Saturday , November 17 2018
ಕೇಳ್ರಪ್ಪೋ ಕೇಳಿ
Home / Film News / Coastalwood / ಪಾಕಿಸ್ತಾನದಲ್ಲಿ `ಗುಡ್ಡೆದ ಭೂತ’ ಪ್ರದರ್ಶನ

ಪಾಕಿಸ್ತಾನದಲ್ಲಿ `ಗುಡ್ಡೆದ ಭೂತ’ ಪ್ರದರ್ಶನ

ಮಂಗಳೂರು : ತುಳು ಸಿನೆಮಾ ರಂಗದ ಇತಿಹಾಸದಲ್ಲಿ `ಗುಡ್ಡೆದ ಭೂತ’ವೆಂಬ ಚಿತ್ರ ಸಾಧನೆ ಬರೆಯುತ್ತಿದೆ. ಈ ಚಿತ್ರ ಪಾಕಿಸ್ತಾನದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ. ತುಳು ಚಿತ್ರರಂಗದ ಬಹುನಿರೀಕ್ಷಿತ ಈ ಹಾರರ್ ಚಿತ್ರ `ಎಫ್‍ಐಎಲ್‍ಯುಎಮ್‍ಎಸ್ 2016’ದಲ್ಲಿ ಪ್ರದರ್ಶನಗೊಳ್ಳಲಿದೆ. ತುಳು ಚಿತ್ರರಂಗದ ಮಟ್ಟಿಗೆ ಇದೊಂದು ಒಳ್ಳೆಯ ಬೆಳವಣಿಗೆ. ಇದೇ ತಿಂಗಳು ಈ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ. ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಸಿನೆಮಾ ನಿರ್ಮಾಣವಾಗಿದೆ. ಸಂದೀಪ್ ಪಣಿಯೂರು ಈ ಚಿತ್ರ ನಿರ್ದೇಶಿಸಿದ್ದಾರೆ.

ಲುಮ್ಸ್ ಮೀಡಿಯಾ ಆಟ್ರ್ಸ್ ಈ ಚಿತ್ರೋತ್ಸವನ್ನು ಆಯೋಜಿಸುತ್ತದೆ. ಇದು ಪಾಕಿಸ್ತಾನದ ಪ್ರಸಿದ್ಧ ಮತ್ತು ವಿಶ್ವದ ಯುವ ಪ್ರತಿಭೆಗಳನ್ನು ಗುರುತಿಸುವ ಮಹತ್ವದ ಚಲನಚಿತ್ರೋತ್ಸವವಾಗಿದೆ. `ಸುದಿನ ಡಾಟ್ ಇನ್’ ಜೊತೆ ಮಾತನಾಡಿದ ಚಿತ್ರದ ನಿರ್ದೇಶಕ ಸಂದೀಪ್ ಪಣಿಯಾಡಿ, ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಬಹುತೇಕ ಈ ತಿಂಗಳಲ್ಲಿ `ಗುಡ್ಡೆದ ಭೂತ’ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

ಒಟ್ಟಿನಲ್ಲಿ, ಕಲೆಗೆ ದೇಶ, ಭಾಷೆಯ ಗಡಿ ಇಲ್ಲ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ. ಜೊತೆಗೆ, ತುಳು ಚಿತ್ರರಂಗಕ್ಕೊಂದು ಹೆಮ್ಮೆ ಕೂಡಾ ಹೌದು. ಈ ಹಿಂದೆ `ಗುಡ್ಡೆದ ಭೂತ’ ಎಂಬ ಹೆಸರಿನಲ್ಲಿ ಬಂದಿದ್ದ ಧಾರವಾಹಿ ಬಹಳ ಖ್ಯಾತಿ ಪಡೆದಿತ್ತು. ಕಳೆದ ವರ್ಷ ತೆರೆಕಂಡ ಕನ್ನಡದ `ರಂಗಿತರಂಗ’ದಲ್ಲೂ `ಗುಡ್ಡೆದ ಭೂತ’ ಧಾರವಾಹಿಯ ಟೈಟಲ್ ಟ್ರಾಕನ್ನು ಬಳಸಿಕೊಳ್ಳಲಾಗಿತ್ತು.

About sudina

Check Also

ನಾಳೆ ‘ನೇಮೋದ ಬೂಳ್ಯ’ ಸಿನೆಮಾ ರಿಲೀಸ್​

ಮಂಗಳೂರು : ಕೋಸ್ಟಲ್​ವುಡ್​ನಲ್ಲಿ ಬಹಳ ನಿರೀಕ್ಷೆ ಮೂಡಿಸಿರುವ ‘ನೇಮೋದ ಬೂಳ್ಯ’ ಸಿನೆಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ ಅಂದರೆ, ಸೆಪ್ಟೆಂಬರ್ …

Leave a Reply

Your email address will not be published. Required fields are marked *

error: Content is protected !!