Monday , January 21 2019
ಕೇಳ್ರಪ್ಪೋ ಕೇಳಿ
Home / Film News / Bollywood / ಮೊದಲ ಕಿಸ್‍ನಿಂದ ಮೊದಲ ಬೋಲ್ಡ್ ಡ್ರೆಸ್‍ವರೆಗೆ! – ಇದು ಬಾಲಿವುಡ್ ಬ್ಯೂಟಿ ಲೋಕ

ಮೊದಲ ಕಿಸ್‍ನಿಂದ ಮೊದಲ ಬೋಲ್ಡ್ ಡ್ರೆಸ್‍ವರೆಗೆ! – ಇದು ಬಾಲಿವುಡ್ ಬ್ಯೂಟಿ ಲೋಕ

ಅದು ಭಾರತೀಯ ಚಿತ್ರರಂಗ `ಬಾಲಿವುಡ್’ ಆಗಿರದ ಕಾಲ. ಆಗ ನಮ್ಮ ಚಿತ್ರರಂಗಕ್ಕೆ ಇದ್ದ ಹೆಸರು `ಇಂಡಿಯನ್ ಫಿಲಂ ಇಂಡಸ್ಟ್ರಿ’. ಆ ಕಾಲಕ್ಕೆ ಬಹುತೇಕ ಚಿತ್ರಗಳಿಗೆ ಹಾಲಿವುಡ್ ಚಿತ್ರಗಳೇ ನಮಗೆ ಪಠ್ಯ. ಅಂದರೆ, ಹಾಲಿವುಡ್ ಚಿತ್ರದ ಛಾಯೆ ನಮ್ಮ ಚಿತ್ರದಲ್ಲೂ ಅಂದು ಅಲ್ಲಲ್ಲಿ ಇಣುಕುತ್ತಿತ್ತು. ಬಹುತೇಕ ಎಲ್ಲಾ ವಿಭಾಗದಲ್ಲೂ ಹಾಲಿವುಡ್‍ನ ನೆರಳು ಕಾಣುತ್ತಿತ್ತು. ಇದರ ಜೊತೆ ಜೊತೆಗೇ ನಮ್ಮತನವೂ ಮಿಳಿತವಾಗಿ ಚಿತ್ರ ಹೊಸ ಕಲಾಕೃತಿಯಾಗುತ್ತಿತ್ತು. ದಿನಕಳೆದಂತೆ ನಮ್ಮದೇ ಆದ ಇನ್ನೊಂದು ಶೈಲಿ ರೂಪುಗೊಂಡಿತು.

ಅದಕ್ಕಿಂತಲೂ ಮುಖ್ಯವಾಗಿ ಅಂದಿನ ಚಿತ್ರ, ನಟನೆ ಅಥವಾ ಇನ್ನಾವುದೇ ವಿಭಾಗವನ್ನು ನೋಡಿದಾಗಲೂ ಅಲ್ಲಿ ಎಲ್ಲೂ `ಅತಿರೇಕ’ ಎನ್ನುವಂತಹದಿರುತ್ತಿರಲಿಲ್ಲ. ಎಲ್ಲವೂ ವಾಸ್ತವವಾಗಿತ್ತು. ಮನುಷ್ಯನ ಬದುಕಿಗೆ ಹತ್ತಿರವಾಗಿತ್ತು. ಕೆಲವೊಮ್ಮೆ ನಮ್ಮದೇ ಕತೆ ತೆರೆ ಮೇಲೆ ಬಂದಿದೆಯೋ ಎಂಬಷ್ಟರ ಮಟ್ಟಿಗೆ `ಒರಿಜಿನಾಲಿಟಿ’ಯನ್ನು ಕಾಯ್ದುಕೊಳ್ಳುತ್ತಿದ್ದವು ಅಂದಿನ ಚಿತ್ರಗಳು. ಅದರಲ್ಲೂ ನಟ, ನಟಿಯರು ಕೂಡಾ ತಮ್ಮದೇ ನಟನಾ ಕೌಶಲ್ಯದ ಮೂಲಕ ಗಮನ ಸೆಳೆದಿದ್ದರು.

