Sunday , July 22 2018
ಕೇಳ್ರಪ್ಪೋ ಕೇಳಿ
Home / Sudina Special / ಯುವಕನ ಹೊಟ್ಟೆಯಲ್ಲಿತ್ತು ಗರ್ಭಕೋಶ…!

ಯುವಕನ ಹೊಟ್ಟೆಯಲ್ಲಿತ್ತು ಗರ್ಭಕೋಶ…!

ಕುಪ್ಪಂ : ಆಂಧ್ರಪ್ರದೇಶದ ಕುಪ್ಪಮ್‍ನ ಶ್ರೀಪ್ರಿಯಾ ನರ್ಸಿಂಗ್ ಹೋಮ್‍ನ ವೈದ್ಯರು ಒಂದು ಕ್ಷಣ ದಂಗಾಗಿ ಹೋಗಿದ್ದರು. ಕಾರಣ, ಚಿಕಿತ್ಸೆಗೆಂದು ಬಂದಿದ್ದ ಯುವಕನ ಹೊಟ್ಟೆಯಲ್ಲಿತ್ತು ಗರ್ಭಕೋಶ…! ಇದು ಅಪರೂಪದಲ್ಲಿ ಅಪರೂಪವಾದ ಸಮಸ್ಯೆ. ಆದರೆ, ಜಾಣ ವೈದ್ಯರು ಈ ಯುವಕನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ತಮಿಳುನಾಡಿನ ಇಟುಕಪಲ್ಲಿಯ ರೈತ ಅಮರೇಶ್ ಎಂಬ 23 ವರ್ಷದ ಯುವಕ ಹೊಟ್ಟೆ ನೋವಿನ ಚಿಕಿತ್ಸೆಗಾಗಿ ಈ ಆಸ್ಪತ್ರೆಗೆ ದಾಖಲಾಗಿದ್ದ. ಸ್ಕ್ಯಾನಿಂಗ್ ಎಲ್ಲಾ ಮಾಡಿದ ಮೇಲೆ ಯುವಕನಿಗೆ ಹರ್ನಿಯಾ ಇದೆ ಎಂದು ಗೊತ್ತಾಯ್ತು. ವೈದ್ಯರು ಶಸ್ತ್ರಚಿಕಿತ್ಸೆಗೂ ವ್ಯವಸ್ಥೆ ಮಾಡಿದ್ದರು. ಆದರೆ, ಈ ಶಸ್ತ್ರಚಿಕಿತ್ಸೆ ವೇಳೆ ಯುವಕನ ಹೊಟ್ಟೆಯಲ್ಲಿ ಗರ್ಭಕೋಶ ಪತ್ತೆಯಾಗಿದೆ. ತುಂಬಾ ಸೂಕ್ಷ್ಮವಾದ ಈ ಶಸ್ತ್ರಚಿಕಿತ್ಸೆ ವೈದ್ಯರಿಗೂ ಸವಾಲಾಗಿ ಹೋಗಿತ್ತು. ಆದರೆ, ಈ ಗರ್ಭಕೋಶ ಕಾರ್ಯನಿರ್ವಹಿಸುತ್ತಿರಲಿಲ್ಲ. ಆದರೂ ಸಮಸ್ಯೆಯನ್ನು ಸೃಷ್ಟಿಸಿತ್ತು.

image courtesy : daily bhaskar

About sudina

Check Also

ಕ್ಷಮಾಪನಾ ಪತ್ರದೊಂದಿಗೆ ಕದ್ದ ಚಿನ್ನ ಹಿಂದಿರುಗಿಸಿದ ಕಳ್ಳ…!

ಅಲಫ್ಫುಜಾ : ಕೇರಳದ ಅಲಫ್ಫುಜಾದಲ್ಲಿ ವಿಚಿತ್ರ ಕಳ್ಳತನ ನಡೆದಿದೆ. ಕಳ್ಳನೊಬ್ಬ ತಾನು ಕದ್ದ ಚಿನ್ನವನ್ನು ಮತ್ತೆ ಅದೇ ಮನೆಗೆ ಹಿಂದಿರುಗಿಸಿ …

Leave a Reply

Your email address will not be published. Required fields are marked *

error: Content is protected !!