Wednesday , November 21 2018
ಕೇಳ್ರಪ್ಪೋ ಕೇಳಿ
Home / News NOW / ಈ ದಂಪತಿ ಮೌಂಟ್ ಎವರೆಸ್ಟ್ ಹತ್ತಿಯೇ ಇಲ್ವಂತೆ…! ಸುಳ್ಳು ಫೋಟೋ ಕೊಟ್ಟು ಸುದ್ದಿ ಮಾಡಿದ್ದ ಜೋಡಿ…!

ಈ ದಂಪತಿ ಮೌಂಟ್ ಎವರೆಸ್ಟ್ ಹತ್ತಿಯೇ ಇಲ್ವಂತೆ…! ಸುಳ್ಳು ಫೋಟೋ ಕೊಟ್ಟು ಸುದ್ದಿ ಮಾಡಿದ್ದ ಜೋಡಿ…!

ನವದೆಹಲಿ : ಪುಣೆಯ ಪೊಲೀಸ್ ಕಾನ್ಸ್‍ಸ್ಟೇಬಲ್ ದಂಪತಿ ಮೌಂಟ್ ಎವರೆಸ್ಟ್ ಏರಿ ಸಾಧನೆ ಮಾಡಿದ್ದಾರೆ ಎಂದು ಇತ್ತೀಚೆಗೆ ಬಾರೀ ಸುದ್ದಿಯಾಗಿತ್ತು. ಪುಣೆ ಪೊಲೀಸ್ ಫೋರ್ಸ್‍ನ ಬ್ಯಾನರ್ ಹಿಡಿದು ಈ ದಂಪತಿ ಮೌಂಟ್ ಎವರೆಸ್ಟ್ ಮೇಲೆ ನಿಂತಿದ್ದ ಫೋಟೋ ಹಾಕಿದ್ದರು. ಇವರಿಬ್ಬರ ಸಾಧನೆಯನ್ನು ಇಡೀ ದೇಶವೇ ಕೊಂಡಾಡಿತ್ತು… ಪ್ರಶಂಸೆಯ ಸುರಿಮಳೆಯೇ ಹರಿದಿತ್ತು… ಆದರೆ, ಒಟ್ಟು ಈ ಪ್ರಕರಣಕ್ಕೆ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಅಸಲಿಗೆ ಈ ದಂಪತಿ ಮೌಂಟ್ ಎವರೆಸ್ಟ್ ಏರಿಯೇ ಇಲ್ವಂತೆ…! ಹೀಗಂತ ಮತ್ತೊಂದು ತಂಡ ವಾದ ಮಾಡುತ್ತಿದೆ…

ಅಂದು ದಿನೇಶ್ ಮತ್ತು ತಾರಕೇಶ್ವರಿ ದಂಪತಿ ಸಾಧನೆ ಮಾಡಿ ಹೀರೋಗಳಾಗಿದ್ದರು. ಆದರೆ, ಈಗ ಸಿಕ್ಕಿಬಿದ್ದು ವಿಲನ್‍ಗಳಾಗಿದ್ದಾರೆ…! ಮೇ 23 ರಂದು ಮೌಂಟ್ ಎವರೆಸ್ಟ್ ಏರಿದ್ದ ಫೋಟೋ ಹಾಕಿದ್ದ ಈ ದಂಪತಿ ಬಳಿಕ ಸುದ್ದಿಗೋಷ್ಠಿ ಕರೆದು ಇದು ನಮ್ಮ ಬಹುದಿನಗಳ ಕನಸು ಎಂದೆಲ್ಲಾ ಹೇಳಿದ್ದರು. ಆದರೆ, ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದ್ದ ಇದೇ ಮಹಾರಾಷ್ಟ್ರದ ಮತ್ತೊಂದು ಪರ್ವತರೋಹಿ ಗುಂಪು ಈ ಇಬ್ಬರ ನಡೆಯನ್ನು ಅನುಮಾನಿಸಿತ್ತು. ಅಲ್ಲದೆ, ಈ ದಂಪತಿ ಕೊಟ್ಟಿದ್ದ ಫೋಟೋ ಅಸಲಿಯಲ್ಲ ಎಂದು ಹೇಳಿದೆ. ಒಂದಾ ಈ ದಂಪತಿ ಮೌಂಟ್ ಎವರೆಸ್ಟ್ ಕೆಳಗೆ ಫೋಟೋ ತೆಗೆದು ತಿರುಚಿರಬೇಕು. ಅಥವಾ ಸ್ಟುಡಿಯೋದಲ್ಲಿ ಚಿತ್ರೀಕರಿಸಬೇಕೆಂದು ಈ ತಂಡ ವಾದಿಸಿದೆ. ಅಲ್ಲದೆ, ಇದೇ ತಿರುಚಿದ ಫೋಟೋವನ್ನು ದಂಪತಿ ಫೇಸ್‍ಬುಕ್‍ಗೆ ಹಾಕಿದ್ದಾರೆ ಎಂದೂ ಈ ತಂಡ ಹೇಳಿದೆ.