ಮಹಿಳೆಯರಿಗೂ ಅಂದು ಸಮಾನ ಸ್ಥಾನವಿತ್ತು. ಮಹಿಳೆಯರು ಪುರುಷರಷ್ಟೇ ಸಮಾನರು ಎಂಬಂತಹ ಪರಿಸ್ಥಿತಿ ಚಿತ್ರರಂಗದಲ್ಲಿ ಆ ಕಾಲದಲ್ಲಿ ಇತ್ತು. ಒಂದರ್ಥದಲ್ಲಿ ಚಿತ್ರರಂಗದ ಆರಂಭದ ಆ ಕಾಲ ನಿಜಾರ್ಥದ ಸುವರ್ಣಯುಗ. ಯಾವುದೇ `ಗಾಡ್ ಫಾದರ್’ ಅಥವಾ `ಗಾಡ್ ಮದರ್’ಗಳಿಲ್ಲದೆ ಅಂದು ಬಹುತೇಕ ನಟಿಯರು ತಮ್ಮ ಸ್ವತ ಬಲದಿಂದ ಬೆಳೆದಿದ್ದರು. ಯಾರ ಹಂಗೂ ಇಲ್ಲದೆ ಸ್ವಶಕ್ತಿಯಿಂದ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡಿದ್ದರು ಅದೆಷ್ಟೋ ನಟಿಯರು. ಸಮಾಜದಲ್ಲಿರುವ ಒಂದಷ್ಟು ಸೀಮಿತ `ಚೌಕಟ್ಟು’ಗಳನ್ನು ಮೀರಿ ಬೆಳೆದವರು ಇವರು. ಆ ಕಾಲಕ್ಕೆ ಇಂತಹ `ಬೋಲ್ಡ್’ ಹೆಜ್ಜೆ ಇಡುವುದು ಈಗಿನಷ್ಟು ಸುಲಭದ್ದಾಗಿರಲಿಲ್ಲ. ಬನ್ನಿ ಹಾಗಾದರೆ, ಎಲ್ಲಾ ಚೌಕಟ್ಟುಗಳನ್ನು ಮೀರಿ ಚಿತ್ರರಂಗದಲ್ಲಿ ಒಂದು ಬದಲಾವಣೆಗೆ ಕಾರಣರಾದ ಮೊದಲ ನಟೀಮಣಿಯರನ್ನೊಮ್ಮೆ ಭೇಟಿಯಾಗಿ ಬರೋಣ…
film - 1 devikaದೇವಿಕಾ ರಾಣಿ : ಸ್ಕ್ರೀನ್‍ನಲ್ಲಿ ಕಿಸ್ಸಿಂಗ್ ಸೀನ್‍ನಲ್ಲಿ ಕಾಣಿಸಿಕೊಂಡ ಮೊದಲ ನಟಿ :

