Monday , August 20 2018
ಕೇಳ್ರಪ್ಪೋ ಕೇಳಿ
Home / Gulf News / ಬೆರಳಿಂದ ಉಂಗುರ ತೆಗೆಯಲು ಬಂದ ರಕ್ಷಣಾ ಪಡೆ…!

ಬೆರಳಿಂದ ಉಂಗುರ ತೆಗೆಯಲು ಬಂದ ರಕ್ಷಣಾ ಪಡೆ…!

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ
ತೈಫ್(ಸೌದಿ ಅರೇಬಿಯಾ) : ಏಳು ವರ್ಷದ ಬಾಲಕನ ಬೆರಳಲ್ಲಿ ಒಂದು ತಿಂಗಳಿಂದ ಸಿಲುಕಿದ್ದ ಉಂಗುರವನ್ನು ತೆಗೆಯಲು ರಕ್ಷಣೆ ಪಡೆ ಕೊನೆಗೂ ಯಶಸ್ವಿಯಾಗಿದೆ…! ಇಂತಹದೊಂದು ವಿಚಿತ್ರ ಘಟನೆ ನಡೆದಿರುವುದು ಸೌದಿ ಅರೇಬಿಯಾದ ತೈಫ್ ಸಿಟಿಯಲ್ಲಿ. ಒಂದು ತಿಂಗಳಿನಿಂದ ಬಾಲಕನ ಬೆರಳಿನಲ್ಲಿ ಈ ಉಂಗುರ ಇತ್ತು. ಆದರೆ, ಬೆರಳಲ್ಲಿ ಬಿಗಿಯಾಗಿದ್ದ ಉಂಗುರದಿಂದ ಹುಡುಗನ ಚರ್ಮವನ್ನೇ ಕೊರೆಯುತ್ತಿತ್ತು… ಇದರಿಂದ ಬಾಲಕ ತೀವ್ರ ಸಂಕಷ್ಟ ಎದುರಿಸುತ್ತಿದ್ದ. ಪೋಷಕರು ಎಷ್ಟೇ ಪ್ರಯತ್ನಿಸಿದರೂ ಉಂಗುರವನ್ನು ತೆಗೆಯಲು ಆಗಲಿಲ್ಲ. ಹೀಗಾಗಿ, ಕೊನೆಗೆ ನಾಗರಿಕ ರಕ್ಷಣಾ ಪಡೆಗೆ ಪೋಷಕರು ತಿಳಿಸಿದರು. ಬಂದ ರಕ್ಷಣಾ ಪಡೆ ಸುಮಾರು 15 ನಿಮಿಷಗಳ ಪ್ರಯತ್ನದಿಂದ ಉಂಗುರವನ್ನು ತೆಗೆದಿದೆ. ವಿಶೇಷ ಸಲಕರಣೆ ಮತ್ತು ಔಷಧಿಗಳನ್ನು ಬಳಸಿ ರಕ್ಷಣಾ ಪಡೆ ಕಾರ್ಯಾಚರಣೆಗಿಳಿದಿತ್ತು. ಬಾಲಕನ ಬೆರಳಿಗೆ ಯಾವುದೇ ಹಾನಿ ಆಗದ ರೀತಿಯಲ್ಲಿ ಜಾಗರೂಕತೆಯಿಂದ ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸಿದ್ದಾಗಿ ಸ್ಥಳೀಯ ಸುದ್ದಿ ವಾಹಿನಿಗಳು ವರದಿ ಮಾಡಿವೆ.

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!