Tuesday , April 23 2019
ಕೇಳ್ರಪ್ಪೋ ಕೇಳಿ
Home / News NOW / ಇಸ್ತಾಂಬುಲ್ ಏರ್‍ಪೋರ್ಟ್‍ನಲ್ಲಿ ಆತ್ಮಾಹುತಿ ದಾಳಿ : 36 ಮಂದಿ ಸಾವು

ಇಸ್ತಾಂಬುಲ್ ಏರ್‍ಪೋರ್ಟ್‍ನಲ್ಲಿ ಆತ್ಮಾಹುತಿ ದಾಳಿ : 36 ಮಂದಿ ಸಾವು

ಇಸ್ತಾಂಬುಲ್ : ಟರ್ಕಿಯ ಪ್ರಮುಖ ನಗರ ಇಸ್ತಾಂಬುಲ್ ಏರ್‍ಪೋರ್ಟ್‍ನಲ್ಲಿ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿದೆ. ಈ ಸ್ಫೋಟದಲ್ಲಿ ಕನಿಷ್ಟ 36 ಮಂದಿ ಸಾವನ್ನಪ್ಪಿರುವುದಾಗಿ ಪ್ರಾಥಮಿಕ ಮಾಹಿತಿಗಳು ದೃಢಪಡಿಸಿವೆ. ಇದಲ್ಲದೆ 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಏರ್‍ಪೋರ್ಟ್‍ನ ಮೂರು ಭಾಗದಲ್ಲಿ ಆತ್ಮಾಹುತಿ ದಾಳಿ ನಡೆದಿದೆ. ಜೊತೆಗೆ, ಉಗ್ರರು ಗುಂಡಿನ ಮಳೆಗರೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
isthanmbul 1

ಇದು ಐಸಿಸ್ ಉಗ್ರರ ಕೃತ್ಯ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನ ಮಂತ್ರಿ ಬಿನಾಲ್ ಎಲ್ಡ್ರಿಮ್ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

Passengers embrace each other as they wait outside Istanbul's Ataturk airport, early Wednesday, June 29, 2016 following their evacuation after a blast. Suspected Islamic State group extremists have hit the international terminal of Istanbul's Ataturk airport, killing dozens of people and wounding many others, Turkish officials said Tuesday. Turkish authorities have banned distribution of images relating to the Ataturk airport attack within Turkey. (AP Photo/Emrah Gurel) TURKEY OUT

isthanmbul 4ಅಂತಾರಾಷ್ಟ್ರೀಯ ವಿಮಾನಗಳು ಪ್ರವೇಶಿಸಿಸುವ ಟರ್ಮಿನಲ್, ದೇಶೀಯ ವಿಮಾನ ಪ್ರವೇಶಿಸುವ ಟರ್ಮಿನಲ್ ಮತ್ತು ಪಾರ್ಕಿಂಗ್ ಸ್ಥಳದಲ್ಲಿ ಬಾಂಬ್ ಸ್ಫೋಟಿಸಲಾಗಿದೆ. ಇದಲ್ಲದೆ, ಓರ್ವ ಉಗ್ರ ಎಕೆ 47 ಅಟೋಮ್ಯಾಟಿಕ್ ರೈಫಲ್‍ನಿಂದ ಪ್ರಯಾಣಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಬಳಿಕ ಆತನೂ ಆತ್ಮಾಹುತಿ ಮಾಡಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು, ಘಟನೆಯ ಬಳಿಕ ಏರ್‍ಪೋರ್ಟ್‍ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸದ್ಯ ವಿಮಾನಗಳ ಹಾರಾಟ ಎಂದಿನಂತೆ ಆರಂಭವಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.

About sudina

Check Also

ಧೂಮಪಾನಿಗಳಿಗೆ ಶಾಕಿಂಗ್ ನ್ಯೂಸ್…!

ಬೆಂಗಳೂರು : ಧೂಮಪಾನಿಗಳಿಗೆ ಶಾಕಿಂಗ್ ನ್ಯೂಸ್ ಒಂದು ಬಂದಿದೆ. ಇನ್ನು ಮುಂದೆ ಬಾರ್, ಪಬ್, ರೆಸ್ಟೋರೆಂಟ್‍ಗಳಲ್ಲಿ ಸಹ ಇನ್ನು ಮುಂದೆ …

Leave a Reply

Your email address will not be published. Required fields are marked *

error: Content is protected !!