ದೇವಿಕಾ ಚಿತ್ರರಂಗ ಕಂಡ ಬೋಲ್ಡ್ ಮತ್ತು ಬ್ಯೂಟಿಫುಲ್ ನಟಿ. ದೇವಿಕಾ ಸ್ಕ್ರೀನ್‍ನಲ್ಲಿ ಕಿಸ್ಸಿಂಗ್(ಈಗಿನಷ್ಟು ಅತಿರೇಕ ಅನಿಸುವಷ್ಟಲ್ಲ) ಸೀನ್‍ನಲ್ಲಿ ಕಾಣಿಸಿಕೊಂಡ ಮೊದಲ ಕಲಾವಿದೆ. 1933ರಲ್ಲಿ ಗಂಡ ಹಿಮಾನ್ಶ್ಯು ರಾಯ್ ನಿರ್ದೇಶನದ `ಕರ್ಮ’ ಚಿತ್ರದಲ್ಲಿ ದೇವಿಕಾ ಮೊದಲ ಬಾರಿಗೆ ಚುಂಬನದ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು. ಆ ಕಾಲಕ್ಕೆ ಇಂತಹ ದೃಶ್ಯದಲ್ಲಿ ಕಾಣುವುದೆಂದರೆ ಅದು ಸಾಮಾನ್ಯದ ವಿಚಾರವಲ್ಲ. ಈ ಮೂಲಕ ದೇವಿಕಾ ಆಗ ಗಮನ ಸೆಳೆದಿದ್ದರು. `ಕರ್ಮ’ ಚಿತ್ರಕ್ಕೆ ಬಳಿಕ `ನಾಗನ್ ಕಿ ರಾಗಿಣಿ’ ಎಂದು ಮರು ನಾಮಕರಣ ಮಾಡಲಾಗಿತ್ತು. ಇನ್ನು, ಇದೇ ಚಿತ್ರದಲ್ಲಿ ಇಂಗ್ಲೀಷ್ ಟ್ರ್ಯಾಕನ್ನು ಹಾಡುವ ಮೂಲಕ ಭಾರತೀಯ ಸಿನಿಮಾ ರಂಗದಲ್ಲಿ ಇಂಗ್ಲೀಷ್ ಹಾಡಿಗೆ ಧ್ವನಿ ನೀಡಿದ ಮೊದಲ ಮಹಿಳೆ ಎಂಬ ಕೀರ್ತಿಯೂ ದೇವಿಕಾ ರಾಣಿ ಮುಡಿಯಲ್ಲಿದೆ.
film - 2 fearless-nadia-hunterwaliಮೇರಿ ಇವಾನ್ಸ್ : ಮೊದಲ ಆ್ಯಕ್ಷನ್ ಹೀರೋಯಿನ್ :

ಮೇರಿ ಇವಾನ್ಸ್ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡುವುದಕ್ಕೂ ಮೊದಲು ಸರ್ಕಸ್ ಕಂಪೆನಿಯಲ್ಲಿ ವ್ಯಾಯಾಮ ಸೇರಿದಂತೆ ದೈಹಿಕ ಚಟುವಟಿಕೆಗಳ ಟ್ರೈನರ್ ಆಗಿದ್ದವರು. ಬಳಿಕ 1935ರಲ್ಲಿ `ಹಂಟರ್‍ವಾಲಿ’ ಚಿತ್ರದಲ್ಲಿ ನಟಿಸಿ ಇವರು ಎಲ್ಲರ ಗಮನ ಸೆಳೆದರು. ಈ ಚಿತ್ರದಲ್ಲಿ ಫಿಯರ್‍ಲೆಸ್ ನದಿಯಾ ಎಂದು ಇವರಿಗೆÉ ನಾಮಕರಣ ಮಾಡಲಾಗಿತ್ತು. ಇದು ಹಿಂದಿಯ ಸ್ಟಂಟ್ ಫಿಲಂ. ಈ ಚಿತ್ರ ನದಿಯಾಗೆ ಖ್ಯಾತಿ ತಂದುಕೊಟ್ಟಿತ್ತು. ಇದಾದ ಬಳಿಕ ಇಂತಹದ್ದೇ ಹಲವು ಚಿತ್ರಗಳಲ್ಲಿ ನದಿಯಾ ನಟಿಸಿದ್ದರು.
film -  3 zeenat-amanಜೀನತ್ ಅಮಾನ್ : ಇಂಡಿಯನ್ ಸಿನೆಮಾದ ಮೊದಲ ಸೆಕ್ಸ್ ಸಿಂಬಲ್ :

