Tuesday , December 12 2017
Home / Gulf News / ಕಾರು ಟೈರ್ ಸ್ಫೋಟ : ಅಬುದುಬೈನಲ್ಲಿ ಬೆಂಗಳೂರು ಮೂಲದ ಮಹಿಳೆ ದುರ್ಮರಣ

ಕಾರು ಟೈರ್ ಸ್ಫೋಟ : ಅಬುದುಬೈನಲ್ಲಿ ಬೆಂಗಳೂರು ಮೂಲದ ಮಹಿಳೆ ದುರ್ಮರಣ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ
ಅಬು ದುಬೈ : ಬೆಂಗಳೂರು ಮೂಲದ ಮಹಿಳೆಯೊಬ್ಬರು ದಾರುಣ ಸಾವಿಗೀಡಾಗಿದ್ದಾರೆ. ಮೃತ ಮಹಿಳೆಯನ್ನು ಸವಿತಾ ತಿರುಮಲೇಶ್ ಎಂದು ಗುರುತಿಸಲಾಗಿದೆ. ರಾತ್ರಿ ಶಾರ್ಜಾಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾರಿನ ಟೈರ್ ಸ್ಫೋಟಗೊಂಡು ಈ ದುರ್ಘಟನೆ ಸಂಭವಿಸಿದೆ.

ಅಬು ದುಬೈನ ನ್ಯಾಷನಲ್ ಹೊಟೇಲ್ಸ್‍ನಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಸವಿತಾ ಕೆಲಸ ಮಾಡುತ್ತಿದ್ದರು. ಇವರ ಗಂಡ ಮತ್ತು 13 ವರ್ಷದ ಮಗ ಬೆಂಗಳೂರಿನಲ್ಲೇ ವಾಸವಾಗಿದ್ದಾರೆ. ಹೀಗಾಗಿ, ಶೀಘ್ರ ಬೆಂಗಳೂರಿನಲ್ಲೇ ಬಂದು ವಾಸವಾಗಲು ಇವರು ಕೂಡಾ ನಿರ್ಧರಿಸಿದ್ದರು ಎನ್ನಲಾಗಿದೆ. ಶಾರ್ಜಾದಲ್ಲಿರುವ ತನ್ನ ಸಂಬಂಧಿಯನ್ನು ಭೇಟಿಯಾಗಲು ಇವರು ಪ್ರತಿ ಗುರುವಾರ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ. ನಿನ್ನೆ ಕೂಡಾ ಇವರು ಅಲ್ಲಿಗೆ ತೆರಳುತ್ತಿದ್ದರು. ಟ್ಯಾಕ್ಸಿಯಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಸವಿತಾ ಕುಳಿತಿದ್ದ ಮುಂಭಾಗದ ಟೈರ್ ಸ್ಫೋಟಗೊಂಡಿದೆ. ಈ ವೇಳೆ ಸವಿತಾ ಮೃತಪಟ್ಟರೆ ಟ್ಯಾಕ್ಸಿಯಲ್ಲಿದ್ದ ಇತರ ಮೂವರು ಮತ್ತು ಚಾಲಕ ಅಪಾಯದಿಂದ ಪಾರಾಗಿದ್ದಾರೆ.

ಪ್ರತಿಭಾನ್ವಿತೆಯಾಗಿದ್ದ ಸವಿತಾ ಥ್ರೋಬಾಲ್ ಆಟಗಾರ್ತಿಯಾಗಿದ್ದು, ಅಬುದುಬೈ ಕನ್ನಡ ಸಂಘದ ತಂಡದ ಸದಸ್ಯೆ ಕೂಡಾ ಆಗಿದ್ದರು.

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!