Tuesday , October 16 2018
ಕೇಳ್ರಪ್ಪೋ ಕೇಳಿ
Home / Sandalwood / ಇದು `ತಿಥಿ’ ಕಲಾವಿದರ `ತರ್ಲೆ ವಿಲೇಜ್’

ಇದು `ತಿಥಿ’ ಕಲಾವಿದರ `ತರ್ಲೆ ವಿಲೇಜ್’

ಮೈಸೂರು : `ತಿಥಿ’ ಚಿತ್ರ ಕನ್ನಡದ ಈ ವರ್ಷದ ಯಶಸ್ವಿ ಚಿತ್ರ… ಪಕ್ಕಾ ಗ್ರಾಮ್ಯ ಸೊಗಡಿನ ಈ ಚಿತ್ರ ದೇಶ ವಿದೇಶದ ಜನರ ಮೆಚ್ಚುಗೆ ಗಳಿಸಿತ್ತು. ಇದೇ ಯಶಸ್ಸಿ ಹುಮ್ಮಸ್ಸಿನಲ್ಲಿರುವ ಚಿತ್ರತಂಡ ಈಗ ಹೊಸದೊಂದು ಚಿತ್ರದ ತಯಾರಿ ನಡೆಸಿದೆ. ಈ ಬಾರಿ ಪಕ್ಕಾ ಕಾಮಿಡಿ ಸಬ್ಜೆಕ್ಟನ್ನು ಇಟ್ಟುಕೊಂಡು ಈ ಕಲಾವಿದರು ಚಿತ್ರ ಮಾಡಲು ಹೊರಟಿದ್ದಾರೆ.
vlcsnap-2016-07-01-16h26m19s363 vlcsnap-2016-07-01-16h26m28s519 vlcsnap-2016-07-01-16h26m45s268 vlcsnap-2016-07-01-16h26m51s112 vlcsnap-2016-07-01-16h27m02s424 vlcsnap-2016-07-01-16h27m26s549 vlcsnap-2016-07-01-16h27m31s674 vlcsnap-2016-07-01-16h27m36s330
`ತರ್ಲೆ ವಿಲೇಜ್’ ಎಂಬುದು ಈ ಹೊಸ ಚಿತ್ರದ ಹೆಸರು. ಈ ಚಿತ್ರ ಇವತ್ತು ಸೆಟ್ಟೇರಿದೆ. ಮೈಸೂರಿನ ಅಗ್ರಹಾರದಲ್ಲಿರುವ 101 ಗಣಪತಿ ದೇವಸ್ಥಾನದಲ್ಲಿ ಪೂಜೆ ಮಾಡುವ ಮೂಲಕ ಚಿತ್ರದ ಕೆಲಸ ಆರಂಭವಾಗಿದೆ. ಕೆ.ಎಂ.ರಘು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ರಘುವಿಗೆ ಇದು ಮೊದಲ ಪ್ರಯತ್ನ. ಈ ಚಿತ್ರ ಮೈಸೂರು ಹಾಗೂ ಮಂಡ್ಯದಲ್ಲಿ ಚಿತ್ರೀಕರಣಗೊಳ್ಳಲಿದೆ. `ದಕ್ಷ ಯಜ್ಞ’ ಚಿತ್ರ ನಿರ್ಮಿಸಿದ ಎಸ್.ಬಿ.ಶಿವು `ತರ್ಲೆ ವಿಲೇಜ್’ನ ನಿರ್ಮಾಪಕ. ತಿಥಿ ಚಿತ್ರದ ಪ್ರಧಾನ ನಟರಾದ ಸೆಂಚುರಿ ಗೌಡ, ಪೆಡ್ಡಣ್ಣ, ಅಭಿ, ತಮ್ಮಣ್ಣ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!