತ್ತೆ ಒಂದಾಗುತ್ತಾ..? ಹೌದು ಈ ಬಗ್ಗೆ ಸುದ್ದಿಯೊಂದು ಹರಿದಾಡ್ತಿದೆ.. `ಗೋಲ್ಮಾಲ್-4′ ಸಿನಿಮಾಗಾಗಿ ಮತ್ತೆ ಈ ಜೋಡಿ ಒಂದಾಗಲಿದೆಯಂತೆ.. 2014ರ ಸಿಂಘಂ ರಿಟರ್ನ್ ಸಿನಿಮಾದ ನಂತರ ಈ ಜೋಡಿ ಒಂದಾಗಿರಲಿಲ್ಲ. ಕೆಲ ಕಾರಣದಿಂದಾಗಿ ಇಬ್ಬರ ನಡುವೆ ಮನಸ್ತಾಪವಿತ್ತು ಎನ್ನಲಾಗಿತ್ತು. ಆದ್ರೆ ಈಗ ಎಲ್ಲವನ್ನು ಮರೆತು ಒಟ್ಟಿಗೆ ಸಿನಿಮಾ ಮಾಡುವ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಶೀಘ್ರದಲ್ಲಿ `ಗೋಲ್ಮಾಲ್-4’ರ ಶೂಟಿಂಗ್ ಕೂಡಾ ಆರಂಭವಾಗಲಿದೆಯಂತೆ. ರೋಹಿತ್ ಶೆಟ್ಟಿ `ದಿಲ್ವಾಲೆ’ ಬಳಿಕ `ರಾಮ್ ಲಕ್ಷ್ಮಣ್’ ಮಾಡುವವರಿದ್ದರು. ಆದರೆ ಅದಕ್ಕೂ ಮೊದಲು `ಗೋಲ್ಮಾಲ್ -4′ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಇನ್ನು ಅಜಯ್ ದೇವ್ಗನ್ `ಶಿವಾಯ್ ಇನ್ ಬುಲ್ಗಾರಿಯಾ’  ಸಿನಿಮಾ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ. ಆದರೂ ಇಬ್ಬರು ಈ  ಮಧ್ಯೆ ಭೇಟಿಯಾಗಿದ್ದು, `ಗೋಲ್ಮಾಲ್-4’ರ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂಬ ಬಗ್ಗೆ ಡಿಎನ್‍ಎ ವರದಿ ಮಾಡಿದೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!