Wednesday , August 15 2018
ಕೇಳ್ರಪ್ಪೋ ಕೇಳಿ
Home / News NOW / ಗಾಯಕಿ ವಸುಂಧರಾ ದಾಸ್ ಟೀಂ ಜೊತೆ ಬ್ಲೂಬಾಯ್ಸ್ ಸಂಗೀತ

ಗಾಯಕಿ ವಸುಂಧರಾ ದಾಸ್ ಟೀಂ ಜೊತೆ ಬ್ಲೂಬಾಯ್ಸ್ ಸಂಗೀತ

ಬೆಂಗಳೂರು : ಟೀಂ ಇಂಡಿಯಾ ಕೋಚ್ ಅನಿಲ್ ಕುಂಬ್ಳೆ ಈಗ ತಂಡದ ಸದಸ್ಯರಲ್ಲಿ ಇನ್ನಷ್ಟು ಆಪ್ತತೆಯನ್ನು ಹೆಚ್ಚು ಮಾಡಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೆ, ತಂಡವನ್ನು ಇನ್ನಷ್ಟು ಸದೃಢಗೊಳಿಸಲು ತಂಡದ ಸದಸ್ಯರನ್ನು ಹುರಿಗೊಳಿಸುವ ಸಲುವಾಗಿ ಆಟಗಾರರ ಮನಸ್ಸಿಗೆ ಮುದ ನೀಡುವ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಇದಕ್ಕೆ ಪೂರಕವೆಂಬಂತೆ ಟೀಂ ಇಂಡಿಯಾ ಆಟಗಾರರು ಗಾಯಕಿ ವಸುಂಧರಾ ದಾಸ್ ಅವರ `ಡ್ರಮ್‍ಜಾಮ್’ ತಂಡದೊಂದಿಗೆ ಹಾಡಿ ಕುಣಿದಾಡಿದ್ದಾರೆ.
vasundara das 1 vasundara das 2 vasundara das 3 vasundara das 4 vasundara das 5 vasundara das 6 vasundara das 7 vasundara das 8
ವಸುಂಧರಾ ಟೀಂನೊಂದಿಗೆ ಎಲ್ಲಾ ಆಟಗಾರರು ಡ್ರಮ್ಸ್ ಬಾರಿಸುವ ಮೂಲಕ ಉಲ್ಲಾಸಭರಿತ ಕ್ಷಣವನ್ನು ಅನುಭವಿಸಿದರು. ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ತಂಡದ ಎಲ್ಲಾ ಸದಸ್ಯರು ಎಲ್ಲಾ ಜಂಜಡವನ್ನು ಮರೆತು ಕಾಲಕಳೆದರು. ಈ ಸುಂದರ ಕ್ಷಣದ ಫೋಟೋಗಳನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ವಸುಂಧರಾ ದಾಸ್ ಬರೀ ಗಾಯಕಿ ಅಲ್ಲ. ನಾಯಕಿ ಕೂಡಾ ಹೌದು. ಕನ್ನಡ, ಹಿಂದಿ, ತಮಿಳು, ತೆಲುಗು ಸೇರಿದಂತೆ ಬಹುಭಾಷೆಗಳಲ್ಲಿ ನಟಿಸಿ ಇವರು ಗಮನ ಸೆಳೆದಿದ್ದಾರೆ.

About sudina

Check Also

ಮೈಸೂರು ಹಾಸ್ಟೆಲ್‍ಗೆ ನುಗ್ಗಿ ಕಾಟ : ಬಂಟ್ವಾಳದಲ್ಲಿ ಆರೋಪಿ ಬಂಧನ

ಮಂಗಳೂರು : ಜುಲೈ 20 ರಂದು ಮೈಸೂರಿನ ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಆರ್.ಆಸ್ಪತ್ರೆ ಆವರಣದಲ್ಲಿದ್ದ ವಿದ್ಯಾರ್ಥಿನಿಯರ ಹಾಸ್ಟೆಲ್‍ಗೆ ನುಗ್ಗಿ …

Leave a Reply

Your email address will not be published. Required fields are marked *

error: Content is protected !!