Wednesday , December 12 2018
ಕೇಳ್ರಪ್ಪೋ ಕೇಳಿ
Home / News NOW / ಮೇಡ್ ಇನ್ ಇಂಡಿಯಾ : ವಾಯುಪಡೆಗೆ ಬಂತು `ತೇಜಸ್’

ಮೇಡ್ ಇನ್ ಇಂಡಿಯಾ : ವಾಯುಪಡೆಗೆ ಬಂತು `ತೇಜಸ್’

ಬೆಂಗಳೂರು : ಸ್ವದೇಶಿ ನಿರ್ಮಿತ ತೇಜಸ್ ಲಘು ಯುದ್ಧ ವಿಮಾನ ವಾಯುಪಡೆಯನ್ನು ಸೇರಿದೆ. ಎಚ್‍ಎಎಲ್ ನಿರ್ಮಿಸಿದ ಈ ತೇಜಸ್ ವಿಶ್ವದ ಅತ್ಯಂತ ಚಿಕ್ಕ ಮತ್ತು ಲಘು ಗಾತ್ರದ ಸೂಪರ್‍ಸಾನಿಕ್ ವಿಮಾನವಾಗಿದೆ. ಇದು ಒಂದೇ ಇಂಜಿನ್ ಹೊಂದಿರುವ ಯುದ್ಧ ವಿಮಾನ. ಇವತ್ತು ಸಾಂಕೇತಿಕವಾಗಿ ಎರಡು ಯುದ್ಧ ವಿಮಾನಗಳು ವಾಯುಪಡೆಯನ್ನು ಸೇರಿವೆ.

tejas 1ಸತತ 33 ವರ್ಷಗಳ ಪರಿಶ್ರಮ ಮತ್ತು ಕಾಯುವಿಕೆ ಇವತ್ತು ಯಶಸ್ಸು ಸಿಕ್ಕಿದೆ. ಸ್ವದೇಶಿ ನಿರ್ಮಿತ ಯುದ್ಧ ವಿಮಾನ ವಾಯುಪಡೆಯನ್ನು ಸೇರಬೇಕೆಂಬ ಹಂಬಲ ಎಲ್ಲರದ್ದಾಗಿತ್ತು. ಇಲ್ಲೇ ನಿರ್ಮಾಣವಾಗಿದ್ದರೂ ತೇಜಸ್‍ನಲ್ಲಿ ಎಂಜಿನ್ ಸೇರಿದಂತೆ ಕೆಲವೊಂದನ್ನು ಆಮದು ಮಾಡಿಕೊಳ್ಳಲಾಗಿದೆ. ಇವಕ್ಕೆ “ಫ್ಲೈಯಿಂಗ್ ಡ್ಯಾಗರ್ಸ್-45′ ಎಂದು ಹೆಸರಿಡಲಾಗಿದೆ.

ಮೊದಲ 2 ವರ್ಷ ಈ ಯುದ್ಧವಿಮಾನ ಬೆಂಗಳೂರಿನಲ್ಲೇ ಇರಲಿದ್ದು, ನಂತರ ತಮಿಳುನಾಡಿನ ಸೂಳೂರಿನ ವಾಯುನೆಲೆಗೆ ಸ್ಥಳಾಂತರಗೊಳ್ಳಲಿದೆ.

About sudina

Check Also

ಪತ್ನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಟೆಕ್ಕಿ 15 ವರ್ಷದ ಬಳಿಕ ಸೆರೆ…!

ಬೆಂಗಳೂರು : 2003ರಲ್ಲಿ ಗುಜರಾತ್‍ನಲ್ಲಿ ಪತ್ನಿಯನ್ನು ಕೊಂದು ಹೆಸರು ಬದಲಾಯಿಸಿಕೊಂಡು ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯನ್ನು …

Leave a Reply

Your email address will not be published. Required fields are marked *

error: Content is protected !!