Wednesday , March 20 2019
ಕೇಳ್ರಪ್ಪೋ ಕೇಳಿ
Home / Film News / Bollywood / ಭಯೋತ್ಪಾದಕರಿಂದಾಗಿ ಇಸ್ಲಾಂ ಧರ್ಮಕ್ಕೆ ಕೆಟ್ಟ ಹೆಸರು : ಇರ್ಫಾನ್ ಖಾನ್

ಭಯೋತ್ಪಾದಕರಿಂದಾಗಿ ಇಸ್ಲಾಂ ಧರ್ಮಕ್ಕೆ ಕೆಟ್ಟ ಹೆಸರು : ಇರ್ಫಾನ್ ಖಾನ್

ಮುಂಬೈ : ಭಯೋತ್ಪಾದಕರಿಂದಾಗಿ ಇಡೀ ಪವಿತ್ರ ಇಸ್ಲಾಂ ಧರ್ಮಕ್ಕೆ ಕೆಟ್ಟ ಹೆಸರು ಎಂದು ಬಾಲಿವುಡ್ ನಟ ಇರ್ಫಾನ್ ಖಾನ್ ಹೇಳಿದ್ದಾರೆ. ಬಾಂಗ್ಲಾದೇಶದಲ್ಲಿ ರಕ್ತ ಹರಿಸಿದ್ದ ಭಯೋತ್ಪಾದಕರ ಕೃತ್ಯವನ್ನು ಖಂಡಿಸಿರುವ ಇರ್ಫಾನ್, ಇಂತಹವರು ಮಾಡುವ ಕೃತ್ಯದಿಂದಾಗಿ ಇಡೀ ಇಸ್ಲಾಂ ಧರ್ಮಕ್ಕೆ ಕೆಟ್ಟು ಹೆಸರು ಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
irfan khanಸಾಮಾಜಿಕ ಜಾಲತಾಣ ಫೇಸ್‍ಬುಕ್‍ನಲ್ಲಿ ತಮ್ಮ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಇರ್ಫಾನ್ ಖಾನ್, `ಪಕ್ಕದವನು ಹಸಿದಿದ್ದರೆ ಆತನನ್ನು ಬಿಟ್ಟು ನೀನು ಊಟ ಮಾಡಬಾರದು ಎಂಬ ಉತ್ತಮ ಪಾಠವನ್ನು ಚಿಕ್ಕಂದಿನಲ್ಲಿ ಧರ್ಮ ನಮಗೆ ಕಲಿಸಿಕೊಟ್ಟಿತ್ತು. ಆದರೆ, ಬಾಂಗ್ಲಾದೇಶದಲ್ಲಿ ಆದ ಘಟನೆಯನ್ನು ನೋಡಿದಾಗ ನನಗೆ ತುಂಬಾ ನೋವಾಗುತ್ತಿದೆ. ಖುರಾನ್‍ನಲ್ಲಿ ಏನು ಬರೆದಿದೆ ಎಂದು ಅರಿಯದೆ, ರಮ್ಜಾನ್‍ನಂತಹ ಪವಿತ್ರ ತಿಂಗಳಲ್ಲಿ ಜನರನ್ನು ಕೊಲ್ಲಲಾಗುತ್ತಿದೆ. ಈ ಘಟನೆ ಅಲ್ಲಿ ನಡೆದಿದ್ದರೂ ಇಸ್ಲಾಂ ಮತ್ತು ಇಡೀ ವಿಶ್ವದಲ್ಲಿರುವ ಮುಸ್ಲಿಂ ಧರ್ಮಿಯರಿಗೆ ಇದರಿಂದ ಕೆಟ್ಟ ಹೆಸರು ಬರುತ್ತಿದೆ’ ಎಂದು ಬರೆದುಕೊಂಡಿದ್ದಾರೆ.

`ಶಾಂತಿ, ಪ್ರೀತಿ ಮತ್ತು ಇತರರ ನೋವನ್ನು ಅರ್ಥ ಮಾಡಿಕೊಳ್ಳುವುದೇ ಇಸ್ಲಾಂ ಧರ್ಮದ ತಳಪಾಯ ಎಂದೂ ಅವರು ಹೇಳಿಕೊಂಡಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!