ಮಾಜಿ ಮಿಸ್ ಏಷ್ಯಾ ಬಹುತೇಕ ಸಂಪ್ರದಾಯ, ರೂಢಿಯನ್ನು ಒಡೆದು ಮುನ್ನುಗ್ಗಿದವರು. ಯಾವುದೇ ಅಂಜಿಕೆ, ಅಳುಕಿಲ್ಲದೆ ಬೋಲ್ಡ್ ಆಗಿ ಕಾಣಿಸಿಕೊಂಡವರು ಜೀನತ್. 1970ರ ದಶಕದಲ್ಲಿ ಜೀನತ್ ಖ್ಯಾತಿಯ ಉತ್ತುಂಗದಲ್ಲಿದ್ದರು. ತನ್ನ ಬೋಲ್ಡ್ ಮತ್ತು ಬ್ಯೂಟಿಫುಲ್ ಲುಕ್‍ನಿಂದಲೇ ಅಮಾನ್ ಗಮನ ಸೆಳೆದಿದ್ದರು. `ಸತ್ಯಂ ಶಿವಂ ಸುಂದರಂ’ ಹಾಡಿನಲ್ಲಿ ಜೀನತ್ ಕಾಣಿಸಿಕೊಂಡ ರೀತಿ ಈಗಲೂ ಒಂದು ಕಲಾಕೃತಿಯಾಗಿಯೇ ಉಳಿದುಕೊಂಡಿದೆ. ಅಶ್ಲೀಲತೆಗೆ ಎಡೆಮಾಡಿಕೊಡದೆ, ಬೋಲ್ಡ್‍ನೆಸ್‍ಗೂ ಕಡಿಮೆಯಾಗದಂತೆ ಕಾಣಿಸಿಕೊಂಡಿದ್ದ ಜೀನತ್‍ಗೆ ಈ ಹಾಡು ಸಾಕಷ್ಟು ಪ್ರಸಿದ್ಧಿಯನ್ನು ತಂದುಕೊಟ್ಟಿತ್ತು.
film - 4 - Sharmila-Tagore-Bollywood-Fashionistas-of-70sಶರ್ಮಿಳಾ ಠಾಗೋರ್ : ಬಿಕಿನಿ ತೊಟ್ಟ ಮೊದಲ ನಟಿ

ಈಗ ಎಲ್ಲಾ ಚಿತ್ರಗಳಲ್ಲೂ ಬಿಕಿನಿ ತೊಡುವುದು ಸಾಮಾನ್ಯ. ಆದರೆ, ಮೊದಲ ಬಾರಿಗೆ ಭಾರತೀಯ ಸಿನೆಮಾದಲ್ಲಿ ಬಿಕಿನಿ ತೊಟ್ಟವರು ಶರ್ಮಿಳಾ. `ಆ್ಯನ್ ಈವ್‍ನಿಂಗ್ ಇನ್ ಪ್ಯಾರಿಸ್’ ಚಿತ್ರದಲ್ಲಿ ಠಾಗೋರ್ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದರು.
film -  5 - fatima begumಫಾತಿಮಾ ಬೇಗಂ : ಮೊದಲ ನಿರ್ಮಾಪಕಿ ಮತ್ತು ನಿರ್ದೇಶಕಿ

ಭಾರತೀಯ ಚಿತ್ರರಂಗದಲ್ಲಿ ಎಲ್ಲಾ ವಿಭಾಗಗಳಲ್ಲೂ ಮಹಿಳೆಯರು ಗಮನ ಸೆಳೆದಿದ್ದಾರೆ ಎಂಬುದಕ್ಕೆ ಸಾಕ್ಷಿ ಇವರು. ಫಾತಿಮಾ ಬೇಗಂ ಭಾರತೀಯ ಸಿನೆಮಾದ ಮೊದಲ ನಿರ್ಮಾಪಕಿ ಮತ್ತು ನಿರ್ದೇಶಕಿ. 1926ರಲ್ಲಿ ಫಾತಿಮಾ ತಮ್ಮದೇ ಆದ ಪ್ರೊಡಕ್ಷನ್ ಕಂಪೆನಿ `ಫಾತಿಮಾ ಫಿಲಂ’ ಆರಂಭಿಸಿದರು. ಈ ಮೂಲಕ ಹಲವು ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದ್ದರು.
film - 6 bhanuಭಾನು ಅತೈಯಾ : ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳೆ

