Saturday , January 19 2019
ಕೇಳ್ರಪ್ಪೋ ಕೇಳಿ
Home / Film News / Kollywood / `ಕಬಾಲಿ’ಯನ್ನು ಹೊತ್ತು ಸಾಗಲಿದೆ ಈ ವಿಶೇಷ ವಿಮಾನ…!

`ಕಬಾಲಿ’ಯನ್ನು ಹೊತ್ತು ಸಾಗಲಿದೆ ಈ ವಿಶೇಷ ವಿಮಾನ…!

ಚೆನ್ನೈ : ಸೂಪರ್‍ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ `ಕಬಾಲಿ’ ಚಿತ್ರಕ್ಕಾಗಿ ವಿಶೇಷ ವಿಮಾನವೊಂದು ಸಜ್ಜಾಗಿದೆ. ಈ ವಿಶೇಷ ವಿಮಾನ `ಕಬಾಲಿ’ಯನ್ನು ಹೊತ್ತು ದೇಶ ವಿದೇಶ ಸಂಚರಿಸಲಿದೆ… ಏರ್‍ಏಷ್ಯಾ ಕಬಾಲಿಕ್ಕಾಗಿ ತನ್ನದೊಂದು ವಿಮಾನವನ್ನು ವಿಶೇಷವಾಗಿ ಸಜ್ಜುಗೊಳಿಸಿದೆ. ಮಲೇಷ್ಯಾಕ್ಕೆ ಹಾರುವ ವಿಮಾನದಲ್ಲಿ ಕಬಾಲಿಯನ್ನು ಚಿತ್ರಿಸಲಾಗಿದೆ. ರಜನಿಕಾಂತ್ ಚಿತ್ರವೂ ಈ ವಿಮಾನದಲ್ಲಿದೆ… ವಿಮಾನದ ತುಂಬೆಲ್ಲಾ ರಜನಿ ಅವರೇ ರಾರಾಜಿಸುತ್ತಿದ್ದಾರೆ.
kabali 3 ಇನ್ನು, ಈ ವಿಮಾನ ರಜನಿ ಅಭಿಮಾನಿಗಳಿಗೋಸ್ಕರ ಚಿತ್ರ ಬಿಡುಗಡೆಯ ಮೊದಲ ದಿನ ಮತ್ತು ಮೊದಲ ಶೋ ಸಂದರ್ಭದಲ್ಲಿ ಬೆಂಗಳೂರಿನಿಂದ ಚೆನ್ನೈಗೆ ಹಾರಲಿದೆ. ಜೊತೆಗೆ, ಕಬಾಲಿ ಥೀಮ್ ಇರುವ ಮೆನೂ ಬೋರ್ಡ್‍ನ್ನು ಕೂಡಾ ಗೆಸ್ಟ್‍ಗಳಿಗೆ ನೀಡಲಾಗುತ್ತದೆ. ಸದ್ಯ ಈ ವಿಮಾನ ಒಟ್ಟು 10 ನಗರಗಳಲ್ಲಿ ಸಂಚರಿಸಲಿದೆ. ಬೆಂಗಳೂರು, ನವದೆಹಲಿ, ಗೋವಾ, ಪುಣೆ ಮತ್ತು ಕೊಚ್ಚಿ ಸೇರಿದಂತೆ ಪ್ರಮುಖ ನಗರಗಳಿಗೆ ಈ ವಿಮಾನ ಪ್ರಯಾಣ ಬೆಳೆಸುತ್ತಿದೆ.
kabali 2ಬಹುನಿರೀಕ್ಷಿತ ಕಬಾಲಿಯ ಬಿಡುಗಡೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಈ ಮೊದಲು ಒಂದು ಬಾರಿ ಮುಂದೂಡಿಕೆಯಾಗಿ ಜುಲೈ 15ಕ್ಕೆ ಚಿತ್ರ ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ಹೇಳಿತ್ತು. ಆದರೆ, ಇದೀಗ ಈ ದಿನಾಂಕ ಮತ್ತೆ ಜುಲೈ 22ಕ್ಕೆ ಹೋಗಿದೆ ಎಂದು ಹೇಳಲಾಗುತ್ತಿದೆ.

ಮಲೇಷ್ಯಾ ಮೂಲದ ಡಾನ್ ಪಾತ್ರದಲ್ಲಿ ರಜನಿಕಾಂತ್ ಅಭಿನಯಿಸಿದ್ದಾರೆ. ರಾಧಿಕಾ ಆಪ್ಟೆ ಈ ಚಿತ್ರದ ನಾಯಕಿಯಾಗಿದ್ದು, ಪಾ ರಂಜಿತ್ ನಿರ್ದೇಶನ ಮಾಡಿದ್ದಾರೆ.

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!