Wednesday , December 12 2018
ಕೇಳ್ರಪ್ಪೋ ಕೇಳಿ
Home / Film News / ಕೊಪ್ಪಳದಲ್ಲಿ ಬಾಹುಬಲಿ 2 ಟೀಂ…?

ಕೊಪ್ಪಳದಲ್ಲಿ ಬಾಹುಬಲಿ 2 ಟೀಂ…?

ಕೊಪ್ಪಳ : ಭಾರೀ ಕುತೂಹಲ ಮೂಡಿಸಿರುವ `ಬಾಹುಬಲಿ 2′ ಚಿತ್ರ ಕ್ಲೈಮ್ಯಾಕ್ಸ್ ಹಂತದಲ್ಲಿದೆ. ಈ ನಡುವೆ, ರಾಜಮೌಳಿ ಈ ಚಿತ್ರದ ಶೂಟಿಂಗ್ ಕರ್ನಾಟಕದಲ್ಲಿ ಮಾಡಲು ನಿರ್ಧರಿಸಿದ್ದಾರಾ? ಎಂಬ ಪ್ರಶ್ನೆ ಕೇಳಿಬರುತ್ತಿದೆ.

koppala anjanadri (1) koppala anjanadri (2) koppala anjanadri (3) koppala anjanadriಸದ್ಯ ಹರಿದಾಡುತ್ತಿರುವ ಸುದ್ದಿಯನ್ನೇ ನಂಬುವುದಾದರೆ ಬಾಹುಬಲಿ 2 ಚಿತ್ರದ ಶೂಟಿಂಗ್ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಐತಿಹಾಸಿ ಅಂಜನಾದ್ರಿ ಬೆಟ್ಟ, ಪಂಪಾ ಸರೋವರ ಮತ್ತು ಕಿಷ್ಕಿಂದಾ ಪ್ರದೇಶದಲ್ಲಿ ನಡೆಯಲಿದೆ. ಯಾಕೆಂದರೆ, ಈ ಮೂರೂ ಪ್ರದೇಶಗಳಿಗೆ ಬಾಹುಬಲಿ ಟೀಂ ಭೇಟಿ ನೀಡಿದೆ. ಲೊಕೇಷನ್ ನೋಡಿಕೊಳ್ಳುವ ಸಲುವಾಗಿಯೇ ಬಾಹುಬಲಿ ತಂಡ ಇಲ್ಲಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.

ಸುಮಾರು 8 ಜನರಿದ್ದ ಚಿತ್ರತಂಡ ಈ ಪ್ರದೇಶಗಳಿಗೆ ತೆರಳಿ ಅಲ್ಲಿನ ಸುಂದರ ಜಾಗಗಳ ಫೋಟೋ ತೆಗೆದುಕೊಂಡು ಹೋಗಿದೆ ಎಂದು ಹೇಳಲಾಗುತ್ತಿದೆ. ಯುದ್ಧದ ಸನ್ನಿವೇಶ ಈ ಪ್ರದೇಶದಲ್ಲೇ ಚಿತ್ರೀಕರಣವಾಗಲಿದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ. ಸ್ಥಳೀಯರು ಹೇಳುವ ಪ್ರಕಾರ ಪ್ರವಾಸಿಗರಂತೆ ಈ ಚಿತ್ರತಂಡ ಬಂದಿದ್ದು, ಇವರು ತೆಲುಗು ಮಾತನಾಡುತ್ತಿದ್ದರು. ಇದನ್ನು ಕಂಡು ಇವರು ಬಾಹುಬಲಿ ತಂಡದವರೇ ಇರಬಹುದೇನೋ ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಆದರೆ, ಬಾಹುಬಲಿ ತಂಡ ಈ ಬಗ್ಗೆ ಯಾವುದೇ ಸ್ಪಷ್ಟನೆಯನ್ನು ಕೊಟ್ಟಿಲ್ಲ. ಹೀಗಾಗಿ, ಸದ್ಯಕ್ಕೆ ಇದು ವದಂತಿ… ಭವಿಷ್ಯದಲ್ಲಿ ಇದರ ಸತ್ಯಾಸತ್ಯತೆ ಏನು ಎಂದು ಗೊತ್ತಾಗಲಿದೆ…

About sudina

Check Also

ಕಾಂಪ್ರಮೈಸ್ ಪ್ರಶ್ನೆಯೇ ಇಲ್ಲ : ಅರ್ಜುನ್ – ಕ್ಷಮೆ ಕೇಳೋಲ್ಲ : ಶ್ರುತಿ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಮೀ ಟೂ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ …

Leave a Reply

Your email address will not be published. Required fields are marked *

error: Content is protected !!