Sunday , July 22 2018
ಕೇಳ್ರಪ್ಪೋ ಕೇಳಿ
Home / Film News / Bollywood / ಫವದ್ ಖಾನ್ ಜೊತೆ ಕಿರುತರೆ ನಟಿ ಜೆನ್ನಿಫರ್ ವಿಂಗೆಟ್ ಚೊಚ್ಚಲ ಸಿನಿಮಾ..?

ಫವದ್ ಖಾನ್ ಜೊತೆ ಕಿರುತರೆ ನಟಿ ಜೆನ್ನಿಫರ್ ವಿಂಗೆಟ್ ಚೊಚ್ಚಲ ಸಿನಿಮಾ..?

 

Jennifer Winget 1

ಮುಂಬೈ: ಸದ್ಯದಲ್ಲೇ ಕಿರುತೆರೆಯ ಪ್ರಖ್ಯಾತ ನಟಿ ಜೆನ್ನಿಫರ್ ವಿಂಗೆಟ್ ಬೆಳ್ಳಿತೆರೆಗೆ ನಾಯಕಿಯಾಗಿ ಪಾದರ್ಪಣಿ ಮಾಡಲಿದ್ದಾರಂತೆ.. ಇಂಥದೊಂದು ಸುದ್ದಿ ಈಗ ಹರಿದಾಡುತ್ತಿದ್ದು, ಇದಕ್ಕೆ ಜೆನ್ನಿಫರ್‍ರ ಇಂಸ್ಟಗ್ರಾಮ್ ಪೋಸ್ಟ್ ಪುಷ್ಠಿ ನೀಡಿದೆ. ನಿರ್ದೇಶಕಿ ಜೋಯಾ ಅಖ್ತರ್ ಅವರ ಮುಂದಿನ ಸಿನಿಮಾದಲ್ಲಿ ಜೆನ್ನಿಫರ್‍ಗೆ ಆಫರ್ ಬಂದಿದೆಯಂತೆ. ಅಖ್ತರ್ ನಿರ್ದೇಶನ ಮಾಡುತ್ತಿದ್ದ ರಣವೀರ್ ಸಿಂಗ್ ಅಭಿನಯದ ಸಿನಿಮಾದ ಶೂಟಿಂಗ್ ಈಗಾಗಲೇ ಅಂತ್ಯವಾಗಿದೆ. ಅಖ್ತರ್ ನಿರ್ದೇಶನ ಮಾಡುತ್ತಿರುವ ಮುಂದಿನ ಸಿನಿಮಾದಲ್ಲಿ ಫವದ್ ಖಾನ್ ಅಭಿನಯಿಸುತ್ತಿದ್ದು ಈ ಸಿನಿಮಾದಲ್ಲಿ ಜೆನ್ನಿಫರ್ ವಿಂಗೆಟ್‍ಗೆ ಚಾನ್ಸ್ ಸಿಕ್ಕಿದೆಯಂತೆ.

Jennifer Winget 2ಈ ಮೊದಲು ಕುನಾಲ್ ಕೊಹ್ಲಿ ನಿರ್ದೇಶನದ `ಪಿರ್ ಸೆ’ಯಲ್ಲಿ ಜೆನ್ನಿಫರ್ ವಿಂಗೆಟ್ ಅಭಿನಯಿಸಿದ್ದರು. ಆದರೆ ಕೆಲ ಕಾರಣದಿಂದಾಗಿ ಆ ಸಿನಿಮಾ ತೆರೆ ಕಾಣಲಿಲ್ಲ.

ಜೆನ್ನಿಫರ್ ವಿಂಗೆಟ್ ಕರಣ್ ಸಿಂಗ್ ಗ್ರೋವರ್‍ರನ್ನು ವಿವಾಹವಾಗಿದ್ದರು. ಆದರೆ ಕಳೆದ ವರ್ಷ ಇಬ್ಬರು ಬೇರೆ ಬೇರೆಯಾಗಿದ್ದರು. ಕಳೆದ ತಿಂಗಳು ಕರಣ್ ಸಿಂಗ್ ಗ್ರೋವರ್ ಬಾಲಿವುಡ್ ನಟಿ ಬಿಪಾಶ ಬಸುರನ್ನು ವರಿಸಿದ್ದರು.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!