Sunday , July 22 2018
ಕೇಳ್ರಪ್ಪೋ ಕೇಳಿ
Home / Sandalwood / ಹುಲಿಯನ್ನು ದತ್ತು ಪಡೆದ ಗಜ : ಚಾಲೆಂಜಿಂಗ್ ಸ್ಟಾರ್‍ಗೆ ಪ್ರಾಣಿಯೆಂದರೆ ಬಲು ಪ್ರೀತಿ

ಹುಲಿಯನ್ನು ದತ್ತು ಪಡೆದ ಗಜ : ಚಾಲೆಂಜಿಂಗ್ ಸ್ಟಾರ್‍ಗೆ ಪ್ರಾಣಿಯೆಂದರೆ ಬಲು ಪ್ರೀತಿ

ಮೈಸೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಪ್ರಾಣಿಗಳೆಂದರೆ ಬಲು ಪ್ರೀತಿ… ಮೈಸೂರಿನಲ್ಲಿರುವ ದರ್ಶನ್ ಫಾರ್ಮ್‍ಹೌಸ್‍ನಲ್ಲಿ ಸಾಕಷ್ಟು ಪ್ರಾಣಿ ಪಕ್ಷಿಗಳಿವೆ. ಇವಲ್ಲದೆ, ಮೈಸೂರು ಮೃಗಾಲಯದಲ್ಲಿ ಈ ಹಿಂದೆಯೇ ದರ್ಶನ್ ಆನೆಯೊಂದನ್ನು ದತ್ತು ಪಡೆದಿದ್ದರು. ಇದೀಗ ಇದೇ ದರ್ಶನ್ ಮೃಗಾಲಯದಲ್ಲಿ ಹುಲಿಯನ್ನು ದತ್ತು ಪಡೆದಿದ್ದಾರೆ.
vlcsnap-2016-06-30-17h14m38s975 vlcsnap-2016-06-30-17h13m48s053 vlcsnap-2016-06-30-17h13m42s365 vlcsnap-2016-06-30-17h13m37s834 vlcsnap-2016-06-30-17h13m28s647 vlcsnap-2016-06-30-17h13m24s725ಐದು ವರ್ಷಗಳ ಹಿಂದೆ ದರ್ಶನ್ ಆನೆ ಮರಿಯನ್ನು ದತ್ತು ಪಡೆದಿದ್ದರು. ಈಗ ಆನೆಯ ಜೊತೆಗೆ ಒಂದು ಹುಲಿ ಖರ್ಚನ್ನೂ ದರ್ಶನ್ ವಹಿಸಿಕೊಂಡಿದ್ದಾರೆ… ಹುಲಿಗೆ ಒಂದು ಲಕ್ಷ ಹಾಗೂ ಆನೆಗೆ ಒಂದು ಲಕ್ಷ ಎಪ್ಪತ್ತೈದು ಸಾವಿರ ಹಣವನ್ನು ದರ್ಶನ್ ತಮ್ಮ ಪುತ್ರ ವಿನೀಶ್ ದರ್ಶನ್ ಹೆಸರಿನಲ್ಲಿ ಹಣ ಪಾವತಿಸಿದ್ದಾರೆ.

ತೆರೆಯ ಮೇಲೆ ರಫ್ ಆಂಡ್ ಟಪ್ ಲುಕ್‍ನಲ್ಲಿ ಕಾಣಿಸಿಕೊಳ್ಳುವ ದರ್ಶನ್‍ರದ್ದು ಪ್ರಾಣಿಗಳಿಗಾಗಿ ಮಿಡಿಯುವ ಮನಸ್ಸು. ಇವರ ಪ್ರಾಣಿ ಪ್ರೀತಿ ಎಲ್ಲರಿಗೂ ಖುಷಿ ಕೊಟ್ಟಿದೆ. ಜೊತೆಗೆ, ಎಲ್ಲರಿಗೂ ಮಾದರಿ ಕೂಡಾ ಆಗಿದೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!