Monday , June 25 2018
ಕೇಳ್ರಪ್ಪೋ ಕೇಳಿ
Home / Film News / Bollywood / ತೆರೆಗೆ ಬರುತ್ತಿದೆ ಅಣ್ಣಾ ಜೀವನ ಕತೆ : ಪೋಸ್ಟರ್ ರಿಲೀಸ್ ಮಾಡಿದ ಗಾಂಧಿವಾದಿ

ತೆರೆಗೆ ಬರುತ್ತಿದೆ ಅಣ್ಣಾ ಜೀವನ ಕತೆ : ಪೋಸ್ಟರ್ ರಿಲೀಸ್ ಮಾಡಿದ ಗಾಂಧಿವಾದಿ

ಮುಂಬೈ : ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಜೀವನ ಕತೆ ಸಿನೆಮಾವಾಗುತ್ತಿದೆ. `ಅಣ್ಣಾ’ ಎಂಬ ಹೆಸರಿನಲ್ಲೇ ಈ ಚಿತ್ರ ತೆರೆ ಕಾಣುತ್ತಿದೆ. ಈ ಚಿತ್ರದ ಪೋಸ್ಟರನ್ನು ಸ್ವತಃ ಅಣ್ಣಾ ಹಜಾರೆ ಅವರೇ ಬಿಡುಗಡೆ ಮಾಡಿದ್ದಾರೆ. ಶಶಾಂಕ್ ಉದಾರ್ಪುಕರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಶಶಾಂಕ್ ಇಲ್ಲಿ ಅಣ್ಣಾ ಪಾತ್ರವನ್ನು ನಿರ್ವಹಿಸುತ್ತಿದ್ದು, ನಟಿ ಕಾಜೋಲ್ ಅವರ ತಂಗಿ ತನಿಷಾ ಮುಖರ್ಜಿ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದಾರೆ.
ಪೋಸ್ಟರ್ ಬಿಡುಗಡೆ ಬಳಿಕ ಮಾತನಾಡಿದ ಅಣ್ಣಾ ಹಜಾರೆ, `ನನಗೆ 25 ವರ್ಷ ಆಗಿದ್ದಾಗ ನಾನು ಕೊನೆಯ ಉಸಿರು ಇರುವ ವರೆಗೂ ದೇಶಕ್ಕಾಗಿ ದುಡಿಯಬೇಕೆಂದು ಬಯಸಿದ್ದೆ. ಈಗ ನನಗೆ ವಯಸ್ಸು 79. ಈಗಲೂ ನನ್ನ ಇಚ್ಛೆ ಒಂದೇ… ಯಾವುದೂ ಅಸಾಧ್ಯ ಎನ್ನಲಾಗದು’ ಎಂದು ಹೇಳಿದ್ದಾರೆ. ನನಗೆ ಕುಟುಂಬವಿಲ್ಲ. ಆದರೆ, ಈ ದೇಶದಲ್ಲಿರುವ ಎಲ್ಲರೂ ನನ್ನ ಕುಟುಂಬಸ್ಥರೇ ಎಂದು ಅವರು ತಿಳಿಸಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!