Thursday , November 15 2018
ಕೇಳ್ರಪ್ಪೋ ಕೇಳಿ
Home / Sandalwood / ಗಳಿಕೆಯ ನಾಗಾಲೋಟದಲ್ಲಿ ಝೂಮ್

ಗಳಿಕೆಯ ನಾಗಾಲೋಟದಲ್ಲಿ ಝೂಮ್

ಬೆಂಗಳೂರು : ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಮೋಹಕ ಬೆಡಗಿ ರಾಧಿಕಾ ಪಂಡಿತ್ ಅಭಿನಯದ `ಝೂಮ್’ ಚಿತ್ರ ಭರ್ಜರಿ ಯಶಸ್ಸು ಕಾಣುತ್ತಾ ಮುನ್ನುಗ್ಗುತ್ತಿದೆ. ನಿರ್ದೇಶಕ ಪ್ರಶಾಂತ್ ರಾಜ್ ಪ್ರಯತ್ನಕ್ಕೆ ಜನ ಬೆಂಬಲ ಕೊಟ್ಟಿದ್ದು, ಮೂರು ದಿನಗಳಲ್ಲಿಯೇ ಚಿತ್ರದ ಗಳಿಕೆ 5 ಕೋಟಿ ಗಡಿ ದಾಟಿದೆ.

ರಾಜರಾಜೇಶ್ವರಿ ನಗರದ ತಮ್ಮ ಮನೆಯಲ್ಲಿ ಪ್ರಶಾಂತ್ ರಾಜ್ ಸುದ್ದಿಗೋಷ್ಠಿ ಕರೆದು ಈ ವಿಷಯ ತಿಳಿಸಿದ್ದಾರೆ. ಇದುವರೆಗೆ ಸುಮಾರು 11 ಲಕ್ಷ ಜನ ಚಿತ್ರ ನೋಡಿದ್ದು, 200 ಹೌಸ್‍ಫುಲ್ ಪ್ರದರ್ಶನ ಕಂಡಿದೆ. ಇದರಲ್ಲಿ ಮೊದಲ ದಿನ 1.45 ಕೋಟಿ, ಎರಡನೇ ದಿನ 1.60 ಕೋಟಿ ಮತ್ತು ಮೂರನೇ ದಿನ 3.18 ಕೋಟಿ ರೂಪಾಯಿ ಗಳಿಕೆ ಆಗಿದೆ ಎಂದು ಅವರು ಲೆಕ್ಕ ಕೊಟ್ಟಿದ್ದಾರೆ. ಇನ್ನು, ವಿದೇಶದಲ್ಲೂ ಈ ಚಿತ್ರದ ಬಿಡುಗಡೆ ಚಿಂತನೆ ನಡೆಸಿರುವುದಾಗಿ ಪ್ರಶಾಂತ್ ರಾಜ್ ತಿಳಿಸಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!