Monday , February 18 2019
ಕೇಳ್ರಪ್ಪೋ ಕೇಳಿ
Home / News NOW / ಮಲಾರ್ ಜಯರಾಂ ರೈರಿಗೆ ಪತ್ರಿಕಾ ದಿನದ ಗೌರವ ಜೂ.30 ರಂದು ಪ್ರದಾನ

ಮಲಾರ್ ಜಯರಾಂ ರೈರಿಗೆ ಪತ್ರಿಕಾ ದಿನದ ಗೌರವ ಜೂ.30 ರಂದು ಪ್ರದಾನ

malarjayarama raiಅಜೆಕಾರು: ಬೆಂಗಳೂರಿನ ಪರ್ತಕರ್ತರ ವೇದಿಕೆ(ರಿ)ಯ ಉಡುಪಿ-ದ.ಕ ಘಟಕ ನೀಡುವ ವರ್ಷದ ಪತ್ರಿಕಾ ದಿನದ 9ನೇ ವರ್ಷದ ಗೌರವಕ್ಕೆ ಹಿರಿಯ ಪತ್ರಕರ್ತ ಡೆಕ್ಕನ್ ಹೆರಾಲ್ಡ್ ಮತ್ತು ನವಭಾರತದ 71ರ ಹರೆಯದ ಮಲಾರ್ ಜಯರಾಂ ರೈ ಅವರು ಆಯ್ಕೆಯಾಗಿದ್ದಾರೆ.
MJ Rai 2
ಹಿರಿಯರೆಡೆಗೆ ನಮ್ಮ ನಡಿಗೆ ಧ್ಯೇಯದೊಂದಿಗೆ ವೇದಿಕೆಯ ಘಟಕ ಆರಂಭಿಸಿರುವ ಈ ಮಹತ್ವದ ಕಾರ್ಯಕ್ರಮದಲ್ಲಿ ಈ ಬಾರಿ ಮಂಗಳೂರು ಮತ್ತು ಬೆಂಗಳೂರಿನಲ್ಲಿ ಕನ್ನಡ-ಆಂಗ್ಲ ಪತ್ರಕರ್ತರಾಗಿದ್ದು ತುಳು-ಕನ್ನಡ ನೆಲಜಲಕ್ಕೆ ವಿಶಿಷ್ಟ ಸೇವೆ ಸಲ್ಲಿಸಿದ ರೈಗಳನ್ನು ಪತ್ರಿಕೋದ್ಯಮ ದಿನಾಚರಣೆಯ ಮುನ್ನಾ ದಿನ ಅವರ ಶಿರಿಯಾ ನಿವಾಸದಲ್ಲಿ ಸನ್ಮಾನಿಸಲಾಗುತ್ತಿದೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಶೇಖರ ಅಜೆಕಾರು ತಿಳಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅವರು ಗೌರವ ಪ್ರದಾನ ಮಾಡಲಿರುವರು. ಮಂಗಳೂರು ಆಕಾಶವಾಣಿಯ ನಿರ್ದೇಶಕ ಡಾ.ವಸಂತ ಕುಮಾರ್ ಪೆರ್ಲ, ಹಿರಿಯ ಪತ್ರಕರ್ತ ರಾಧಾಕೃಷ್ಣ ಉಳಿಯತಡ್ಕ, ವಿಶ್ವ ತುಳುವೆರೆ ಆಯನೋದ ಪ್ರಧಾನ ಕಾರ್ಯದರ್ಶಿ ಡಾ. ರಾಜೇಶ್ ಆಳ್ವ ಮತ್ತು ಮಾಧ್ಯಮದ ಮಿತ್ರರು ಕಾಯಕ್ರಮದಲ್ಲಿ ಪಾಲ್ಗೊಳ್ಳುವರು.ಮುಖ್ಯ ಅತಿಥಿಗಳಾಗಿರುವರು ಈ ಹಿಂದೆ ಈ ಗೌರವಕ್ಕೆ ಅಂಬಾತನಯ ಮುದ್ರಾಡಿ, ವಿದ್ವಾನ್ ಬಿ.ಚಂದ್ರಯ್ಯ, ಎಕ್ಕಾರು ಉಮೇಶ್ ರಾವ್, ಎಂ.ವಿ ಕಾಮತ್, ಕು.ಗೋಪಾಲಭಟ್ಟ, ಎ.ಎಸ್.ಎನ್ ಹೆಬ್ಬಾರ್, ರಾಘವ ನಂಬಿಯಾರ್, ಉಡುಪಿ ನಾದವೈಭವಂ ವಾಸುದೇವ ಭಟ್ ಅವರು ಪಾತ್ರರಾಗಿದ್ದಾರೆ. ಈ ಕಾರ್ಯಕ್ರಮದ ಸ್ಫೂರ್ತಿಯಿಂದ ವಿವಿಧ ಸಂಸ್ಥೆಗಳು ಇಂತಹ ಕಾರ್ಯಕ್ರಮಗಳನ್ನು ಉಡುಪಿ ಸೇರಿದಂತೆ ರಾಜ್ಯದ ವಿವಿದೆಡೆಗಳಲ್ಲಿ ನಡೆಸುತ್ತಿರುವುದು ಸಂತೋಷದ ಸಂಗತಿ ಎಂದು ಅವರು ತಿಳಿಸಿದ್ದಾರೆ.

