Saturday , January 19 2019
ಕೇಳ್ರಪ್ಪೋ ಕೇಳಿ
Home / Film News / Bollywood / ರಾಂಗೋಪಾಲ್ ವರ್ಮಾ ಸಿನಿಮಾದಲ್ಲಿ ನಿಶಾ ಯೋಗೀಶ್ವರ್..?

ರಾಂಗೋಪಾಲ್ ವರ್ಮಾ ಸಿನಿಮಾದಲ್ಲಿ ನಿಶಾ ಯೋಗೀಶ್ವರ್..?

NISHAಮುಂಬೈ: ರಾಂಗೋಪಾಲ್ ವರ್ಮಾ ನಿರ್ದೇಶನದ ಸಿನಿಮಾದಲ್ಲಿ ನಿಶಾ ಯೋಗೀಶ್ವರ್‍ಗೆ ಚಾನ್ಸ್ ಸಿಕ್ಕಿದ್ಯಾ..? ಈಗ ಇಂಥದೊಂದು ಸುದ್ದಿ ಹರಿದಾಡ್ತಿದೆ. ಇದಕ್ಕೆ ಕಾರಣವಾಗಿದ್ದು ವರ್ಮಾ ತಮ್ಮ ಟ್ವೀಟರ್‍ನಲ್ಲಿ ಅಪ್‍ಲೋಡ್ ಮಾಡಿರುವ ಫೋಟೋ.. ವರ್ಮಾ ತಮ್ಮ ಟ್ವೀಟರ್‍ನಲ್ಲಿ ನಿಶಾ ಫೋಟೋ ಅಪ್‍ಲೋಡ್ ಮಾಡಿದ್ದು, `ಇವರು ಯಾರು ಬಲ್ಲಿರಾ..?’ ಎನ್ನುವ ಪ್ರಶ್ನೆ ಕೇಳಿದ್ದಾರೆ. ಇದು ರಾಂಗೋಪಾಲ್ ವರ್ಮಾ ನಿರ್ದೇಶನದ `ರೈ’ ಸಿನಿಮಾದಲ್ಲಿ ನಿಶಾ ಯೋಗೀಶ್ವರ್ ನಾಯಕಿ ಅನ್ನುವ ಸುದ್ದಿ ಹರಿದಾಡುವಂತೆ ಮಾಡಿದೆ. ಆದರೆ ಈ ಬಗ್ಗೆ ರಾಂಗೋಪಾಲ್ ವರ್ಮಾ ಯಾವುದೇ ಗುಟ್ಟು ಬಿಟ್ಟು ಕೊಟ್ಟಿಲ್ಲ.

ಎರಡು ವರ್ಷಗಳ ಹಿಂದೆ ನಿಶಾ ಯೋಗೀಶ್ವರ್ ದರ್ಶನ್ ಅಭಿನಯದ `ಅಂಬರೀಷ’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದರು. ಫೋಟೋ ಶೂಟ್ ಕೂಡಾ ನಡೆದಿತ್ತು. ಆದರೆ ಅನಾರೋಗ್ಯದ ನೆಪ ಹೇಳಿ ನಿಶಾ ಆ ಸಿನಿಮಾದಲ್ಲಿ ನಟಿಸಿರಲಿಲ್ಲ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!