ಹಳೇ ಚಿತ್ರಗಳಲ್ಲಿ ಕಾಸ್ಟ್ಯೂಮ್ ಡಿಸೈನರ್‍ಗಳಿಗೆ ಮಹತ್ವದ ಸ್ಥಾನವೇ ಇತ್ತು. ದೊಡ್ಡ ನಟ, ನಟಿಯರಿಗೆ ಕಾಸ್ಟ್ಯೂಮ್ ಡಿಸೈನ್ ಮಾಡುವ ಪರಿಣತರು ಅಂದಿದ್ದರು. ಭಾನು ಅತೈಯಾ ಕೂಡಾ ಅವರಲ್ಲಿ ಒಬ್ಬರು. ಇವರು 1982ರಲ್ಲಿ ರಿಚರ್ಡ್ ಅಟೆನ್‍ಬರ್ಗ್ ನಿರ್ದೇಶನದ ಗಾಂಧಿ ಚಿತ್ರದ ಕಾಸ್ಟ್ಯೂಮ್ ಡಿಸೈನ್‍ಗಾಗಿ ಆಸ್ಕರ್ ಪ್ರಶಸ್ತಿ ಪಡೆದಿದ್ದರು.
film - 7 vijayanthimalaವೈಜಯಂತಿಮಾಲಾ : ಹಿಂದಿ ಚಿತ್ರರಂಗದಲ್ಲಿ ಹೆಸರು ಮಾಡಿದ ಮೊದಲ ದಕ್ಷಿಣದ ನಟಿ

60ರ ದಶಕದಲ್ಲಿ ಬಹಳ ಹೆಸರು ಮಾಡಿದ್ದ ನಟಿ ವೈಜಯಂತಿಮಾಲಾ. ದಕ್ಷಿಣ ಭಾರತದ ಈ ನಟಿ ಬಹುತೇಕ ಪ್ರಮುಖ ಹಿಂದಿ ಚಿತ್ರಗಳಲ್ಲಿ ನಟಿಸಿದ್ದರು. ಸಂಗಮ್, ಮಧುಮತಿ, ಲೀಡರ್ ಸೇರಿದಂತೆ ಹಲವು ಪ್ರಸಿದ್ಧ ಚಿತ್ರಗಳ ಮೂಲಕ ಹೆಸರು ಮಾಡಿದವರು.

when shabana went bald shown to user

ಶಬಾನಾ ಅಜ್ಮಿ : ತಲೆಬೋಳಿಸಿ ನಟಿಸಿದ ಮೊದಲ ನಟಿ

ಚಿತ್ರವೊಂದಕ್ಕೆ ತಲೆ ಬೋಳಿಸಿಕೊಂಡ ಮೊದಲ ನಟಿ ಶಬಾನಾ. ಪ್ರಗತಿಪರ ನಿಲುವಿನಿಂದಲೂ ಖ್ಯಾತಿ ಆದವರು ಇವರು. ಚಿತ್ರಗಳ ಆಯ್ಕೆಯಿಂದ ಹಿಡಿದು ಬಹುತೇಕ ವಿಚಾರದಲ್ಲೂ ಶಬಾನಾ ಸುದ್ದಿಯಾದವರು. ಪ್ರಗತಿಪರ ಚಿಂತನೆಯನ್ನೊಳಗೊಂಡ ಶಬಾನಾ ಹಲವು ಬಾರಿ ಬೆದರಿಕೆಯನ್ನೂ ಎದುರಿಸಬೇಕಾಗಿ ಬಂದಿತ್ತು.

ಭಾರತೀಯ ಸಿನೆಮಾರಂಗದ ಬಗ್ಗೆ ಸಿಂಹಾವಲೋಕನ ಮಾಡಿದಾಗ ಈ ಕಲಾವಿದೆಯರ ಹೆಜ್ಜೆ ಗುರುತು ಗಟ್ಟಿಯಾಗಿಯೇ ಕಾಣುತ್ತದೆ. ಸಿನೆಮಾರಂಗವನ್ನು ಕಟ್ಟುವಲ್ಲಿ ಈ ಕಲಾವಿದೆಯರ ಪಾತ್ರವೂ ಮಹತ್ವದ್ದು. ಈ ನಟಿಯರೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ ಸಿನಿಮಾ ಲೋಕದಲ್ಲಿ ಬದಲಾವಣೆ ತಂದವರು. ಹೊಸ ಮಾರ್ಗವನ್ನು ಹಾಕಿಕೊಟ್ಟವರು.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!