Monday , January 21 2019
ಕೇಳ್ರಪ್ಪೋ ಕೇಳಿ
Home / Film News / ತಮಿಳು ಸ್ಟಾರ್ ಅಜಿತ್ 57ನೇ ಫಿಲಂ ಲಾಂಚ್

ತಮಿಳು ಸ್ಟಾರ್ ಅಜಿತ್ 57ನೇ ಫಿಲಂ ಲಾಂಚ್

ಚೆನ್ನೈ: ತಮಿಳು ಸ್ಟಾರ್ ಅಜಿತ್ ಕುಮಾರ್ 57ನೇ ಫಿಲಂ ಲಾಂಚ್ ಆಗಿದೆ. ಅಜಿತ್ ಮುಂದಿನ ಚಿತ್ರದ ಹೆಸರು `ತಲಾ 57′. ಅಜಿತ್‍ರನ್ನು ಅಭಿಮಾನಿಗಳು ಪ್ರೀತಿಯಿಂದ `ತಲೆ’ ಎಂದು ಕರೆಯುತ್ತಾರೆ.

ಈ ಚಿತ್ರ ಪತ್ತೆದಾರಿ ಚಿತ್ರವಾಗಿದೆ. ಈ ಚಿತ್ರವನ್ನು ಶಿವ ನಿರ್ದೇಶಿಸುತ್ತಿದ್ದಾರೆ. ಶಿವ ಮತ್ತು ಅಜಿತ್ ಕ್ಯಾಂಬಿನೇಷನ್‍ನಲ್ಲಿ ಬರುತ್ತಿರುವ ಮೂರನೇ ಚಿತ್ರವಿದು. ಈ ಹಿಂದೆ ವೀರಂ ಮತ್ತು ವೇಲಾಯುಧಂ ಚಿತ್ರದಲ್ಲಿ ಇವರಿಬ್ಬರು ಒಟ್ಟಿಗೆ ಕೆಲಸ ಮಾಡಿದ್ದರು.

ಈ ತಿಂಗಳಾಂತ್ಯದಲ್ಲಿ ಈ ಚಿತ್ರದ ಶೂಟಿಂಗ್ ಆರಂಭವಾಗುವ ಸಾಧ್ಯತೆ ಇದೆ. ಮೊದಲ ಹಂತದ ಶೂಟಿಂಗ್ ಬಲ್ಗೇರಿಯಾದಲ್ಲಿ ನಡೆಸಲು ಚಿತ್ರತಂಡ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಇನ್ನು, ಚಿತ್ರದ ಇತರ ಕಲಾವಿದರ ಆಯ್ಕೆ ಇನ್ನೂ ಅಂತಿಮವಾಗಿಲ್ಲ. ಒಂದು ಮೂಲಗಳ ಪ್ರಕಾರ ಅನುಷ್ಕಾ ಶೆಟ್ಟಿ ಇಲ್ಲಿ ಅಜಿತ್‍ಗೆ ನಾಯಕಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಜಿತ್ ಈ ಚಿತ್ರದಲ್ಲಿ ಇಂಟರ್‍ನ್ಯಾಷನಲ್ ಇನ್ವೆಷ್ಟಿಗೇಷನ್ ಆಫೀಸರ್ ಪಾತ್ರವನ್ನು ನಿರ್ವಹಿಸಲಿದ್ದಾರೆ.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!