Tuesday , May 22 2018
Home / Film News / Bollywood / ಸಲ್ಲೂ ಜೊತೆ ಶಾರೂಖ್ ಸೈಕಲ್ ಸವಾರಿ : ಆದರೆ, `ರೇಪ್’ ಹೇಳಿಕೆ ಬಗ್ಗೆ ಮಾತಾಡಲ್ವಂತೆ ಕಿಂಗ್‍ಖಾನ್…!

ಸಲ್ಲೂ ಜೊತೆ ಶಾರೂಖ್ ಸೈಕಲ್ ಸವಾರಿ : ಆದರೆ, `ರೇಪ್’ ಹೇಳಿಕೆ ಬಗ್ಗೆ ಮಾತಾಡಲ್ವಂತೆ ಕಿಂಗ್‍ಖಾನ್…!

ನವದೆಹಲಿ : ಸುಲ್ತಾನ್ ಸಲ್ಮಾನ್ ಖಾನ್ ಸದ್ಯ `ರೇಪ್’ ಬಗೆಗಿನ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ. ಮಹಿಳಾ ಆಯೋಗಗಳು ಸಲ್ಮಾನ್‍ಗೆ ಸಮನ್ಸ್ ಮೇಲೆ ಸಮನ್ಸ್ ಜಾರಿ ಮಾಡುತ್ತಿವೆ. ಈ ನಡುವೆ, ಸಲ್ಮಾನ್ ಹೇಳಿಕೆ ಬಗ್ಗೆ ಶಾರೂಖ್ ಪ್ರತಿಕ್ರಿಯೆ ಕೊಡಲು ನಿರಾಕರಿಸಿದ್ದಾರೆ. `ನಾನು ಇದಕ್ಕೆ ಪ್ರತಿಕ್ರಿಯೆ ನೀಡಲು ಅರ್ಹನಲ್ಲ’ ಎಂದು ಶಾರೂಖ್ ಹೇಳಿದ್ದಾರೆ. ಶಾರೂಖ್ ಹೀಗೆ ಹೇಳುವುದಕ್ಕೆ ಸ್ಪಷ್ಟನೆಯನ್ನೂ ಕೊಡುತ್ತಿದ್ದಾರೆ.

`ಕೆಲವೊಂದು ವರ್ಷಗಳ ಹಿಂದೆ ನಾನು ಕೂಡಾ ಹೀಗೆಯೇ ಬೇಕಾ ಬಿಟ್ಟಿ ಹೇಳಿಕೆಗಳನ್ನು ಕೊಡುತ್ತಿದ್ದೆ. ಹೀಗಾಗಿ, ಈ ವಿಚಾರದಲ್ಲಿ ಮತ್ತೊಬ್ಬರ ಬಗ್ಗೆ ಹೇಳಿಕೆ ಕೊಡಲು ನಾನು ಅರ್ಹನಲ್ಲ. ನಾನೇ ಇಂತಹ ಹೇಳಿಕೆ ಕೊಟ್ಟು ಈಗ ಬೇರೆಯವರ ಬಗ್ಗೆ ತೀರ್ಮಾನ ಪ್ರಕಟಿಸಲು ನಾನು ಯಾರು?’ ಎಂಬುದು ಶಾರೂಖ್ ಅಭಿಪ್ರಾಯ.

ಈ ಹೇಳಿಕೆ ಕೊಟ್ಟು ಒಂದು ಗಂಟೆಗೇ ಶಾರೂಖ್, ಸಲ್ಮಾನ್ ಜೊತೆಗಿರುವ ಫೋಟೋವನ್ನು ಟ್ವಿಟರ್‍ಗೆ ಹಾಕಿಕೊಂಡಿದ್ದಾರೆ. ಬಳಿಕ ನಾವಿಬ್ಬರು ಸಹೋದರರು ಎಂದು ಹೇಳಿ ಕೊಂಡಿದ್ದಾರೆ…


ಸುಲ್ತಾನ್ ಚಿತ್ರದ ಪ್ರಮೋಷನ್ ಸಂದರ್ಭದಲ್ಲಿ ಸಲ್ಮಾನ್ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು. ಶೂಟಿಂಗ್ ಮುಗಿಸಿದ ಬಳಿಕ ನನ್ನ ಸ್ಥಿತಿ ರೇಪ್ ಆದ ಮಹಿಳೆಯಂತಾಗಿತ್ತು ಎಂಬುದು ಸಲ್ಮಾನ್ ಹೇಳಿಕೆಯಾಗಿತ್ತು. ಇದನ್ನು ಮಹಿಳಾ ಸಂಘಟನೆಗಳು ತೀವ್ರ ವಿರೋಧಿಸಿದ್ದವು. ಇನ್ನೊಂದು ಕಡೆ, ಇಂತಹದ್ದೇ ವಿವಾದದ ಬಿಸಿ ಈ ಹಿಂದೆ ಶಾರೂಖ್‍ಗೂ ತಟ್ಟಿತ್ತು. ಅಸಹಿಷ್ಣುತೆ ಬಗ್ಗೆ ಹೇಳಿಕೆ ಕೊಟ್ಟಿದ್ದ ಶಾರೂಖ್ ಹಲವರ ವಿರೋಧಕ್ಕೆ ಗುರಿಯಾಗಿದ್ದರು. ಜೊತೆಗೆ, ಇದು ಇವರ ಹೊಸ ಚಿತ್ರದ ಮೇಲೂ ಪ್ರಭಾವ ಬೀರಿತ್ತು. ಹೀಗಾಗಿ, ಶಾರೂಖ್ ಈಗ ಏನೇ ಮಾತನಾಡಿದರೂ ಅಳೆದು ತೂಗಿ ಮಾತನಾಡುತ್ತಿದ್ದಾರೆ…!

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!