Tuesday , August 14 2018
ಕೇಳ್ರಪ್ಪೋ ಕೇಳಿ
Home / Sandalwood / ಮತ್ತೆ ಸ್ಯಾಂಡಲ್‍ವುಡ್‍ಗೆ `ನಿಧಿ’

ಮತ್ತೆ ಸ್ಯಾಂಡಲ್‍ವುಡ್‍ಗೆ `ನಿಧಿ’

ಬೆಂಗಳೂರು : ಸ್ಯಾಂಡಲ್‍ವುಡ್ ನಾಯಕಿ ನಿಧಿ ಸುಬಯ್ಯ ಮತ್ತೆ ಕನ್ನಡಕ್ಕೆ ಮರಳಿದ್ದಾರೆ. `ನನ್ನ ನಿನ್ನ ಪ್ರೇಮ ಕತೆ’ ಚಿತ್ರದ ಮೂಲಕ ನಿಧಿ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ನಾಲ್ಕು ವರ್ಷಗಳಿಂದ ಕನ್ನಡದ ಯಾವೊಂದು ಚಿತ್ರದಲ್ಲೂ ನಿಧಿ ನಟಿಸಿಲ್ಲ. ಬೇರೆ ಫಿಲಂ ಇಂಡಸ್ಟ್ರಿಯಲ್ಲಿ ನಿಧಿ ಬ್ಯುಸಿಯಾಗಿದ್ದರು. ನಿಧಿ ಅವರೇ ಹೇಳುವಂತೆ, ಈ ನಾಲ್ಕು ವರ್ಷದಲ್ಲಿ ನಿಧಿಗೆ ಹಲವು ಆಫರ್‍ಗಳು ಬಂದಿದ್ದವು. ಆದರೆ, ಸೆಡ್ಯೂಲ್ಡ್‍ನ ತೊಂದರೆ ಆಗಿತ್ತು. ಹೀಗಾಗಿ, ಇವರು ಕನ್ನಡ ಚಿತ್ರದಲ್ಲಿ ನಟಿಸಿರಲಿಲ್ಲ.

ಶಿವು ಜಮಖಂಡಿ `ನನ್ನ ನಿನ್ನ ಪ್ರೇಮ ಕತೆ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ನಡೆದಿದ್ದ ಮರ್ಯಾದಾ ಹತ್ಯೆಯ ನಿಜ ಕತೆಯನ್ನು ಇಟ್ಟುಕೊಂಡು ಈ ಕತೆಯನ್ನು ಹೆಣೆಯಲಾಗಿದೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!