Monday , January 21 2019
ಕೇಳ್ರಪ್ಪೋ ಕೇಳಿ
Home / Film News / Bollywood / ಸಲ್ಮಾನ್ ಖಾನ್‍ಗೆ ಸಲಹೆ ಕೊಡಲು ನಾನ್ಯಾರು…? ಅಮೀರ್ ಪ್ರಶ್ನೆ

ಸಲ್ಮಾನ್ ಖಾನ್‍ಗೆ ಸಲಹೆ ಕೊಡಲು ನಾನ್ಯಾರು…? ಅಮೀರ್ ಪ್ರಶ್ನೆ

ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಈಗ ರೇಪ್ ಬಗೆಗಿನ ಹೇಳಿಕೆ ಕೊಟ್ಟು ವಿವಾದಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಾಲಿವುಡ್‍ನ ಇನ್ನೋರ್ವ ನಟ ಮತ್ತು ಸಲ್ಮಾನ್ ಆಪ್ತ ಸ್ನೇಹಿತ ಅಮೀರ್ ಖಾನ್, ಸಲ್ಮಾನ್ ಹೇಳಿಕೆ ಸಂವೇದನೆ ಇಲ್ಲದ್ದು. ಇದು ಪ್ರತಿಕ್ರಿಯೆ ನೀಡುವಂತಹ ವಿಚಾರ ಅಲ್ಲ ಎಂದು ಹೇಳಿದ್ದಾರೆ.

ತಮ್ಮ ದಂಗಾಲ್ ಪೋಸ್ಟರ್ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಅಮೀರ್ ಖಾನ್. ಸಲ್ಮಾನ್ ಹೇಳಿಕೆ ಆಕಸ್ಮಿಕವಾಗಿದ್ದು ಮತ್ತು ಸಂವೇದನೆಯೇ ಇಲ್ಲದಿರುವಂತಹದ್ದು ಎಂದು ಹೇಳಿದರು. ಅಲ್ಲದೆ, ಈ ಹೇಳಿಕೆಯನ್ನು ಕೊಟ್ಟ ಬಳಿಕ ನಾನು ಸಲ್ಮಾನ್ ಭೇಟಿಯಾಗಿಲ್ಲ ಎಂದೂ ಅವರು ತಿಳಿಸಿದರು. ಈ ವೇಳೆ, ನಿಮ್ಮ ಸ್ನೇಹಿತನಿಗೆ ಸ್ವಲ್ಪ ಬುದ್ಧಿ ಹೇಳಿ ಅಲ್ವಾ ಎಂದು ಮಾಧ್ಯಮದವರು ಹೇಳಿದ್ದಕ್ಕೆ, ಸಲಹೆ ನೀಡಲು ನಾನ್ಯಾರು ಎಂದು ಅಮೀರ್ ಮಾಧ್ಯಮದವರಿಗೆ ಪ್ರತಿಪ್ರಶ್ನೆಯನ್ನು ಹಾಕಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!