Monday , April 23 2018
Home / Sandalwood / ಲೂಸ್ ಮಾದ ಯೋಗಿಯ ಬರ್ತ್‍ಡೇ

ಲೂಸ್ ಮಾದ ಯೋಗಿಯ ಬರ್ತ್‍ಡೇ

ಬೆಂಗಳೂರು : ಲೂಸ್‍ಮಾದ ಯೋಗಿ 26ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಖುಷಿಯನ್ನು ಯೋಗಿ ಅಭಿಮಾನಿಗಳೊಂದಿಗೆ ಸಂಭ್ರಮಿಸಿದ್ದಾರೆ. ಇನ್ನು, ಒಂದು ಕಾಲದಲ್ಲಿ ಫುಲ್ ಬ್ಯುಸಿಯಾಗಿದ್ದ ಯೋಗಿ ಮೂರು ವರ್ಷದಿಂದ ಸೈಲೆಂಟ್ ಆಗಿದ್ದರು. ಯಾಕೆಂದರೆ, ಈ ಮೂರು ವರ್ಷದಲ್ಲಿ ಯೋಗಿಯ ಯಾವ ಚಿತ್ರಗಳೂ ರಿಲೀಸ್ ಆಗಿರಲಿಲ್ಲ. ಈಗ ಯೋಗಿ ಮತ್ತೆ ಅದೇ ಹಳೇ ಜೋಶ್‍ಗೆ ಮರಳಿದ್ದಾರೆ. ದುನಿಯಾದಿಂದ ತನ್ನ ಸಿನಿಪಯಣವನ್ನು ಆರಂಭಿಸಿದ ಯೋಗಿ ಈಗ `ದುನಿಯಾ 2′ ಚಿತ್ರಕ್ಕೆ ರೆಡಿಯಾಗುತ್ತಿದ್ದಾರೆ.
Screen shot 2016-07-06 at 6.24.52 PM Screen shot 2016-07-06 at 6.25.21 PM Screen shot 2016-07-06 at 6.26.02 PM Screen shot 2016-07-06 at 6.26.54 PM Screen shot 2016-07-06 at 6.27.15 PM Screen shot 2016-07-06 at 6.27.40 PM Screen shot 2016-07-06 at 6.28.09 PM Screen shot 2016-07-06 at 6.28.55 PM
ಅಭಿಮಾನಿಗಳ ಪ್ರೀತಿ ಸಂಭ್ರಮದ ನಡುವೆ ಯೋಗಿ ಕೂಡಾ ಕುಣಿದು ಕುಪ್ಪಳಿಸಿದರು. ಯೋಗಿ ಜೊತೆ ಅಣ್ಣ ಮತ್ತು ತಾಯಿ ಅಂಬುಜ ಕೂಡಾ ಹೆಜ್ಜೆ ಹಾಗಿದರು.

ಅದೂ ಅಲ್ಲದೆ, ಮುಂದಿನ ದಿನಗಳಲ್ಲಿ ತೆರೆ ಮೇಲೆ ಯೋಗಿಯೇ ಕಾಣಲಿದ್ದಾರೆ. ಮುಂದಿನ ತಿಂಗಳು ಯೋಗಿ ಅಭಿನಯದ ಕೆಜಿಎಫ್ ಮತ್ತು ಜಾನ್ ಜಾನಿ ಜನಾರ್ದನ್ ಚಿತ್ರ ತೆರೆಗೆ ಬರುತ್ತಿದೆ. ಇದಾದ ಬಳಿಕ ಸ್ನೇಕ್ ನಾಗ, ಝಂಡ, ಪ್ರಚಂಡ, ಭಾಝಾರ್, ಕರಿಯಾ ಕಣ್ಬಿಟ್ಟ, ಓಬಿರಾಯಾ ಹೀಗೆ ಹಲವು ಚಿತ್ರಗಳಲ್ಲಿ ಯೋಗಿ ಬ್ಯುಸಿಯಾಗಲಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!