Monday , September 24 2018
ಕೇಳ್ರಪ್ಪೋ ಕೇಳಿ
Home / News NOW / ಪೋಷಕರೇ ನಿಮಗಿದು ಎಚ್ಚರಿಕೆ ಗಂಟೆ : 4 ವರ್ಷದ ಕಂದನ ದುರಂತ ಅಂತ್ಯ…!

ಪೋಷಕರೇ ನಿಮಗಿದು ಎಚ್ಚರಿಕೆ ಗಂಟೆ : 4 ವರ್ಷದ ಕಂದನ ದುರಂತ ಅಂತ್ಯ…!

ಹೈದರಾಬಾದ್ : ಆಟವಾಡುತ್ತಿದ್ದ ನಾಲ್ಕು ವರ್ಷದ ಹುಡುಗನೊಬ್ಬ ಮುಖಕ್ಕೆ ಪ್ಲಾಸ್ಟಿಕ್ ಕವರ್ ಸುತ್ತಿಕೊಂಡು ಬಳಿಕ ಅದನ್ನು ತೆಗೆಯಲಾಗದೆ ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ನಿಜಾಂಪೇಟ್‍ನಲ್ಲಿ ನಡೆದಿದೆ. ಕುಕಟಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಶ್ರೀಯಾನ್ ಮೃತಪಟ್ಟ ಕಂದ.

ಶ್ರೀಯಾನ್ ಪ್ಲಾಸ್ಟಿಕ್ ಕವರ್‍ನಲ್ಲಿ ಆಟವಾಡುತ್ತಿದ್ದಾಗ ಅಚಾನಕ್ಕಾಗಿ ತಲೆಗೆ ಹಾಕಿಕೊಂಡಿದ್ದ. ಆದರೆ, ಬಳಿಕ ಈ ಪ್ಲಾಸ್ಟಿಕ್ ಕುತ್ತಿಗೆಗೆ ಗಟ್ಟಿಯಾಗಿ ಬಿಗಿದ ಪರಿಣಾಮ ಉಸಿರುಗಟ್ಟಿ ಬಾಲಕ ಸಾವನ್ನಪ್ಪಿದ್ದಾನೆ. ಗಟ್ಟಿಯಾದ ಪ್ಲಾಸ್ಟಿಕ್‍ನ್ನು ತೆಗೆಯಲು ಹುಡುಗ ಪ್ರಯತ್ನಿಸುತ್ತಿದ್ದಾಗ ಆ ಪ್ಲಾಸ್ಟಿಕ್ ಇನ್ನಷ್ಟು ಗಟ್ಟಿಯಾಗಿ ಕುತ್ತಿಗೆಗೆ ಬಿಗಿದಿತ್ತು. ಹೀಗಾಗಿ, ಶ್ರೀಯಾನ್ ಉಸಿರುಗಟ್ಟಿ ಪ್ರಜ್ಞೆ ಕಳೆದುಕೊಂಡಿದ್ದ. ಮನೆಯಲ್ಲೇ ಇದ್ದ ತಾಯಿಗೆ ಇದು ಯಾವುದೂ ಗೊತ್ತಾಗಿರಲಿಲ್ಲ. ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಮಗನ್ನು ಕಂಡು ಹೆದರಿದ ತಾಯಿ ತಕ್ಷಣ ಆಸ್ಪತ್ರೆಗೆ ಸಾಗಿಸಿದರಾದರೂ ಚಿಕಿತ್ಸೆ ಫಲಕಾರಿಯಾದ ಕಂದ ಕೊನೆಯುಸಿರೆಳೆದಿದ್ದಾನೆ.

About sudina

Check Also

ಬಂಟ್ವಾಳ : ವಿವಿಧ ಸುದ್ದಿಗಳ ಒಂದು ನೋಟ

ಸೋಣ ಅಮಾವಾಸ್ಯೆ ತೀರ್ಥಸ್ನಾನ : ಭೂಲೋಕದ ಕೈಲಾಸವೆಂದೇ ಪ್ರಖ್ಯಾತವಾದ ನರಹರಿ ಪರ್ವತದಲ್ಲಿ ಸೆಪ್ಟೆಂಬರ್ 9ರ ಭಾನುವಾರ ಬೆಳಗ್ಗೆ 5 ಗಂಟೆಯಿಂದ …

Leave a Reply

Your email address will not be published. Required fields are marked *

error: Content is protected !!