Sunday , July 22 2018
ಕೇಳ್ರಪ್ಪೋ ಕೇಳಿ
Home / News NOW / ರೆಸ್ಟೋರೆಂಟ್‍ನಲ್ಲಿ ಪಾಪಿ ಉಗ್ರರ ಹತ್ಯೆ : ಓರ್ವ ಭಾರತೀಯನ ದುರ್ಮರಣ

ರೆಸ್ಟೋರೆಂಟ್‍ನಲ್ಲಿ ಪಾಪಿ ಉಗ್ರರ ಹತ್ಯೆ : ಓರ್ವ ಭಾರತೀಯನ ದುರ್ಮರಣ

ಢಾಕಾ : ಬಾಂಗ್ಲಾದೇಶದ ಡಾಕಾದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಶುಕ್ರವಾರ ತಡರಾತ್ರಿ ಬಾಂಗ್ಲಾದ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿದ ಉಗ್ರರು ಇಬ್ಬರು ಪೊಲೀಸರನ್ನು ಹತ್ಯೆ ಮಾಡಿದ್ದರು. ಅಲ್ಲದೆ, ಹಲವರು ಮೇಲೆ ಗುಂಡಿನ ಚಕಮಕಿ ನಡೆಸಿದ್ದರು.

dhakaಇದು ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದಲ್ಲಿ ನಡೆದ ದೊಡ್ಡ ಉಗ್ರರ ದಾಳಿ ಆಗಿದೆ. ವಿದೇಶೀಯರೇ ಹೆಚ್ಚು ಇರುವ ಗುಲ್ಶನ್ ಪ್ರದೇಶದಲ್ಲಿರುವ ಹೋಲಿ ರ್ಟಿಸನ್ ಬೇಕರಿ ರೆಸ್ಟೋರೆಂಟ್‍ಗೆ ನುಗ್ಗಿದ ಉಗ್ರರು ಗುಂಡಿನ ಮಳೆಗರೆದಿದ್ದರು. ಇನ್ನು, ಈ ಭಯೋತ್ಪಾದಕ ದಾಳಿಯಲ್ಲಿ 20 ನಾಗರಿಕರು ಮರಣವನ್ನಪ್ಪಿದ್ದಾರೆ. ಇದರಲ್ಲಿ ಓರ್ವ ಭಾರತೀಯರೂ ಸೇರಿದ್ದಾರೆ.
dhaka-hostages
ಇದಾದ ಬಳಿಕ ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು ಉಗ್ರರ ಹೆಡೆಮುರಿ ಕಟ್ಟಿದ್ದಾರೆ. ಸತತ 14 ಗಂಟೆಗಳ ಕಾರ್ಯಾಚರಣೆ ಮಾಡಿದ ಯೋಧರು ಆರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಇನ್ನು, ಒತ್ತೆಯಾಳಾಗಿದ್ದ ಎಲ್ಲರೂ ಬಂಧಮುಕ್ತರಾಗಿದ್ದಾರೆ. ಒತ್ತೆಯಾಳುಗಳನ್ನು ತೀವ್ರ ಅಸ್ವಸ್ಥರಾಗಿದ್ದ ಮೂವರು ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು, ಐಸಿಸ್ ಉಗ್ರರು ಈ ದಾಳಿಯ ಹೊಣೆ ಹೊತ್ತಿದ್ದಾರೆ.

About sudina

Check Also

ಸ್ಮಾರ್ಟ್ ಸಿಟಿಗಳ ಅಭಿವೃದ್ಧಿಗೆ ಮುಂದೆ ಬಂದ ನೂರಾರು ಕಂಪೆನಿಗಳು

ಬೆಂಗಳೂರು : ರಾಜ್ಯದ ಹಲವು ನಗರಗಳಿಗೆ ಸ್ಮಾರ್ಟ್ ಸಿಟಿ ಭಾಗ್ಯ ಸಿಕ್ಕಿದೆ. ಇದರಿಂದ ಕೋಟ್ಯಂತರ ರೂಪಾಯಿ ವೆಚ್ಚದ ಯೋಜನೆಗಳು, ಕಾಮಗಾರಿಗಳು …

Leave a Reply

Your email address will not be published. Required fields are marked *

error: Content is protected !!