Monday , August 20 2018
ಕೇಳ್ರಪ್ಪೋ ಕೇಳಿ
Home / Film News / Tollywood / ಶೀಘ್ರ ನಾಗಚೈತನ್ಯ, ಸಮಂತಾ ನಿಶ್ಚಿತಾರ್ಥ…?

ಶೀಘ್ರ ನಾಗಚೈತನ್ಯ, ಸಮಂತಾ ನಿಶ್ಚಿತಾರ್ಥ…?

ಹೈದರಾಬಾದ್: ತೆಲುಗು ಸ್ಟಾರ್ ನಾಗಚೈತನ್ಯ ಮತ್ತು ಸಮಂತಾ ಇಬ್ಬರು ಪ್ರೇಮಪತಂಗಗಳು ಎಂಬ ಸುದ್ದಿ ಬಹಳ ಹಳೆಯದ್ದು. ಇತ್ತೀಚೆಗಷ್ಟೇ ಒಂದು ವೀಡಿಯೋ ಹೊರಬಂದಿತ್ತು. ಈ ವೀಡಿಯೋದಲ್ಲಿ ಇವರಿಬ್ಬರು ಬಾಲ್ಕನಿಯಲ್ಲಿ ಸುತ್ತಾಡುವ ದೃಶ್ಯವಿತ್ತು. ಹೀಗಾಗಿ, ಇವರಿಬ್ಬರ ಪ್ರೀತಿ ಇನ್ನಷ್ಟು ಗಾಢವಾಗಿದೆ ಎಂಬ ಸುದ್ದಿ ಹಬ್ಬಿದೆ. ಅದೂ ಅಲ್ಲದೆ, ಇಬ್ಬರೂ `ಲಿವಿಂಗ್ ಟುಗೇದರ್’ ರೀತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಜೊತೆಗೆ, ಶೀಘ್ರ ಇವರಿಬ್ಬರ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ತಮ್ಮ ಸಂಬಂಧಕ್ಕೆ ಅಧಿಕೃತ ಮುದ್ರೆಯೊತ್ತಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಮಂತಾ ಮತ್ತು ನಾಗಚೈತನ್ಯನ ಹೆತ್ತವರು ಭೇಟಿಯಾಗಿದ್ದು ನಿಶ್ಚಿತಾರ್ಥದ ಸುದ್ದಿಗೆ ಇನ್ನಷ್ಟು ಪುಷ್ಟಿ ಕೊಟ್ಟಿದೆ. ಮಕ್ಕಳ ಆಸೆಯಂತೆ ಇಬ್ಬರಿಗೂ ಮದುವೆ ಮಾಡಲು ಹೆತ್ತವರು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಒಂದು ಮೂಲಗಳ ಪ್ರಕಾರ ನಾಗಚೈತನ್ಯ ಪ್ರೇಮಮ್ ಚಿತ್ರದ ಶೂಟಿಂಗ್ ಪೂರ್ಣವಾದ ಬಳಿಕ ನಿಶ್ಚಿತಾರ್ಥ ನಡೆಯಲಿದೆಯಂತೆ.

About sudina

Check Also

ಎನ್​ಟಿಆರ್​ ಪಾತ್ರಕ್ಕೆ ಪ್ರಕಾಶ್​ ರೈ, ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ರೋಜಾ…?

ಹೈದರಾಬಾದ್ : ರಾಮ್​ ಗೋಪಾಲ್​ ವರ್ಮಾ… ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ… ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ …

Leave a Reply

Your email address will not be published. Required fields are marked *

error: Content is protected !!