Saturday , December 15 2018
ಕೇಳ್ರಪ್ಪೋ ಕೇಳಿ
Home / Sandalwood / 24 ವರ್ಷಗಳ ಬಳಿಕ `ಊರ್ವಶಿ’ಯಲ್ಲಿ ಕನ್ನಡದ ಕಲರವ…!

24 ವರ್ಷಗಳ ಬಳಿಕ `ಊರ್ವಶಿ’ಯಲ್ಲಿ ಕನ್ನಡದ ಕಲರವ…!

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಥಿಯೇಟರ್ ಸಮಸ್ಯೆ ಬಹಳ ಹಳೆಯದ್ದು. ಪರಭಾಷೆ ಚಿತ್ರಗಳಿಂದ ಕನ್ನಡ ಚಿತ್ರಗಳಿಗೆ ಥಿಯೇಟರೇ ಸಿಗುವುದಿಲ್ಲ ಎಂಬುದು ಈ ಸಮಸ್ಯೆಯ ಮೂಲ.Screen shot 2016-07-01 at 7.09.12 PM Screen shot 2016-07-01 at 7.10.12 PM Screen shot 2016-07-01 at 7.12.11 PM Screen shot 2016-07-01 at 7.11.13 PM ಬೆಂಗಳೂರಿನ ಹಲವು ಥಿಯೇಟರ್‍ಗಳಲ್ಲಿ ಪರಭಾಷೆಯ ಚಿತ್ರಗಳೇ ಪ್ರದರ್ಶನವಾಗುತ್ತಿವೆ. ಅದರಲ್ಲಿ ಲಾಲ್‍ಬಾಗ್ ರಸ್ತೆಯಲ್ಲಿರುವ ಊರ್ವಶಿ ಚಿತ್ರ ಮಂದಿರ ಕೂಡಾ ಒಂದು. ಈ ಥಿಯೇಟರ್‍ನಲ್ಲಿ ಕಳೆದ 24 ವರ್ಷದಿಂದ ಕನ್ನಡ ಚಿತ್ರವೇ ಹಾಕಿರಲಿಲ್ಲ. ಇಲ್ಲಿ ಪ್ರದರ್ಶನವಾದ ಕಡೆಯ ಚಿತ್ರ ರಾಜ್‍ಕುಮಾರ್ ಅಭಿನಯದ ಜೀವನ ಚೈತ್ರ…! ಇದು ಬಿಟ್ಟರೆ ಕನ್ನಡ ರಾಜ್ಯೋತ್ಸವದ ದಿನ ಮಾತ್ರ ಒಂದು ದಿನ ಇಲ್ಲಿ ಕನ್ನಡ ಚಿತ್ರಕ್ಕೆ ಅವಕಾಶ ಇತ್ತು. ಇದು ಬಿಟ್ಟರೆ ಇಲ್ಲಿ 24 ವರ್ಷ ನಿರಂತರವಾಗಿ ಯಾವುದೇ ಕನ್ನಡ ಚಿತ್ರ ತೆರೆ ಕಂಡಿಲ್ಲ…!

ಆದರೆ, ಈಗ ಊರ್ವಶಿ ಚಿತ್ರಮಂದಿರದಲ್ಲಿ ಕನ್ನಡದ ಕಲರವ ಕೇಳಲಾರಂಭಿಸಿದೆ. ಅದು ಗಣೇಶ್ ಅಭಿನಯದ `ಜೂಮ್’ ಚಿತ್ರದ ಮೂಲಕ. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಾಧಿಕಾ ಪಂಡಿತ್ ಅಭಿನಯದ ಜೂಮ್ ಚಿತ್ರ ಇಲ್ಲಿ ರಿಲೀಸ್ ಆಗಿದೆ. 24 ವರ್ಷದ ಬಳಿಕ ಇಲ್ಲಿ ಕನ್ನಡ ಚಿತ್ರ ಕಂಡ ಕನ್ನಡಾಭಿಮಾನಿಗಳು ಈ ಚಿತ್ರವನ್ನು ಭರ್ಜರಿಯಾಗಿಯೇ ಸ್ವಾಗತಿಸಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!