Saturday , October 20 2018
ಕೇಳ್ರಪ್ಪೋ ಕೇಳಿ
Home / Film News / Tollywood / ಸಂಮತಾ-ನಾಗಚೈತನ್ಯ ಪ್ರೀತಿ : ತಂದೆ ನಾಗಾರ್ಜುನಗೆ ಖುಷಿ

ಸಂಮತಾ-ನಾಗಚೈತನ್ಯ ಪ್ರೀತಿ : ತಂದೆ ನಾಗಾರ್ಜುನಗೆ ಖುಷಿ

ಹೈದರಾಬಾದ್ : ತೆಲುಗು ಸೂಪರ್‍ಸ್ಟಾರ್ ನಾಗಾರ್ಜುನರ ಪುತ್ರ ನಾಗಚೈತನ್ಯ ಪ್ರೀತಿಯಲ್ಲಿ ಬಿದ್ದಿದ್ದಾರೆ. ನಟಿ ಸಮಂತಾ ಜೊತೆ ನಾಗಚೈತನ್ಯರ ಪ್ರೇಮಕತೆ ಶುರುವಾಗಿದೆ. ಶೀಘ್ರ ಈ ಪ್ರೇಮ ದಾಂಪತ್ಯದಲ್ಲಿ ಸಾರ್ಥಕ್ಯ ಕಾಣುವ ಸಾಧ್ಯತೆಯೂ ಇದೆ. ಇನ್ನು, ಮಗನ ಪ್ರೀತಿಗೆ ತಂದೆ ನಾಗಾರ್ಜುನ ಕೂಡಾ ಖುಷಿ ವ್ಯಕ್ತಪಡಿಸಿದ್ದಾರೆ.

nagarjunaಮಗನ ಆಯ್ಕೆಯನ್ನು ನಾಗಾರ್ಜುನ ಕೊಂಡಾಡಿದ್ದಾರೆ. ಇನ್ನು, ಸಮಂತಾ ಮನೆಯಲ್ಲಿ ಇವರಿಬ್ಬರ ಪ್ರೀತಿಗೆ ಈಗಾಗಲೇ ಅಂತಿಮ ಮುದ್ರೆ ಸಿಕ್ಕಿದ್ದು, ಅವರು ನಾಗಾರ್ಜುನ ಬಳಿಯೂ ಈ ಬಗ್ಗೆ ಮಾತನಾಡಿದ್ದಾರೆ. ನಾಗಾರ್ಜುನರೂ ಈ ಬಗ್ಗೆ ಸಮ್ಮತಿ ಸೂಚಿಸಿದ್ದು, ಪ್ರೇಮ ಪತಂಗಗಳನ್ನು ಆಶೀರ್ವದಿಸಿದ್ದಾರೆ. ಹೀಗಾಗಿ, ಶೀಘ್ರದಲ್ಲೇ ಅದ್ದೂರಿ ಮದುವೆಯ ಸಿದ್ಧತೆಯೂ ಶುರುವಾಗಲಿದೆ. ಕಳೆದ ಒಂದು ವರ್ಷದಿಂದ ಇವರಿಬ್ಬರು ಪ್ರೀತಿಯಲ್ಲಿ ಮುಳುಗಿದ್ದಾರೆ. ಈ ಪ್ರೀತಿಯನ್ನು ಈ ವರ್ಷ ದಾಂಪತ್ಯದ ಘಟ್ಟಕ್ಕೆ ಕೊಂಡೊಯ್ಯಲು ಎಲ್ಲರೂ ನಿರ್ಧರಿಸಿದ್ದಾರೆ.

About sudina

Check Also

ಎನ್​ಟಿಆರ್​ ಪಾತ್ರಕ್ಕೆ ಪ್ರಕಾಶ್​ ರೈ, ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ರೋಜಾ…?

ಹೈದರಾಬಾದ್ : ರಾಮ್​ ಗೋಪಾಲ್​ ವರ್ಮಾ… ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ… ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ …

Leave a Reply

Your email address will not be published. Required fields are marked *

error: Content is protected !!