ಈ ವಾದಕ್ಕೆ ಪ್ರಮುಖ ಕಾರಣವನ್ನೂ ಈ ತಂಡ ನೀಡುತ್ತಿದೆ. ಅದು ಪರ್ವತ ಹತ್ತುವಾಗ ಬಳಸಿರುವ ಸಲಕರಣೆಯ ಬಣ್ಣ. ಈ ದಂಪತಿ ನೀಡಿದ ಒಂದೊಂದು ಫೋಟೋದಲ್ಲಿ ಒಂದೊಂದು ಬಣ್ಣದ ಸಲಕರಣೆಗಳು ಇವೆ…! ಹೀಗೆ ಪರ್ವತ ಹತ್ತುವಾಗ ಬಣ್ಣ ಬಣ್ಣದ ಡ್ರೆಸ್, ಶೋಗಳನ್ನು ಬದಲಾಯಿಸಲು ಸಾಧ್ಯವೇ ಎಂದು ಈ ತಂಡ ಪ್ರಶ್ನಿಸಿದೆ… ಆದರೂ ಈ ತಂಡ ದಂಪತಿ ಬೇಸ್ ಕ್ಯಾಂಪ್‍ನಲ್ಲಿ ಇದ್ದುದಾಗಿಯೂ, ಮೇ ಕೊನೆಯ ತಿಂಗಳ ವರೆಗೂ ಮೌಂಟ್ ಎವರೆಸ್ಟ್ ಹತ್ತಿಲ್ಲ ಎಂದೂ ಹೇಳಿದೆ. ಇದು ಪಕ್ಕಾ ಮೋಸದ ಕತೆ ಎಂದು ಹಿರಿಯ ಪರ್ವತರೋಹಿ ಸುರೇಂದ್ರ ಶಿಲ್ಕೆ ಹೇಳಿದ್ದಾರೆ.

ಈ ದೂರಿನ ಬಗ್ಗೆ ಈಗ ಪುಣೆ ಪೊಲೀಸರು ಆತಂಕರಿಕ ತನಿಖೆ ನಡೆಸುತ್ತಿದ್ದಾರೆ. ಇನ್ನೊಂದು ಕಡೆ, ಈ ದಂಪತಿ ಪರ್ವತವೇರಲು ಸಹಾಯ ಮಾಡಿದ್ದ ನೇಪಾಳ ಮೂಲದ ಮಕಲು ಅಡ್ವೆಂಚರ್ ಸಂಸ್ಥೆ ಈ ಆರೋಪವನ್ನು ತಳ್ಳಿ ಹಾಕಿದ್ದು, ದಂಪತಿ ಮೌಂಟ್ ಎವರೆಸ್ಟ್ ಏರಿದ್ದಾರೆ ಎಂದು ಘಂಟಾಘೋಷವಾಗಿ ಹೇಳುತ್ತಿದೆ. ಒಟ್ಟಾರೆ, ಈ ಪ್ರಕರಣವೇ ಈಗ ದೊಡ್ಡ ಗೊಂದಲದ ಗೂಡಾಗಿ ಪರಿಣಮಿಸಿದೆ.

About sudina

Check Also

ಪತ್ನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಟೆಕ್ಕಿ 15 ವರ್ಷದ ಬಳಿಕ ಸೆರೆ…!

ಬೆಂಗಳೂರು : 2003ರಲ್ಲಿ ಗುಜರಾತ್‍ನಲ್ಲಿ ಪತ್ನಿಯನ್ನು ಕೊಂದು ಹೆಸರು ಬದಲಾಯಿಸಿಕೊಂಡು ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯನ್ನು …

Leave a Reply

Your email address will not be published. Required fields are marked *

error: Content is protected !!