Wednesday , March 20 2019
ಕೇಳ್ರಪ್ಪೋ ಕೇಳಿ
Home / Sandalwood / ಲಾಂಗ್ ಗ್ಯಾಪ್‍ನ ಬಳಿಕ ಮರಳಿದ ಚೇತನ್

ಲಾಂಗ್ ಗ್ಯಾಪ್‍ನ ಬಳಿಕ ಮರಳಿದ ಚೇತನ್

ಬೆಂಗಳೂರು : ಸ್ಯಾಂಡಲ್‍ವುಡ್ ನಟ ಚೇತನ್ ಲಾಂಗ್ ಗ್ಯಾಪ್ ಬಳಿಕ ಮತ್ತೆ ಸಿನೆಮಾ ಲೋಕಕ್ಕೆ ಬಂದಿದ್ದಾರೆ. `ಮೈನಾ’ ಚಿತ್ರದ ಬಳಿಕ ಚೇತನ್ ಯಾವುದೇ ಸಿನೆಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ, ಈಗ ಇಷ್ಟು ದೊಡ್ಡ ಗ್ಯಾಪ್ ಬಳಿಕ ಚೇತನ್ ಮತ್ತೆ ಬಣ್ಣ ಹಚ್ಚಿದ್ದಾರೆ. ಇನ್ನೂ ಹೆಸರಿದ ಚಿತ್ರದಲ್ಲಿ ಚೇತನ್ ನಟಿಸುತ್ತಿದ್ದಾರೆ. ಕಳೆದ ಆಗಸ್ಟ್‍ನಲ್ಲಿ ಈ ಚಿತ್ರ ಲಾಂಚ್ ಆಗಿತ್ತು. ಈ ಚಿತ್ರದಲ್ಲಿ ಹಿರಿಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್, ಮೇಘನಾ ರಾಜ್ ಕೂಡಾ ನಟಿಸಿದ್ದಾರೆ. ಮರಾಠಿ ಕಾದಂಬರಿ `ದುನಿಯಾದ್ರಿ’ ಆಧರಿಸಿದ ಸಿನೆಮಾ ಇದು ಎಂದು ಹೇಳಲಾಗುತ್ತಿದೆ. ಸುಹಾಲ್ ಶಿವಾಲ್ಕರ್ ಬರೆದ ಈ ಕಾದಂಬರಿ ಆಧರಿಸಿದ ಮರಾಠಿ ಚಿತ್ರ 2013ರಲ್ಲಿ ಒಳ್ಳೆಯ ಹೆಸರು ಮಾಡಿತ್ತು. ಕನ್ನಡದಲ್ಲಿ ಈ ಚಿತ್ರವನ್ನು ಕುಮರೇಶ್ ನಿರ್ದೇಶನ ಮಾಡುತ್ತಿದ್ದಾರೆ.

image courtesy : internet

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!