ಪರಿಚಯ:
ಮಲಾರ್ ಜಯರಾಮ ರೈ ಅವರು 1969 ರಲ್ಲಿ ನವಭಾರತದ ಮೂಲಕ ಪೂರ್ಣಕಾಲಿಕ ಪತ್ರಕರ್ತರಾಗಿ ವೃತ್ತಿ ಆರಂಭಿಸಿದರು. 1973 ರಲ್ಲಿ ಆಂಗ್ಲಪತ್ರಿಕೋದ್ಯಮಕ್ಕೆ ಪದಾರ್ಪಣೆ ಮಾಡಿದ ಅವರು 2003 ರಲ್ಲಿ ನಿವೃತ್ತರಾದರು. ಡೆಕ್ಕನ್ ಹೆರಾಲ್ಡ್ ಪತ್ರಿಕೆ ಒಂದರಲ್ಲಿಯೇ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಆದರು. ವೃತ್ತಿ ಜೀವನ ಆರಂಭಿಸಿದ ಮಂಗಳೂರಿನಲ್ಲಿ ಪತ್ರಿಕೆಯ ಮುಖ್ಯಸ್ಥರಾಗಿ 2001-2003 ರವರೆಗೆ ಸೇವೆ ಸಲ್ಲಿಸಿದರು. ಉಳಿದ ಅವಧಿಯಲ್ಲಿ ಅವರು ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದರು. ಅನೇಕ ಕನ್ನಡ ಪತ್ರಕರ್ತರು ಆಂಗ್ಲ ಭಾಷೆಯತ್ತ ಹೊರಳುವ ಕನಸಿಗೆ ನೀರೆರೆದು ಪೆÇ್ರೀತ್ಸಾಹ ನೀಡಿದ್ದಾರೆ. ಅನೇಕ ಕೃತಿಗಳನ್ನು ಬರೆದಿರುವ ಅವರು ನಿವೃತ್ತಿಯ ಬಳಿಕ ಶ್ರೀ ಸಾಯಿ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿದ್ದಾರೆ. ಒಡಿಯೂರು ಸ್ವಾಮಿಜಿಯವರ ವಿಶೇಷ ಕೃಪೆಗೆ ಪಾತ್ರರಾಗಿದ್ದು ಅಲ್ಲಿನ ಸಾಹಿತ್ಯಕ, ಅನುವಾದ ಕೆಲಸಗಳಲ್ಲಿ ಅವರ ಸೇವೆ ಸಲ್ಲುವ ಅವಕಾಶ ಮಾಡಿಕೊಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ಅನೇಕ ಗೌರವಗಳು ಅವರಿಗೆ ಸಂದಿವೆ.

ಅವರ ಕೃತಿಗಳು :
ತುಳು: ತುಳುವೆರೆಂಕುಲು(ಕವನ ಸಂಕಲನ), ಬೇರ್ ಮರ್ದ್ (ಕವನ ಸಂಕಲನ), ಅಪ್ಪೆ ಇಲ್ಲ್ (ಕವನ ಸಂಕಲನ), ಬೋಡು ನಮ್ಮೊಂಜಿ ತುಳುನಾಡ್ (ಕವನ ಸಂಕಲನ). ಪುಣ್ಯ ಭೂಮಿ ಪುಟ್ಟಪರ್ತಿ (ಸಂಪಾದಿತ ಜೀವನ ಚರಿತ್ರೆ), ಸಾಯಿ ಪಾತೆರೊದ ಅಮೃತೋ.
ಮಾನವ ಜಾತಿಗ್ ಬೊಲ್ಪು ತೋಜಾಯಿ ಮಹರ್ಷಿ ದಯಾನಂದೆರ್ (ಜೀವನ ಚರಿತ್ರೆ) ರಸದಿಂಜಿ ರಾಮಾಯನೋ…
ಕನ್ನಡ :  ಪತ್ರಕರ್ತನ ಪರ್ಯಟಣ, ಬಹುರೂಪಿ ಗಾಂಧಿ, ಸಂತ ಸುಧಾರಕ ನಾರಾಯಣ ಗುರು, ನುಗ್ಗಿ ಬರುತಾವೇ ನೂರು ನೆನಪುಗಳು, ಅಜೇಯ, ಇನ್ನ ರಾಮ್ ಮೋಹನ್ ರಾವ್ ಅಭಿನಂದನಾ ಗ್ರಂಥ ( ನಾಲ್ಕು ಪ್ರದಾನಿಗಳಿಗೆ ಮಾಧ್ಯಮ ಸಲಹೆಗಾರ)
ಆಂಗ್ಲ :
ಜರ್ನಿ ಥ್ರೂ ಜರ್ನಲಿಸಂ, ರ್ಯಾಡಂಮ್ ರೈಟಿಂಗ್ಸ್( ಅಚ್ಚಿನಲ್ಲಿ), ವಿಜನ್ ಆಂಡ್ ಕ್ರಿಯೇಶನ್ ಆಫ್ ಗುರುದೇವಾನಂದ ಸ್ವಾಮಿಜಿ, ಇನ್ನರ್ ವಾಯ್ಸ್ ಆಫ್ ಅವದೂತ, ಕ್ಷೇತ್ರ ಆಂಡ್ ಪಾತ್ರ.

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!